ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಆಳ್ವಿಕೆ ಶುರು ಮಾಡಿದ ಬಳಿಕ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆ ಆಗಿದೆ. ಇವುಗಳ ಪೈಕಿ ಗೃಹಜ್ಯೋತಿ ಯೋಜನೆಯ ಮೂಲಕ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್ (Free Electricity) ಸಿಗುತ್ತಿದೆ.
ಇದೀಗ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸರ್ಕಾರ ಒಂದು ಹೊಸ ಅಪ್ಡೇಟ್ ನೀಡಿದ್ದು, ಇನ್ನುಮುಂದೆ ನೀವು ಬಾಡಿಗೆ ಮನೆ ಬದಲಾಯಿಸಿದರು ಸಹ ಗೃಹಜ್ಯೋತಿ ಯೋಜನೆಯ (Gruha Jyothi Scheme) ಸೌಲಭ್ಯ ಪಡೆಯಬಹುದು..
ಹೌದು, ಇದು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಹೊಸ ಅಪ್ಡೇಟ್ ಆಗಿದ್ದು, ಸಚಿವರಾದ ಕೆ.ಜೆ. ಜಾರ್ಜ್ ಅವರು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಗ್ರಾಮಕ್ಕೆ ರಸ್ತೆ, ನಿಮ್ಮ ಜಮೀನಿಗೆ ದಾರಿ ಇರುವ ಗ್ರಾಮನಕ್ಷೆ ಬಿಡುಗಡೆ, ಡೌನ್ಲೋಡ್ ಮಾಡಿಕೊಳ್ಳಿ!
ಮೊದಲಿಗೆ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗ, ಬಾಡಿಗೆ ಮನೆಯಲ್ಲಿ ಇರುವವರು ಮನೆ ಬದಲಾಯಿಸುವ ಪರಿಸ್ಥಿತಿ ಬಂದಾಗ, ಅವರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಆದರೆ ಈಗ ಬೇರೆ ಮನೆಗೆ ಹೋದರು ಕೂಡ ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯಬಹುದು.
ಹೌದು, ಇದು ಗೃಹಜ್ಯೋತಿ ಯೋಜನೆ ಶುರುವಾಗಿ 1 ವರ್ಷ ತಲುಪುತ್ತಿರುವ ಸಮಯದಲ್ಲಿ ಜಾರಿಗೆ ತಂದಿರುವ ಹೊಸ ವ್ಯವಸ್ಥೆ ಆಗಿದೆ. ಈ ಮೂಲಕ ನೀವು ಮನೆಯ RR ನಂಬರ್ ಅನ್ನು ಡೀಲಿಂಕ್ (D-Link) ಮಾಡಿ, ಹೊಸ ಮನೆಯ RR ನಂಬರ್ ಅನ್ನು ಲಿಂಕ್ ಮಾಡುವ ಮೂಲಕ, ಬೇರೆ ಮನೆಗೆ ಹೋದಮೇಲೆ ಕೂಡ ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಮುಂದುವರೆಸಿಕೊಂಡು ಹೋಗಬಹುದು. ಇದು ಸರ್ಕಾರ ಜಾರಿಗೆ ತಂದಿರುವ ಹೊಸ ವ್ಯವಸ್ಥೆ ಆಗಿದ್ದು, ಇದನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ..
20 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾದ ರಾಜ್ಯ ಸರ್ಕಾರ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ?
ಮೊಬೈಲ್ ನಲ್ಲಿ ಡೀಲಿಂಕ್ ಮಾಡುವ ವಿಧಾನ:
*ನಿಮ್ಮ ಮನೆಯ RR ನಂಬರ್ ಅನ್ನು ಡೀಲಿಂಕ್ ಮಾಡಲು ಮೊದಲಿಗೆ ನೀವು ಸರ್ಕಾರದ ಸೇವಾಸಿಂಧು ವೆಬ್ಸೈಟ್ ಗೆ ಭೇಟಿ ನೀಡಬೇಕು. https://sevasindhu.karnataka.gov.in/GruhaJyothi_Delink/GetAadhaarData.aspx ಈ ಲಿಂಕ್ ಓಪನ್ ಮಾಡಿ.
*ಈಗ ಆಧಾರ್ ನಂಬರ್ ನಮೂದಿಸಿ ಎನ್ನುವ ಆಪ್ಶನ್ ಕಾಣಸಿಗುತ್ತದೆ. ಅದನ್ನು ಸೆಲೆಕ್ಟ್ ಮಾಡಿ, ಅದರಲ್ಲಿ ಗೃಹಜ್ಯೋತಿ ಯೋಜನೆಗೆ ಲಿಂಕ್ ಮಾಡಿರುವ ಆಧಾರ್ ನಂಬರ್ ನಮೂದಿಸಿ, Get Details ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಈಗ e KYC Service ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ, ಇಲ್ಲಿ ಆಧಾರ್ ನಂಬರ್ ಹಾಕಿ OTP ಆಪ್ಶನ್ ಸೆಲೆಕ್ಟ್ ಮಾಡಿ, ಓಟಿಪಿ ಪಡೆಯಿರಿ. ಬಳಿಕ ಆ ಓಟಿಪಿಯನ್ನು ಸಲ್ಲಿಸಿ.
*ಈಗ ಮೊದಲಿದ್ದ RR ನಂಬರ್ ಡೀಲಿಂಕ್ ಮಾಡಿ, ಹೊಸ RR ನಂಬರ್ ಅನ್ನು ಲಿಂಕ್ ಮಾಡಿ.
ಒಂದು ವೇಳೆ ನಿಮ್ಮ ಫೋನ್ ನಲ್ಲಿ ಈ ಲಿಂಕ್ ಓಪನ್ ಆಗಿಲ್ಲ ಎಂದರೆ, ಗೂಗಲ್ ಕ್ರೋಮ್ ನಲ್ಲಿ Memory Cache clear ಮಾಡಿ, ನಂತರ ಲಿಂಕ್ ಓಪನ್ ಮಾಡಿ, ಸರಿಯಾಗಿ ಓಪನ್ ಆಗುತ್ತದೆ.
ನಮ್ಮ ರಾಜ್ಯದಲ್ಲಿ ಒಟ್ಟು 1.65 ಕೋಟಿ ಮನೆಗಳು ಜನರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದು, ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ಬಹಳ ಸಹಾಯ ಆಗುತ್ತಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಒಟ್ಟಿನಲ್ಲಿ ಸರ್ಕಾರದ ಈ ಹೊಸ ಸೇವೆ ಇಂದ ಇನ್ನಷ್ಟು ಜನರಿಗೆ ಅನುಕೂಲ ಆಗುತ್ತದೆ.
If you want Gruha Jyothi free Electricity then de-link first and apply again
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.