ಸುವರ್ಣಾವಕಾಶ! ಸ್ವಂತ ಉದ್ಯಮ ಪ್ರಾರಂಭಿಸಲು ₹2 ಲಕ್ಷ ನೆರವು, 70% ಸಬ್ಸಿಡಿ - Business Loan

ಕರ್ನಾಟಕ ಸರ್ಕಾರದಿಂದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು 70% ಸಬ್ಸಿಡಿ, ಗರಿಷ್ಠ ₹2 ಲಕ್ಷ ನೆರವು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಸೆಪ್ಟೆಂಬರ್ 2025 ಕೊನೆಯ ದಿನಾಂಕ.

  • ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ 70% ಸಬ್ಸಿಡಿ ಸಹಿತ ಉದ್ಯಮ ಸಾಲ
  • ಗರಿಷ್ಠ ₹2 ಲಕ್ಷ ಸಹಾಯಧನ – ಫಿಕ್ಸ್‌ಡ್ ಮಿತಿ
  • 10 ಸೆಪ್ಟೆಂಬರ್ 2025 ಅರ್ಜಿ ಸಲ್ಲಿಸಲು ಕೊನೆಯ ದಿನ

Business Loan : ಕರ್ನಾಟಕದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ರಾಜ್ಯ ಸರ್ಕಾರದಿಂದ ಉದ್ಯೋಗಾವಕಾಶ ಮತ್ತು ಆರ್ಥಿಕ ಬೆಂಬಲದ ಸುಸಂದರ್ಭ ಒದಗಿಸಲಾಗಿದೆ.

“ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ – ಐ.ಎಸ್.ಬಿ (ಬ್ಯಾಂಕ್ ಸಹಯೋಗದಲ್ಲಿ)” ಅಡಿಯಲ್ಲಿ, ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ ₹2 ಲಕ್ಷ ಸಬ್ಸಿಡಿ ದೊರೆಯಲಿದೆ. ಈ ನೆರವು ಒಟ್ಟು ಸಾಲದ ಮೊತ್ತಕ್ಕೆ ಶೇ.70% ವರೆಗೆ ದೊರೆಯುತ್ತದೆ.

ಈ ಯೋಜನೆಯ ಪ್ರಮುಖ ಉದ್ದೇಶವೇ ನಿರುದ್ಯೋಗದಲ್ಲಿರುವ ಸಮುದಾಯದ ಯುವಕರಿಗೆ ಸ್ವಂತ ಉದ್ಯಮ (Own Business) ಪ್ರಾರಂಭಿಸಲು ಸಹಾಯ ಮಾಡುವುದು. ಚಿಕ್ಕ ಮಟ್ಟದ ವ್ಯಾಪಾರ ಅಥವಾ ಸೇವಾ ವೃತ್ತಿ ಆರಂಭಿಸಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ.

ಇದನ್ನೂ ಓದಿ: ಸರ್ಕಾರದ ಭಾರೀ ಗಿಫ್ಟ್! 50,000 ಉಚಿತ ನೆರವು, ತಳ್ಳುಗಾಡಿ, ಸಣ್ಣ ವ್ಯಾಪಾರಿಗಳಿಗೆ ಸುವರ್ಣಾವಕಾಶ

ಅರ್ಹತೆಗಳು:

ವಯಸ್ಸು ಕನಿಷ್ಠ 18 ವರ್ಷ, ಗರಿಷ್ಠ 60 ವರ್ಷ.
ಕೇವಲ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರು ಮಾತ್ರ ಅರ್ಹರು.
ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯ ₹1.5 ಲಕ್ಷ ಮೀರಬಾರದು, ನಗರದಲ್ಲಿ ₹2 ಲಕ್ಷ ಮೀರಬಾರದು.

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಶಿಕ್ಷಣ ಪ್ರಮಾಣ ಪತ್ರ, ವಿಳಾಸ ಪ್ರಮಾಣ ಪತ್ರ ಮತ್ತು ಯೋಜನಾ ವರದಿ / ದರಪಟ್ಟಿ.

ಇದನ್ನೂ ಓದಿ: ಗ್ರಾಮ ಒನ್ ಸೆಂಟರ್ ಪ್ರಾಂಚೈಸಿ ಪಡೆಯಿರಿ! ಕೈತುಂಬಾ ದುಡ್ಡು, ಒಳ್ಳೆಯ ಆದಾಯ

ಅರ್ಜಿ ಸಲ್ಲಿಸುವ ವಿಧಾನ:

  • ಆನ್ಲೈನ್: ಅಧಿಕೃತ ವೆಬ್‌ಸೈಟ್ sevasindhu.karnataka.gov.in ಗೆ ಭೇಟಿ ನೀಡಿ, ಲಾಗಿನ್ ಮಾಡಿ, “Self Employment Direct Loan Scheme” ಆಯ್ಕೆ ಮಾಡಿ, ಅರ್ಜಿ ಫಾರಂ ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಆಫ್ಲೈನ್: ಹತ್ತಿರದ ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕ:

ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. 10 ಸೆಪ್ಟೆಂಬರ್ 2025 ಕೊನೆಯ ದಿನಾಂಕ. ತಡಮಾಡದೆ ಬೇಗ ಅರ್ಜಿ ಸಲ್ಲಿಸುವುದು ಒಳಿತು.

ರಾಜ್ಯ ಸರ್ಕಾರದಿಂದ ದೊರೆಯುವ ಈ ನೆರವು ನಿಮ್ಮ ಸ್ವಂತ ಉದ್ಯಮಕ್ಕೆ ಆರ್ಥಿಕ ಬೆಂಬಲ ನೀಡುವುದಲ್ಲದೆ, ನಿಮ್ಮ ಬದುಕಿನ ಹೊಸ ಅಧ್ಯಾಯ ಆರಂಭಿಸಲು ಸಹಾಯಕವಾಗುತ್ತದೆ.

Business Loan Scheme, 2 Lakh Subsidy

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories