ಕರ್ನಾಟಕ ರೈತರಿಗೆ ಬೆಳೆ ವಿಮೆ ಸೌಲಭ್ಯ! ಫಸಲ್ ಭೀಮಾ ಯೋಜನೆಗೆ ಅರ್ಜಿ ಆಹ್ವಾನ

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಆರಂಭ! ರೈತರು ತಮ್ಮ ಬೆಳೆಗಳನ್ನು (crop insurance) ಆನ್ಲೈನ್ ಮೂಲಕ ವಿಮೆ ಮಾಡಿಸಬಹುದು. ಕೊನೆಯ ದಿನಾಂಕ ಮುನ್ನ ಅರ್ಜಿ ಸಲ್ಲಿಸಿ ಬೆಳೆಯ ಭದ್ರತೆಗೆ ಹೆಜ್ಜೆ ಇಡಿ.

ಬೆಂಗಳೂರು (Bengaluru): ಕೃಷಿಕರ ಹಿತಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY)-2025-26ರ ಮುಂಗಾರು ಹಂಗಾಮಿಗೆ ಸಲ್ಲಬಹುದಾದ ಬೆಳೆ ವಿಮೆ (crop insurance) ಅರ್ಜಿ ಪ್ರಕ್ರಿಯೆ ಆರಂಭಗೊಂಡಿದೆ.

ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ಭದ್ರತೆ ನೀಡುವಂತೆ ವಿಮೆ ಮಾಡಿಸಬಹುದಾಗಿದೆ.

ಈ ಬಾರಿ ವಿಶೇಷವಾಗಿ 13 ಪ್ರಮುಖ ಬೆಳೆಗಳಿಗೆ ವಿಮೆ ಪಡೆಯುವ ಅವಕಾಶ ನೀಡಲಾಗಿದೆ. ತಾತ್ಕಾಲಿಕ ಹಾನಿ ಅಥವಾ ಪ್ರಕೃತಿ ವಿಕೋಪಳಿಂದ ಪೋಷಣೆಗಾಗಿ ಈ ವಿಮೆ (insurance) ಅತ್ಯಂತ ಅವಶ್ಯಕ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ 5 ಸಾವಿರ ಕೊಡ್ತೀವಿ! ಹೆಚ್‌ಡಿಕೆ, ಡಿಕೆಶಿ ನಡುವೆ ಮಾತಿನ ಸಮರ

ಈ ವಿಮೆಗೆ ಅರ್ಜಿ ಸಲ್ಲಿಸಲು ರೈತರು ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One) ಕೇಂದ್ರಗಳನ್ನು ಸಂಪರ್ಕಿಸಬಹುದು ಅಥವಾ ಆನ್ಲೈನ್ (online portal) ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಮೀನಿನ ದಾಖಲೆಗಳು (RTC), ಪೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಸಿಕೊಳ್ಳಬೇಕು. ಎಲ್ಲಾ ವಿವರಗಳನ್ನು ಸರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಸಿದರೆ ಮಾತ್ರ ಯೋಜನೆಯ ಲಾಭ ಪಡೆಯಬಹದು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಈ ರೀತಿ ಮಾಡಲು ಸೂಚನೆ! ಬಿಗ್ ಅಪ್ಡೇಟ್

crop Insurance

ಅಧಿಕೃತ ವೆಬ್‌ಸೈಟ್ https://www.samrakshane.karnataka.gov.in ಮೂಲಕ ರೈತರು ತಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೊದಲಿಗೆ ವರ್ಷವನ್ನು “2025-26” ಎಂದು ಆಯ್ಕೆ ಮಾಡಿ, ಋತುವಾಗಿ “Kharif” ಆಯ್ಕೆ ಮಾಡಿದ ನಂತರ “Crop You Can Insure” ಆಯ್ಕೆ ಮೂಲಕ ತಮ್ಮ ಸ್ಥಳದ ವಿವರಗಳನ್ನು ನೀಡಬೇಕು.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ವೊಡಾಫೋನ್ 5ಜಿ ಸೇವೆ ಆರಂಭ! ವೇಗದ ನೆಟ್, ಅನ್‌ಲಿಮಿಟೆಡ್ ಡೇಟಾ

ಈ ಬಾರಿ ವಿಮೆಗೆ ಅವಕಾಶವಿರುವ ಬೆಳೆಗಳು: ಸೂರ್ಯಕಾಂತಿ, ಭತ್ತ, ಜೋಳ, ಮುಸುಕಿನ ಜೋಳ, ರಾಗಿ, ತೂಗರಿ, ನೆಲಗಡಲೆ, ಟೊಮ್ಯಾಟೋ, ಈರುಳ್ಳಿ, ಹತ್ತಿ, ನವಣೆ, ಸಜ್ಜೆ, ಎಳ್ಳು. ಪ್ರತಿಯೊಂದು ಬೆಳೆಗೂ ಕೊನೆಯ ದಿನಾಂಕ ವಿಭಿನ್ನವಾಗಿದೆ. ಉದಾಹರಣೆಗೆ ಟೊಮ್ಯಾಟೋ ಮತ್ತು ಎಳ್ಳುಗಳಿಗೆ ಜೂನ್ 30 ಕೊನೆಯ ದಿನವಾಗಿದ್ದು, ಭತ್ತ, ಜೋಳ ಮುಂತಾದ ಬೆಳೆಗಳಿಗೆ ಜುಲೈ 31 ಅಂತಿಮ ದಿನವಾಗಿದೆ.

ಪ್ರತಿಯೊಬ್ಬ ರೈತನು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬೇಕಾದ ಅಗತ್ಯವಿದೆ. ವಿಮೆ ಇದೆಯೆಂದರೆ ನಷ್ಟಗಳ ವೇಳೆ ಸರ್ಕಾರವು (government assistance) ನೆರವಿಗೆ ನಿಂತು ಹಣವನ್ನು ಪಾವತಿಸಲಿದೆ. ಇನ್ನೂ ಅರ್ಜಿ ಸಲ್ಲಿಸದ ರೈತರು ತಕ್ಷಣವೇ ಈ ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ.

Crop Insurance 2025, Farmers Invited to Apply

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories