ಸರ್ಕಾರದ ಭಾರೀ ಗಿಫ್ಟ್! 50,000 ಉಚಿತ ನೆರವು, ತಳ್ಳುಗಾಡಿ, ಸಣ್ಣ ವ್ಯಾಪಾರಿಗಳಿಗೆ ಸುವರ್ಣಾವಕಾಶ - Business Loan
ಆರ್ಥಿಕ ಸಂಕಷ್ಟದಲ್ಲಿರುವ ಪರಿಶಿಷ್ಟ ಪಂಗಡದವರಿಗೆ ಸ್ವಂತ ವ್ಯವಹಾರ ಪ್ರಾರಂಭಿಸಲು ಕರ್ನಾಟಕ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಸಹಾಯಧನ ಹಾಗೂ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಲಭ್ಯ.

- ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ
- ಸಹಾಯಧನ + ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
- ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಕೆ
Small Business Loan Scheme : ಕರ್ನಾಟಕ ಸರ್ಕಾರವು ರಾಜ್ಯದ ಪರಿಶಿಷ್ಟ ಪಂಗಡದವರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸಲು ಸ್ವಯಂ ಉದ್ಯೋಗ ನೇರಸಾಲ ಯೋಜನೆ ಅನ್ನು ಆರಂಭಿಸಿದೆ.
ಸಣ್ಣ ಮಟ್ಟದ ವ್ಯಾಪಾರ, ಹಣ್ಣು-ಹಂಪಲು ಮಳಿಗೆ, ತಳ್ಳುಗಾಡಿ, ಅಥವಾ ಇತರ ಸ್ವಂತ ಉದ್ಯೋಗ ಚಟುವಟಿಕೆ ಆರಂಭಿಸಲು ಈ ಯೋಜನೆ ನೆರವಾಗಲಿದೆ.
ಘಟಕ ವೆಚ್ಚ ₹1,00,000 ಆಗಿದ್ದು, ಇದರಲ್ಲಿನ ₹50,000 ಸಹಾಯಧನವಾಗಿದ್ದು ಉಳಿದ ₹50,000 ಅನ್ನು ವರ್ಷಕ್ಕೆ ಕೇವಲ 4% ಬಡ್ಡಿದರದಲ್ಲಿ ಸಾಲವಾಗಿ (Loan) ನೀಡಲಾಗುತ್ತದೆ.
ಇದನ್ನೂ ಓದಿ: ಗ್ರಾಮ ಒನ್ ಸೆಂಟರ್ ಪ್ರಾಂಚೈಸಿ ಪಡೆಯಿರಿ! ಕೈತುಂಬಾ ದುಡ್ಡು, ಒಳ್ಳೆಯ ಆದಾಯ
ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು ಮತ್ತು ಕನಿಷ್ಠ 15 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು.
ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು. ಜೊತೆಗೆ, ಅವರ ಕುಟುಂಬದ ಸದಸ್ಯರಲ್ಲಿ ಯಾರೂ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು ಮತ್ತು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರಬಾರದು.
ಇದನ್ನೂ ಓದಿ: ಭೂ ರಹಿತ ರೈತರಿಗೆ, ಕೃಷಿ ಜಮೀನು ಖರೀದಿಗೆ ಶೇ.50% ಅಥವಾ 25 ಲಕ್ಷ ಸಬ್ಸಿಡಿ ಸಾಲ
ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ ₹1,50,000 ಒಳಗಿರಬೇಕು, ನಗರ ಪ್ರದೇಶದಲ್ಲಿ ₹2,00,000 ಒಳಗಿರಬೇಕು. ವಿಕಲಚೇತನರಿಗೆ ಸೌಲಭ್ಯ ಪಡೆಯಲು ಅಧಿಕೃತ ದೃಢೀಕರಣ ಪತ್ರ ಅಗತ್ಯ.
ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಮೂಲಕ ಸಲ್ಲಿಸಬಹುದು. ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಯೋಜನೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 10, 2025 ಆಗಿರುವುದರಿಂದ ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಬೇಕು.
Direct Loan Scheme for Self-Employment




