ಫ್ರೀ ಬಸ್ ಸೌಲಭ್ಯ! ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಪ್ರಮುಖ ನಿರ್ಧಾರ
ಮೊದಲೆಲ್ಲಾ ಜನರು ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವುದು ಎಂದರೆ ಮೂಗು ಮುರಿಯುತ್ತಿದ್ದರು. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಸರ್ಕಾರ ಕೊಡುತ್ತಿರುವ ಕೊಡುಗೆಗಳಿಂದ ಜನರೇ ಹುಡುಕಿಕೊಂಡು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ತಮಗೆ ಸರ್ಕಾರಿ ಬಸ್ ಗಳೇ ಬೇಕು ಎಂದು ಬರುತ್ತಿದ್ದಾರೆ.
ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ನಿಮಗೆ ಬರಲ್ಲ! ಇಲ್ಲಿದೆ ಡೀಟೇಲ್ಸ್ ತಿಳಿಯಿರಿ
ಹೊಸ ಸೂಚನೆ
ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Facility) ಸಿಕ್ಕ ಬಳಿಕ, ಬಸ್ ನಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಈ ವೇಳೆ ಸರ್ಕಾರ ಪ್ರಯಾಣಿಕರ ಹಿತಾಸಕ್ತಿಯನ್ನು ಅವರ ಪ್ರೊಟೆಕ್ಷನ್ ಅನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. ಹಾಗಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪ್ರಮುಖ ತೀರ್ಮಾನ ತೆಗೆದುಕೊಂಡು ಮಾಧ್ಯಮಗಳಿಗೆ ಮುಖ್ಯವಾದ ಮಾಹಿತಿ ನೀಡಿದ್ದು, ಇನ್ನುಮುಂದೆ ಸಿಸಿಟಿವಿ ಕ್ಯಾಮೆರಾ (CCTV Camera) ಇರುವ ಬಸ್ ಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಸಿಸಿಟಿವಿ ಯಾಕೆ?
ಮೊದಲನೆಯದಾಗಿ ಜನರು ಸುರಕ್ಷಿತವಾಗಿ ಪ್ರಯಾಣ ಮಾಡಲಿ ಎನ್ನುವುದು ಸರ್ಕಾರದ ಉದ್ದೇಶ. ಮತ್ತೊಂದು ಪ್ರಮುಖ ಉದ್ದೇಶ ಅಪಘಾತಗಳ ಬಗ್ಗೆ ತಿಳಿಯುವುದು, ಈಗ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ರಸ್ತೆ ಅಪಘಾತ ಮಾಡಿದವರು ಯಾರು ಎಂದು ಸರಿಯಾಗಿ ಗೊತ್ತಾಗುವುದಿಲ್ಲ. ಹಾಗಾಗಿ ಸರ್ಕಾರವು ಈ ಒಂದು ನಿರ್ಧಾರ ತೆಗೆದುಕೊಂಡಿದೆ. ಬಸ್ ನಲ್ಲಿ ಸಿಸಿಟಿವಿ ಮತ್ತು GPS ಟ್ರಾಕಿಂಗ್ ವ್ಯವಸ್ಥೆ ಇದ್ದರೆ, ಇದೆಲ್ಲವನ್ನು ತಿಳಿಯಬಹುದು. ಜೊತೆಗೆ ಸರ್ಕಾರಿ ಬಸ್ ಎಲ್ಲೆಲ್ಲಿ ಹೋಗುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತದೆ.
ರದ್ದಾಗಲಿದೆ ಇಂತಹ ಜನರ ಬಿಪಿಎಲ್ ರೇಷನ್ ಕಾರ್ಡ್! ಮುಲಾಜಿಲ್ಲ ಸರ್ಕಾರದಿಂದ ಖಡಕ್ ವಾರ್ನಿಂಗ್
ಆಕ್ಸಿಡೆಂಟ್ ಆದಾಗ ಸರ್ಕಾರ ಬಸ್ ಚಾಲಕರ ತಪ್ಪು ಇಲ್ಲದಿದ್ದರೂ ಜನರು ಪರಿಹಾರ ಕೇಳುತ್ತಿದ್ದು, ಹೀಗೆ ಕೊಡಬೇಕಾದ ಪರಿಹಾರದ ಮೊತ್ತ 63 ಕೋಟಿಗಿಂತ ಜಾಸ್ತಿ ಇದೆ. ಬಸ್ ಡ್ರೈವರ್ ಗಳು ಅಪರಾಧ ಮಾಡಿಲ್ಲ ಎನ್ನುವುದಕ್ಕೆ ಯಾವ ಸಾಕ್ಷಿ ಕೂಡ ಇರುವುದಿಲ್ಲ. ಹಾಗೆಯೇ ಬಸ್ ನಲ್ಲಿ ಪ್ರಯಾಣ ಮಾಡುವಾಗ ಜನರ ನೂಕು ನುಗ್ಗಲು, ಕೆಲವರ ಅನುಚಿತ ವರ್ತನೆ, ರಾಷ್ ಡ್ರೈವಿಂಗ್ ಇದೆಲ್ಲವನ್ನು ನೋಡಬಹುದು. ಹಾಗಾಗಿ ರಾಜ್ಯದಲ್ಲಿ 425 ಸಿಸಿಟಿವಿ ಹಾಗೂ GPS ಟ್ರ್ಯಾಕಿಂಗ್ ಇರುವ ಬಸ್ ಗಳನ್ನು ಪರಿಚಯಿಸಲು ಮುಂದಾಗಿದೆ ಸರ್ಕಾರ.
ಹೊಸ ವ್ಯವಸ್ಥೆ
ಆದರೆ ಈಗ ಸರ್ಕಾರ ತೆಗೆದುಕೊಂಡಿರುವ ಹೊಸ ನಿರ್ಧಾರದಿಂದ, ಸರ್ಕಾರಿ ಬಸ್ ಗಳ ಮುಂಭಾಗ ಮತ್ತು ಹಿಂಭಾಗ ಎರಡು ಕಡೆ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಎರಡು ಕಡೆಯ ಫುಟೇಜ್ ಪಡೆದರೆ ತಪ್ಪು ಯಾರದ್ದು ಎಂದು ಗೊತ್ತಾಗುತ್ತದೆ. ಸಿಸಿಟಿವಿಗಳಲ್ಲಿ 1TB ಸ್ಟೋರೇಜ್ ಅಷ್ಟು ಫುಟೇಜ್ ಸಂಗ್ರಹ ಮಾಡಬಹುದು. ಪೆನ್ ಡ್ರೈವ್ ಇಂದ ಪಡೆಯಬಹುದು. ಇಷ್ಟು ಸೌಲಭ್ಯಗಳು ಇರುವ ಕಾರಣ ಸರ್ಕಾರವು ಈ ನಿರ್ಧಾರಕ್ಕೆ ಮುಂದಾಗಿದೆ.
ಏನೇ ಮಾಡಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ವಾ? ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ
Big update for Free bus facility Shakti Yojana, Govt important decision