ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಬಂತು ನೋಡಿ ಗುಡ್ ನ್ಯೂಸ್!

ಜನವರಿ 14ರ ಮಕರ ಸಂಕ್ರಾಂತಿ ಅಂದು 16ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವಂತಹ ನಿರ್ಧಾರವನ್ನು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರ ಸಂಖ್ಯೆ ಹೆಚ್ಚಳ
  • 16ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮೂಲಕ ಹಬ್ಬದ ಕೊಡುಗೆ
  • ಗೃಹಲಕ್ಷ್ಮಿ ಯೋಜನೆಯ ಹಣ ಬೇಕು ಅಂದ್ರೆ ಇ- ಕೆವೈಸಿ ಮಾಡಿಕೊಳ್ಳಿ

Gruha Lakshmi Scheme : ಕರ್ನಾಟಕ ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದಲ್ಲಿ ಈ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿರುವಂತಹ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ಗೊಳಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ (Karnataka Government) ಮಾಡುತ್ತಿದೆ. ಈಗಾಗಲೇ 15 ಕಂತಿನ ಹಣವನ್ನು ವಿತರಿಸಲಾಗಿದ್ದು 16ನೇ ಕಂತಿನ ಹಣದ ಬಗ್ಗೆ ಈಗ ಹೊಸ ಅಪ್ಡೇಟ್ ಸಿಕ್ಕಿದೆ.

ರೇಷನ್ ಕಾರ್ಡ್ ನಲ್ಲಿ ಕರೆಕ್ಷನ್ ಮಾಡೋಕೆ ಬಂತು ಬಿಗ್ ಅಪ್ಡೇಟ್! ಏನೆಲ್ಲಾ ಬೇಕು?

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ

ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಗೆ ಈಗಾಗಲೇ 16ನೇ ಕಂತಿನ ಹಣವನ್ನು ಹಣಕಾಸು ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ ಎನ್ನುವದಾಗಿ ತಿಳಿದು ಬಂದಿದ್ದು, ಜನವರಿ 14ರ ಮಕರ ಸಂಕ್ರಾಂತಿ ಅಂದು ಈ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ವರ್ಗಾವಣೆ ಮಾಡುವಂತಹ ನಿರ್ಧಾರವನ್ನು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಬಂತು ನೋಡಿ ಗುಡ್ ನ್ಯೂಸ್!

ಇದುವರೆಗೂ 15 ಕಂತುಗಳಿಂದ ಒಟ್ಟಾರೆ ಪ್ರತಿಯೊಬ್ಬ ಮಹಿಳೆ 30,000 ಹಣವನ್ನು ಪಡೆದುಕೊಂಡಿದ್ದಾರೆ.

Gruha Lakshmi Schemeನಿಮ್ಮ ಖಾತೆಗೆ ಹಣ ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಬರಬೇಕು ಅಂತ ಇದ್ರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುವಂತಹ ಪ್ರಕ್ರಿಯೆ ಆಗಿರುತ್ತದೆ ಅನ್ನೋದನ್ನ ನೆನಪಿನಲ್ಲಿಡಿ.

ಇದರ ಜೊತೆಗೆ ನಿಮ್ಮ ಇ- ಕೆವೈಸಿ ಪ್ರೊಸೀಜರ್ ಕೂಡ ಕಂಪ್ಲೀಟ್ ಆಗಬೇಕಾಗಿದೆ. ಇದಿಷ್ಟು ಆಗಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಎರಡು ಸಾವಿರ ರೂಪಾಯಿ ಹಣ ನಿಮ್ಮ ಖಾತೆಗೆ ನೇರವಾಗಿ ನಿಗದಿತ ದಿನಾಂಕದಂದು ವರ್ಗಾವಣೆ ಆಗುತ್ತದೆ.

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯಿಂದ ಪಡೆದುಕೊಳ್ಳುವಂತಹ ಸಹಾಯಧನದ ಮೂಲಕ ರಾಜ್ಯದ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡಿದ್ದಾರೆ ಹಾಗೂ ಅವರ ಉಳಿತಾಯ ಕೂಡ ಇನ್ನಷ್ಟು ಹೆಚ್ಚಾಗಿದೆ ಅನ್ನೋದಾಗಿ ತಿಳಿದು ಬಂದಿದೆ. ಇದು ಸಾಮಾಜಿಕ ಸ್ಥಿತಿಗತಿಗಳಲ್ಲಿ ಕೂಡ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತಂದಿದೆ.

Big Update About the 16th Installment of the Gruha Lakshmi Scheme

Related Stories