ಭಾರೀ ಬೇಡಿಕೆ ಸೃಷ್ಟಿಸಿದೆ ಬಿಪಿಎಲ್ ಕಾರ್ಡ್! ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ ಸಲ್ಲಿಕೆ ಆಗಿದೆ ಗೊತ್ತಾ?

ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತೊಂದರೆಗಳು ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಪಿಎಲ್ ರೇಷನ್ ಕಾರ್ಡ್ ಗೆ (Ration Card) ಅರ್ಜಿ ಸಲ್ಲಿಸುತ್ತಿದ್ದಾರೆ.

Bengaluru, Karnataka, India
Edited By: Satish Raj Goravigere

ಪ್ರಸ್ತುತ ನಮ್ಮ ರಾಜ್ಯದಲ್ಲಿ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದರೆ, ಅದಕ್ಕಾಗಿ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರಲೇಬೇಕು. ಹಲವಾರು ಜನರು ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಕಾರ್ಡ್ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಕಾಯುತ್ತಿದ್ದರು, ಅಂಥವರಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕೂಡ ಸರ್ಕಾರ ನೀಡಿತು.

ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತೊಂದರೆಗಳು ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಪಿಎಲ್ ರೇಷನ್ ಕಾರ್ಡ್ ಗೆ (Ration Card) ಅರ್ಜಿ ಸಲ್ಲಿಸುತ್ತಿದ್ದಾರೆ.

Demand for BPL ration card, Here is the update When will the new ration card be issued

ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ, ಸರ್ಕಾರದಿಂದ ಸಿಗುವ ಅನೇಕ ಸೇವೆಗಳನ್ನು ಪಡೆದುಕೊಳ್ಳಬಹುದು. ಯೋಜನೆಗಳ ಸೌಲಭ್ಯ, ಸರ್ಕಾರದಿಂದ ಆರ್ಥಿಕ ಸಹಾಯ, ಉಚಿತ ಪಡಿತರ, ಉಚಿತ ಆರೋಗ್ಯ ಸೇವೆ ಹೀಗೆ ಅನೇಕ ಸೇವೆಗಳು ಸರ್ಕಾರದಿಂದ ಸಿಗುತ್ತದೆ.

ಗೃಹಜ್ಯೋತಿ ಫ್ರೀ ಕರೆಂಟ್ ಬೇಕಾದ್ರೆ ಮೊದಲು ಡಿ-ಲಿಂಕ್ ಮಾಡಿಸಿ ಮತ್ತೆ ಅರ್ಜಿ ಸಲ್ಲಿಸಿ! ಬಿಗ್ ಅಪ್ಡೇಟ್

ಹಾಗಾಗಿ ಹೆಚ್ಚು ಜನರು ಬಿಪಿಎಲ್ ರೇಷನ್ ಕಾರ್ಡ್ (Ration Card) ಪಡೆದುಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಸರ್ಕಾರ ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿ ಕೊಡುತ್ತಿದ್ದ ಹಾಗೆಯೇ ಸುಮಾರು 3,22,483 ಅರ್ಜಿಗಳು ಸಲ್ಲಿಕೆ ಆಗಿದೆ. ಇನ್ನು ಯಾವ ಜಿಲ್ಲೆಯಲ್ಲಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಅಂಕಿ ಅಂಶ ನೋಡುವುದಾದರೆ.

ಬಾಗಲಕೋಟೆಯಲ್ಲಿ 13,335 ಅರ್ಜಿಗಳು, ಬಳ್ಳಾರಿಯಲ್ಲಿ 10,501 ಅರ್ಜಿಗಳು, ಬೆಂಗಳೂರು ಪೂರ್ವದಲ್ಲಿ 6082 ಅರ್ಜಿಗಳು, ಬೆಂಗಳೂರು ಉತ್ತರದಲ್ಲಿ 4,747 ಅರ್ಜಿಗಳು, ಬೆಂಗಳೂರು ಪಶ್ಚಿಮದಲ್ಲಿ 4794 ಅರ್ಜಿಗಳು, ಬೆಂಗಳೂರು ದಕ್ಷಿಣದಲ್ಲಿ 11,010 ಅರ್ಜಿಗಳು, ಬೆಳಗಾವಿಯಲ್ಲಿ 32,880 ಅರ್ಜಿಗಳು, ಬೆಂಗಳೂರು ನಗರದಲ್ಲಿ 16,438 ಅರ್ಜಿಗಳು, ಬೆಂಗಳೂರು ಗ್ರಾಮಾಂತರದಲ್ಲಿ 7,041 ಅರ್ಜಿಗಳು, ಬೀದರ್‌ ನಲ್ಲಿ 18,262 ಅರ್ಜಿಗಳು,
ಚಾಮರಾಜನಗರದಲ್ಲಿ 3,639 ಅರ್ಜಿಗಳು..

ಚಿಕ್ಕಬಳ್ಳಾಪುರದಲ್ಲಿ 5,356 ಅರ್ಜಿಗಳು, ಚಿಕ್ಕಮಗಳೂರಿನಲ್ಲಿ 3,628 ಅರ್ಜಿಗಳು, ಚಿತ್ರದುರ್ಗದಲ್ಲಿ 6,432 ಅರ್ಜಿಗಳು, ದಕ್ಷಿಣ ಕನ್ನಡದಲ್ಲಿ 4,879 ಅರ್ಜಿಗಳು, ದಾವಣಗೆರೆಯಲ್ಲಿ 4,879 ಅರ್ಜಿಗಳು,

ನಿಮ್ಮ ಗ್ರಾಮಕ್ಕೆ ರಸ್ತೆ, ನಿಮ್ಮ ಜಮೀನಿಗೆ ದಾರಿ ಇರುವ ಗ್ರಾಮನಕ್ಷೆ ಬಿಡುಗಡೆ, ಡೌನ್ಲೋಡ್ ಮಾಡಿಕೊಳ್ಳಿ!

ಧಾರವಾಡದಲ್ಲಿ 11,575 ಅರ್ಜಿಗಳು, ಗದಗದಲ್ಲಿ 9,881 ಅರ್ಜಿಗಳು,

ಹಾಸನದಲ್ಲಿ 5,452 ಅರ್ಜಿಗಳು, ಹಾವೇರಿಯಲ್ಲಿ 11,094 ಅರ್ಜಿಗಳು, ಕಲಬುರ್ಗಿಯಲ್ಲಿ 26,898 ಅರ್ಜಿಗಳು, ಕೊಡಗಿನಲ್ಲಿ 1,583 ಅರ್ಜಿಗಳು, ಕೋಲಾರದಲ್ಲಿ 5,006 ಅರ್ಜಿಗಳು, ಕೊಪ್ಪಳದಲ್ಲಿ 8,506 ಅರ್ಜಿಗಳು, ಮಂಡ್ಯದಲ್ಲಿ 4,756 ಅರ್ಜಿಗಳು,
ಮೈಸೂರಿನಲ್ಲಿ 6,796 ಅರ್ಜಿಗಳು.

ರಾಯಚೂರಿನಲ್ಲಿ 15,608 ಅರ್ಜಿಗಳು, ರಾಮನಗರದಲ್ಲಿ 3,856 ಅರ್ಜಿಗಳು, ಶಿವಮೊಗ್ಗದಲ್ಲಿ 6583 ಅರ್ಜಿಗಳು, ತುಮಕೂರಿನಲ್ಲಿ 8379 ಅರ್ಜಿಗಳು, ಉಡುಪಿಯಲ್ಲಿ 2,318 ಅರ್ಜಿಗಳು, ಉತ್ತರ ಕನ್ನಡದಲ್ಲಿ 4,055 ಅರ್ಜಿಗಳು, ವಿಜಯನಗರದಲ್ಲಿ 5,364 ಅರ್ಜಿಗಳು, ವಿಜಯಪುರದಲ್ಲಿ 24,089 ಅರ್ಜಿಗಳು, ಯಾದಗಿರಿಯಲ್ಲಿ 7,451 ಅರ್ಜಿಗಳು. ಒಟ್ಟಾರೆಯಾಗಿ 3,22,483 ಅರ್ಜಿಗಳು ಸಲ್ಲಿಕೆ ಆಗಿದೆ.

3.24 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದೆ. ಈ ಮೊದಲೇ ಸುಮಾರು 2.95 ಲಕ್ಷ ಅರ್ಜಿಗಳು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಲ್ಲಿಕೆ ಆಗಿದ್ದವು. ಅವುಗಳ ಪೈಕಿ 62,595 ರೇಷನ್ ಕಾರ್ಡ್ ಗಳ ವಿತರಣೆಗೆ ಅನುಮತಿ ಸಿಕ್ಕಿದ್ದು, 4679 ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗಿದೆ. ಹಾಗೆಯೇ ಉಳಿದಿರುವ 2,28,712 ರೇಷನ್ ಕಾರ್ಡ್ ಅರ್ಜಿ ಗಳನ್ನು ಪರಿಶೀಲಿಸಿ, ಜನರಿಗೆ ವಿತರಿಸಲು ನಿರ್ಧಾರವನ್ನು ಕೂಡ ಮಾಡಲಾಗಿದೆ.

BPL card has created huge demand, know how many applications have been submitted