ಬೆಂಗಳೂರು ಪವರ್ ಕಟ್, ಶನಿವಾರ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ! - Bengaluru Power Cut Today
ಜುಲೈ 26 ಶನಿವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ತುರ್ತು ನಿರ್ವಹಣಾ ಕಾಮಗಾರಿ, ಜೋರಾಗಿ ಬರುವ ಮಳೆ ಕಾರಣ. ಬೆಸ್ಕಾಂ ಮುನ್ನೆಚ್ಚರಿಕೆ ಸೂಚನೆ ನೀಡಿದೆ.

- ಶನಿವಾರ ಬೆಂಗಳೂರಿನ ಕೆಲವಡೆ ಪವರ್ ಕಟ್ ಆಗಲಿದೆ
- ಆನ್ಲೈನ್ ಸೇವೆಗಳು ಮೂರು ದಿನ ಲಭ್ಯವಿಲ್ಲ
- ತುರ್ತು ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ
ಬೆಂಗಳೂರು (Bengaluru) ನಲ್ಲಿ ಜುಲೈ 26ರ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ (BESCOM) ನೀಡಿರುವ ಮಾಹಿತಿ ಪ್ರಕಾರ, IISC ಉಪಕೇಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ. ಇದು ಕೆಪಿಟಿಸಿಎಲ್ (KPTCL) ವತಿಯಿಂದ ಕೈಗೊಳ್ಳುತ್ತಿರುವ ತುರ್ತು ನಿರ್ವಹಣಾ ಕಾರ್ಯದ ಭಾಗವಾಗಿದೆ.
ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ರಂಗನಾಥಪುರ, ವೈಯಾಲಿಕಾವಲ್, ಬಿಎಚ್ಇಎಲ್, ಶರೀಫ್ ನಗರ, ಯೆಲಹಂಕ ಪೈಪ್ ಲೈನ್ ರಸ್ತೆ, ಐಐಎಸ್ ಸಿ ಬ್ರೈನ್ ಸೆಂಟರ್ ಸೇರಿದಂತೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಹವಾಮಾನ ಇಲಾಖೆಯಿಂದ ನಿರೀಕ್ಷೆ ಮಾಡಿರುವ ಭಾರೀ ಮಳೆ ಪರಿಸ್ಥಿತಿಗೂ ಬೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ! ಶೂರಿಟಿ ಇಲ್ಲದೇ ₹5 ಲಕ್ಷವರೆಗೆ ಸಾಲ
ಇದೆ ವೇಳೆ, ಸಿದ್ಧತೆಗಾಗಿ ನಿವಾಸಿಗಳಿಗೆ ಮೊಬೈಲ್ (mobile), ಲ್ಯಾಪ್ಟಾಪ್ (laptop), ಪವರ್ ಬ್ಯಾಂಕ್ (power bank) ಮುಂತಾದ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವ ಸಲಹೆ ನೀಡಲಾಗಿದೆ. ಜೊತೆಗೆ, ವಿದ್ಯುತ್ ಉಪಕರಣಗಳ ಅವಲಂಬನೆ ಇಲ್ಲದಂತೆ ಇರಲು ಎಚ್ಚರಿಕೆ ನೀಡಲಾಗಿದೆ.
ಇನ್ನು ಒಂದು ಮಹತ್ವದ ಮಾಹಿತಿ ಅಂದರೆ, ಐಟಿ (IT) ವ್ಯವಸ್ಥೆ ಉನ್ನತೀಕರಣದ ಹಿನ್ನೆಲೆ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕ್ ಹಾಗೂ ಹೆಸ್ಕಾಂ ಎಂಬ ಐದು ಕಂಪನಿಗಳ ಆನ್ಲೈನ್ (online) ಸೇವೆಗಳು ಜುಲೈ 25ರ ರಾತ್ರಿ 8.30 ರಿಂದ ಜುಲೈ 27ರ ರಾತ್ರಿ 10 ಗಂಟೆಯವರೆಗೆ ಲಭ್ಯವಿರುವುದಿಲ್ಲ.
ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ ಹಾಗೂ ಹೊಸ ಸಂಪರ್ಕ ಪಡೆಯುವ ಸೇವೆಗಳನ್ನು ಆನ್ಲೈನ್ ಮೂಲಕ ಬಳಸಲಾಗದು. ಬೆಂಗಳೂರು ನಗರ ಸೇರಿದಂತೆ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ದಾವಣಗೆರೆ, ಚನ್ನಪಟ್ಟಣ, ಶಿಡ್ಲಘಟ್ಟ, ಚಿತ್ರದುರ್ಗ, ತಿಪಟೂರು ಮುಂತಾದ ಉಪ ವಿಭಾಗಗಳಲ್ಲಿ ಈ ವ್ಯತ್ಯಯ ಇರುತ್ತದೆ.
ವಿದ್ಯುತ್ ಪೂರೈಕೆಯ ವ್ಯತ್ಯಯ ಹಾಗೂ ಆನ್ಲೈನ್ ಸೇವೆಗಳ ಸ್ಥಗಿತವಿರುವ ಕಾರಣ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ತೊಂದರೆ ತಪ್ಪಿಸಿಕೊಳ್ಳಬೇಕು.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Bengaluru Power Cut Alert, Several Areas to Face Outage on Saturday




