ಬಿಎಂಟಿಸಿ ಸ್ಟೂಡೆಂಟ್ ಬಸ್ ಪಾಸ್‌ ವಿತರಣೆ ಆರಂಭ! ಬಾಲಕಿಯರು ಪಡೆಯಬೇಕಾ?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ ವಿತರಣೆಯನ್ನು ಜೂನ್ 1ರಿಂದ ಆರಂಭಿಸುತ್ತಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಮೇ 26ರಿಂದಲೇ ಆರಂಭವಾಗಿದೆ. ವಿವಿಧ ತರಗತಿಗಳಿಗೆ ಪ್ರತ್ಯೇಕ ಶುಲ್ಕ ನಿಗದಿಯಾಗಿದೆ.

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಲಭ
  • ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣ
  • ಪಾಸ್ ಕಳೆದುಹೋದರೆ ಮತ್ತೆ ಪಡೆಯುವ ಅವಕಾಶ

ಬೆಂಗಳೂರು (Bengaluru): ವಿದ್ಯಾರ್ಥಿಗಳಿಗೆ ಬಿಎಂಟಿಸಿ ಪಾಸ್ (BMTC Student Bus Pass) ಪಡೆಯುವಿಕೆ ಈಗ ಬಹಳ ಸುಲಭವಾಗಿದೆ. ಮೆಜೆಸ್ಟಿಕ್, ಶಾಂತಿನಗರ, ಇಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಪ್ರಮುಖ ಬಿಎಂಟಿಸಿ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6:30ರವರೆಗೆ ಪಾಸ್ ವಿತರಣೆಯಾಗಲಿದೆ.

ಪಾಸ್ ಕಳೆದುಹೋದರೆ, ಹಾಳಾದರೆ ಅಥವಾ ಮಾರ್ಗ ಬದಲಾವಣೆಯಾದರೆ, ಕೆಂಪೇಗೌಡ ಬಸ್ ನಿಲ್ದಾಣದ ಪಾಸ್ ಕೌಂಟರ್‌ಗೆ ಭೇಟಿ ನೀಡಬೇಕು. ಹೊಸ ಪಾಸ್ ಪಡೆಯಲು ಅಥವಾ ನಕಲು ಪಾಸ್ ಬೇಕಾದರೆ ಪೊಲೀಸ್‌ ದೂರು, ಪಾವತಿ ರಸೀದಿ ಬೇಕಾಗುತ್ತದೆ.

ಆನ್‌ಲೈನ್ ಅರ್ಜಿ ಸೇವಾ ಸಿಂಧು ಪೋರ್ಟಲ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಆಧಾರ್ ಅಂಶದ ಮೂಲಕ ಪೋರ್ಟಲ್‌ನಲ್ಲಿ (online registration) ನೋಂದಾಯಿಸಿಕೊಂಡು, ಆ ಬಳಿಕ ಯೂಸರ್ ನೆಮ್ (User Name) ಮತ್ತು ಪಾಸ್‌ವರ್ಡ್ (Password) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ, ಆದರೆ ಬೆಂಗಳೂರು ಒನ್‌ ಕೇಂದ್ರದ ಮೂಲಕ ಸಲ್ಲಿಸಿದರೆ ₹30 ಸೇವಾ ಶುಲ್ಕ ಪಾವತಿಸಬೇಕು.

ಇದನ್ನೂ ಓದಿ: ಬೆಂಗಳೂರು ದಿವ್ಯ ದರ್ಶನ ಟೂರ್ ಪ್ಯಾಕೇಜ್! 8 ದೇವಾಲಯಗಳ ಒನ್ ಡೇ ಟ್ರಿಪ್

ಪಾಸ್ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಬಿಎಂಟಿಸಿ ಅರ್ಜಿಯನ್ನು ಪರಿಶೀಲಿಸಿದ ನಂತರ, ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ಪಾಸ್ ವಿತರಣೆ ಸ್ಥಳ ಹಾಗೂ ದಿನಾಂಕ ಆಯ್ಕೆ ಮಾಡಬಹುದು. ಪಾಸ್ ಪಡೆಯಲು, ಶಾಲಾ ಗುರುತಿನ ಚೀಟಿ ಅಥವಾ ಪಾವತಿಸಿದ ರಸೀದಿ ಅಥವಾ ದೃಢೀಕರಣ ಪತ್ರ ಅಗತ್ಯ.

ಪಾಸ್ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಇವು:

ಹೆಸರು, ಎಸ್‌ಎಟಿಎಸ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ, ಪಾಸ್‌ಪೋರ್ಟ್ ಗಾತ್ರದ ಫೋಟೋ, ತಂದೆ-ತಾಯಿ ಹೆಸರು, ದೂರವಾಣಿ ಸಂಖ್ಯೆ, ಹಾಸ್ಟೆಲ್ ವಿಳಾಸ (ಇದ್ದರೆ), ಶಿಕ್ಷಣ ಸಂಸ್ಥೆ ಹೆಸರಿನೊಂದಿಗೆ ಪೋಷಕರ ಸಹಿ ಮತ್ತು ಶಾಲೆಯ ದೃಢೀಕರಣ ಅಗತ್ಯ.

ಇದನ್ನೂ ಓದಿ: ಸ್ಥಗಿತಗೊಂಡಿದ್ದ ಸೈಟ್ ರಿಜಿಸ್ಟ್ರೇಷನ್ ನೋಂದಣಿ ಪ್ರಕ್ರಿಯೆ ಮತ್ತೆ ಆರಂಭ

BMTC Student Bus Pass

ಯಾರಿಗೆ ಪಾಸ್ ಲಭ್ಯ?

ಶಾಲಾ ವಿದ್ಯಾರ್ಥಿಗಳಿಂದ ಪಿಎಚ್‌ಡಿ ವಿದ್ಯಾರ್ಥಿಗಳವರೆಗೆ ಪಾಸ್ ಲಭ್ಯವಿದೆ. ಸಂಜೆ ಕಾಲೇಜು, ಐಟಿಐ, ವೈದ್ಯಕೀಯ, ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕೂಡ ಈ ಸೌಲಭ್ಯವಿದೆ.

ಶಕ್ತಿ ಯೋಜನೆಯಿಂದ ಉಚಿತ ಪಾಸ್:

ಕರ್ನಾಟಕ ರಾಜ್ಯದ ಮಹಿಳಾ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಡಿ ಯಾವುದೇ ಪಾಸು ಪಡೆಯಬೇಕಾಗಿಲ್ಲ. ಅವರು ಬಿಎಂಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಈ ಸೌಲಭ್ಯವು (Karnataka Residents only) ಕರ್ನಾಟಕ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯಲ್ಲಿ ಫಿಲ್ಟರ್! ಅನರ್ಹರಿಗೆ ಕಡಿವಾಣ

ಬೆರೆ ರಾಜ್ಯದ ವಿದ್ಯಾರ್ಥಿಗಳಿಗೆ:

ಇತರ ರಾಜ್ಯದಿಂದ ಆಗಮಿಸಿರುವ ವಿದ್ಯಾರ್ಥಿಗಳು, ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಅವರು ತಾವು ಸೇರಿದ ವರ್ಗದ ಪಾಸ್‌ ಶುಲ್ಕವನ್ನು ಪಾವತಿಸಿ ಪಾಸ್‌ ಪಡೆಯಬೇಕು.

BMTC Student Bus Pass

ಪಾಸ್ ಶುಲ್ಕ ವಿವರ

ಕ್ರ.ಸಂ. ಪಾಸ್ ಮಾದರಿ ಮಾನ್ಯತಾ ಅವಧಿ ಪಾಸ್ ದರ
1 1 ರಿಂದ 7ನೇ ತರಗತಿ ಜೂನ್ 2025 – ಮಾರ್ಚ್ 2026 ₹150
2 8-10 ತರಗತಿ ಬಾಲಕರಿಗೆ ಜೂನ್ 2025 – ಮಾರ್ಚ್ 2026 ₹750
3 8-10 ತರಗತಿ ಬಾಲಕಿಯರಿಗೆ ಜೂನ್ 2025 – ಮಾರ್ಚ್ 2026 ₹550
4 ಪಿಯುಸಿ ಜೂನ್ 2025 – ಮಾರ್ಚ್ 2026 ₹1050
5 ಪಿಯುಸಿ ಸಂಜೆ ಕಾಲೇಜು ಜೂನ್ 2025 – ಮಾರ್ಚ್ 2026 ₹1630
6 ಐಟಿಐ, ಪದವಿ, ಸ್ನಾತಕೋತ್ತರ ಜುಲೈ 2025 – ಜೂನ್ 2026 ₹1300
7 ತಾಂತ್ರಿಕ, ವೈದ್ಯಕೀಯ ಆಗಸ್ಟ್ 2025 – ಜುಲೈ 2026 ₹1830
8 ಸಂಜೆ ಕಾಲೇಜು, ಪಿಎಚ್‌ಡಿ ಜುಲೈ 2025 – ಜೂನ್ 2026 ₹1630
9 ಪರಿಶಿಷ್ಟ ಜಾತಿ ಪಂಗಡ ಅನ್ವಯವಾಗುವ ತರಗತಿಗೆ ₹150

BMTC Student Pass Issued, Apply Online Now

English Summary

Related Stories