ನಿಮ್ಮ ಗ್ರಾಮಕ್ಕೆ ರಸ್ತೆ, ನಿಮ್ಮ ಜಮೀನಿಗೆ ದಾರಿ ಇರುವ ಗ್ರಾಮನಕ್ಷೆ ಬಿಡುಗಡೆ, ಡೌನ್ಲೋಡ್ ಮಾಡಿಕೊಳ್ಳಿ!
ಕಾಲುದಾರಿ ಮತ್ತು ಬಂಡಿ ಜಾಡು ವಿಷಯಕ್ಕೆ ಸಂಬಂಧಿಸಿದ ಹಾಗೆ ಹೊಸ ಆದೇಶ ಕೊಟ್ಟ ಹೈಕೋರ್ಟ್! ಈಗಲೇ ಗ್ರಾಮನಕ್ಷೆ ಡೌನ್ಲೋಡ್ ಮಾಡಿ
ಹಳ್ಳಿಗಳ ಕಡೆಗಳಲ್ಲಿ ಜಮೀನು, ಅಲ್ಲಿಗೆ ಹೋಗುವ ಕಾಲುದಾರಿ ಇವುಗಳ ವಿಷಯಕ್ಕೆ ಸಂಬಂಧಿಸಿದ ಹಾಗೆ ರೈತರ ನಡುವೆ ಜಗಳ ಮನಸ್ತಾಪ ಇದೆಲ್ಲವು ನಡೆಯುತ್ತದೆ. ಇವುಗಳಿಗೆ ಸಂಬಂಧಿಸಿದ ಹಾಗೆ ಜಗಳಗಳು ಕೂಡ ನಡೆಯುತ್ತದೆ.
ಈ ನಿಟ್ಟಿನಲ್ಲಿ ಹೈಕೋರ್ಟ್ ಈಗ ಕಾಲುದಾರಿ ಮತ್ತು ಬಂಡಿ ಜಾಡು ವಿಷಯಕ್ಕೆ ಸಂಬಂಧಿಸಿದ ಹಾಗೆ ಪ್ರಮುಖವಾದ ತೀರ್ಪನ್ನು ನೀಡಿದ್ದು, ಈ ವಿಚಾರವನ್ನು ಎಲ್ಲರೂ ತಿಳಿದುಕೊಳ್ಳುವುದು ಒಳ್ಳೆಯದು. ಪ್ರಸ್ತುತ ಹೈಕೋರ್ಟ್ ನೀಡಿರುವ ತೀರ್ಪು ಏನು ಎಂದು ತಿಳಿಯೋಣ..
ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನ ಅನುಸಾರ, ಕಾಲುದಾರಿಗಳು ಮತ್ತು ಬಂಡಿ ಜಾಡುಗಳು ಇವುಗಳನ್ನು ಕೂಡ ರಸ್ತೆಗಳೇ ಎಂದು ಪರಿಗಣಿಸಲಾಗಿದೆ. ಇದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಇದಕ್ಕಾಗಿ ನೀವು ನಿಮ್ಮ ಹಳ್ಳಿಯ ಕಾಲುದಾರಿ ಮತ್ತು ಬಂಡಿ ಜಾಡು ಇರುವ ಗ್ರಾಮದ ನಕ್ಷೆಯನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು. ಕೋರ್ಟ್ ನೀಡಿರುವ ತೀರ್ಪಿನಲ್ಲಿ ಕಾಲುದಾರಿ ಮತ್ತು ಬಂಡಿ ಜಾಡುವನ್ನು ರಸ್ತೆಗಳೇ ಎಂದು ಒಪ್ಪಿಕೊಳ್ಳಲಾಗಿದೆ..
ಈ ಕಾರಣಕ್ಕೆ ಭೂಸ್ವಾಧೀನ ಕಾಯ್ದೆಯ ನಿಟ್ಟಿನಲ್ಲಿ ಯಾರೇ ಜಮೀನನ್ನು (Property) ಸ್ವಾಧೀನಕ್ಕೆ ತೆಗೆದುಕೊಂಡಿದ್ದರೂ ಕೂಡ, ಜನರಿಗಾಗಿ ಇರುವ ಬಿ ಖರಾಬ್ ಹಕ್ಕನ್ನು ಕ್ಯಾನ್ಸಲ್ ಮಾಡಲು ಆಗುವುದಿಲ್ಲ ಎಂದು ತಿಳಿಸಲಾಗಿದೆ.
20 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾದ ರಾಜ್ಯ ಸರ್ಕಾರ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ?
1964ರಲ್ಲಿ ಜಾರಿಗೆ ಬಂದ ಕಲಂ 67ರ ಕರ್ನಾಟಕ ಭೂ ಕಂದಾಯ ಕಾಯ್ದೆಯ ಅನುಸಾರ ಯಾವುದೇ ಥರಸ ರೋಡ್, ಓಣಿ, ಕಂದಕ, ಬೀದಿ, ಸೇತುವೆ, ತಡೆಗೋಡೆ ಇದೆಲ್ಲವೂ ಕೂಡ ಸರ್ಕಾರದ ಅಸ್ತಿತ್ವಕ್ಕೆ ಬರುತ್ತದೆ. ಕಾಲುದಾರಿ ಮತ್ತು ಬಂಡಿ ಜಾಡು ಗಳನ್ನು ಕೂಡ ಈ ಮೊದಲು ರಸ್ತೆ ಎಂದೇ ಬಳಸಲಾಗುತ್ತಿತ್ತು, ಆ ನಿಟ್ಟಿನಲ್ಲಿ ಇದು ಕೂಡ ರಸ್ತೆಗೆ ಸೇರಿಕೊಳ್ಳುತ್ತದೆ ಎಂದಿದೆ ಕೋರ್ಟ್.
ಇವುಗಳನ್ನು ರಸ್ತೆ ಎಂದು ಗ್ರಾಮದ ಮ್ಯಾಪ್ ಹಾಗೂ ಕಂದಾಯ ದಾಖಲೆಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ, ಹಾಗೆಯೇ ಜಮೀನನ್ನು ಖರೀದಿ ಮಾಡಿದವರಿಗಾಗಿ ಇದನ್ನು ಬಿ ಖರಾಬ್ ಎಂದು ತಿಳಿಸಲಾಗಿದೆ. ಹಾಗೆಯೇ ಇವುಗಳ ಮೇಲೆ ಸಾರ್ವಜನಿಕರಿಗೆ ಹಕ್ಕು ಇರುತ್ತದೆ ಎಂದು ಕೋರ್ಟ್ ತಿಳಿಸಿದೆ.
ಕರ್ನಾಟಕ ಭೂ ಕಾಯ್ದೆಯ ಕಲಂ 68ರ ಅನುಸಾರ, ಬಿ ಖರಾಬ್ ನಲ್ಲಿ ಜನಸಾಮಾನ್ಯರಿಗೆ ಇರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಹಳ್ಳಿಯ ಎಲ್ಲಾ ಜನರು ಕೂಡ ಕಾಲುದಾರಿಯನ್ನು ಬಳಸಬಹುದು. ಮಾರುವುದಕ್ಕಾಗಿ ಈ ಜಾಗವನ್ನು ಪರಿಗಣಿಸುವಂತಿಲ್ಲ ಎಂದು ಕೋರ್ಟ್ ತೀರ್ಮಾನಿಸಿದೆ.
ನಿಮ್ಮ ಹಳ್ಳಿಯ ಗ್ರಾಮನಕ್ಷೆ ಪಡೆಯುವ ವಿಧಾನ:
*ಇದಕ್ಕಾಗಿ ಮೊದಲಿಗೆ ನೀವು ಸರ್ಕಾರದ ವೆಬ್ಸೈಟ್ ಗೆ ಭೇಟಿ ನೀಡಬೇಕು.. https://landrecords.karnataka.gov.in/indexkn.aspx ಇದು ಅಧಿಕೃತ ಲಿಂಕ್ ಆಗಿದೆ.
*ಇಲ್ಲಿ ಕಂದಾಯ ನಕ್ಷೆಗಳು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಇಲ್ಲಿ ಕೇಳುವ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿ, ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ, ಹೋಬಳಿ ಇದೆಲ್ಲವನ್ನು ಮಾಹಿತಿ ನೀಡಿ, ಬಳಿಕ ನಿಮ್ಮ ಗ್ರಾಮದ ಹೆಸರನ್ನು ನೋಡುತ್ತೀರಿ, ಅದರ ಪಕ್ಕದಲ್ಲಿ ಕಾಣುವ ಪಿಡಿಎಫ್ ಫೈಲ್ ಕ್ಲಿಕ್ ಮಾಡಿ, Download ಮಾಡಿ.
*ಈಗ ನಿಮ್ಮ ಗ್ರಾಮದ ನಕ್ಷೆ ಓಪನ್ ಆಗುತ್ತದೆ, ಇದರಲ್ಲಿ ನೀವು ಕಾಲು ದಾರಿ, ಕೆರೆ, ಕಟ್ಟೆ, ಕಾಲುವೆ, ಬಂಡಿ ಜಾಡು ಇದೆಲ್ಲದರ ಮಾಹಿತಿಯನ್ನು ನೋಡಬಹುದು.
Download village map with road to your village, road to your Agriculture land