ಬೆಂಗಳೂರು ಶಾಲಾ ಮಕ್ಕಳ ಪರಿಸರ ಜಾಗೃತಿಗೆ ಹೊಸ ಯೋಜನೆ: ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಯ 6000 ಶಾಲೆಗಳ ಸಹಯೋಗದಲ್ಲಿ ಹವಾಮಾನ ಕಾರ್ಯಯೋಜನೆ ಕ್ಲಬ್‌ಗಳು ರಚನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಯೋಜನೆ, ಜೂನ್ 6 ರಂದು ಕಾರ್ಯಕ್ರಮಗಳ ಆರಂಭವಿದೆ.

  • 650 ಶಾಲೆಗಳು ಯೋಜನೆಗೆ ಈಗಾಗಲೇ ಒಪ್ಪಿಗೆ
  • ಹಸಿರು ಇಂಧನ, ಗಾಳಿಯ ಗುಣಮಟ್ಟ ಕುರಿತು ಜಾಗೃತಿ
  • ಬ್ಲೂ, ಗ್ರೀನ್ ಅವಾರ್ಡ್‌ಗಳ ಘೋಷಣೆ

ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಪರಿಸರ ಜಾಗೃತಿಗೆ ನಾಂದಿ ಹಾಡುವಂತೆ, ಮಕ್ಕಳಲ್ಲಿ ಹಸಿರು ಇಂಧನ (green energy), ನೀರಿನ ಸಂರಕ್ಷಣೆ (water conservation), ಸ್ವಚ್ಛತೆ ಮತ್ತು ವಾಯು ಗುಣಮಟ್ಟದ ಬಗ್ಗೆ ಅರಿವು ಮೂಡಿಸಲು ‘ಹವಾಮಾನ ಕಾರ್ಯಯೋಜನೆ ಕ್ಲಬ್‌’ಗಳನ್ನು ರಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಾಗಿದ್ದಾರೆ.

ಈ ಯೋಜನೆಯ ಭಾಗವಾಗಿ, ಜೂನ್ 6ರಂದು ನೆಹರೂ ತಾರಾಲಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲಿ ವಸ್ತು ಪ್ರದರ್ಶನದಿಂದ ಹಿಡಿದು ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಪರಿಸರ ಕುರಿತ ಜ್ಞಾನ ಬೆಳೆಸಲಾಗುತ್ತದೆ. ಇದಕ್ಕೆ ಈಗಾಗಲೇ ನೂರಾರು ಶಾಲೆಗಳು ನೋಂದಾಯಿಸಿಕೊಂಡಿವೆ.

ಬೆಂಗಳೂರು (Bengaluru) ವ್ಯಾಪ್ತಿಯಲ್ಲಿ 6,000 ಶಾಲೆಗಳಿವೆ. ಇದರಲ್ಲಿ 4,500 ಖಾಸಗಿ ಹಾಗೂ 1,500 ಸರ್ಕಾರಿ ಶಾಲೆಗಳಿವೆ. ಈ ಎಲ್ಲ ಶಾಲೆಗಳಿಗೂ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. 650 ಶಾಲೆಗಳು ಈಗಾಗಲೇ ಸಹಮತ ಸೂಚಿಸಿದ್ದು, 18 ಕ್ಲಬ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ! ಏಪ್ರಿಲ್, ಮೇ ತಿಂಗಳ ಹಣ ಖಾತೆಗೆ: ಲಕ್ಷ್ಮೀ ಹೆಬ್ಬಾಳ್ಕರ್

ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಹಸಿರು ಇಂಧನ, ಘನ ತ್ಯಾಜ್ಯ ನಿರ್ವಹಣೆ (waste management), ಗಾಳಿಯ ಗುಣಮಟ್ಟ, ಮಳೆನೀರು ಸಂಗ್ರಹಣೆ, ನಗರ ಯೋಜನೆ ಹಾಗೂ ವಿಪತ್ತು ನಿರ್ವಹಣೆಯ ಬಗ್ಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉತ್ತಮ ಕೆಲಸಕ್ಕೆ ಬ್ಲೂ ಮತ್ತು ಗ್ರೀನ್ ಅವಾರ್ಡ್‌ಗಳನ್ನು ನೀಡಲಾಗುತ್ತದೆ.

ಕ್ಲಬ್‌ಗಳ ನೋಂದಣಿಗೆ ವೆಬ್‌ಸೈಟ್ ಅನ್ನು ಜೂನ್ 6ರಂದು ಉದ್ಘಾಟಿಸಲಾಗುವುದು. ಸಾರ್ವಜನಿಕ ಸಂಘ ಸಂಸ್ಥೆಗಳಿಗೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. 175 ಸಂಘ ಸಂಸ್ಥೆಗಳು ಪ್ರಶಸ್ತಿ ಪಟದಿಗಾಗಿ ಆಯ್ಕೆಯಾಗಿದ್ದು, 15 ತೀರ್ಪುಗಾರರ ತಂಡ ನೇಮಿಸಲಾಗಿದೆ.

ಶಾಲಾ ಮಟ್ಟದಲ್ಲಿ ಮರ ನೆಡುವ ಪ್ರೊಗ್ರಾಂ, ವಿದ್ಯುತ್ ಚಾಲಿತ ವಾಹನಗಳಿಗೆ (electric vehicles) ಪ್ರೋತ್ಸಾಹ, ಬಸ್ ಖರೀದಿ, ಪ್ಲಾಸ್ಟಿಕ್ ನಿಷೇಧ, ಕಸ ವಿಲೇವಾರಿ, ಕೆರೆ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳು ಜಾರಿಯಲ್ಲಿವೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣಕ್ಕೆ ಕಾದಿರುವ ಮಹಿಳೆಯರಿಗೆ ಸಿಹಿ ಸುದ್ದಿ! ಸಿಎಂ ಹೊಸ ಸೂಚನೆ

ಈ ಯೋಜನೆಗಳ ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ತಂಡ ಹಾಗೂ ವಿಶೇಷ ಆಯುಕ್ತರು ನೇಮಕವಾಗಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡ್ ಅನ್ನು ಗ್ರೀನ್ ವಾರ್ಡ್ ಆಗಿ ಅಭಿವೃದ್ಧಿಪಡಿಸಲು ಪ್ರತಿ ವಾರ್ಡ್‌ಗೆ 1 ಕೋಟಿ ರೂಪಾಯಿ ಮೀಸಲಾಗಿದೆ.

ಕಸದ ಬಗ್ಗೆ ಸಾರ್ವಜನಿಕರು ನೀಡುವ ಮಾಹಿತಿಯನ್ನು ಅಧಿಕಾರಿಗಳು ಗಮನಿಸಿ ತ್ವರಿತ ಕ್ರಮ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಪ್ರತಿದಿನ ತಯಾರಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ ಎನ್ನುತ್ತಾರೆ ಡಿ.ಕೆ. ಶಿವಕುಮಾರ್.

Climate Clubs in Bengaluru Schools Soon

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories