Bangalore NewsKarnataka News

ಕರ್ನಾಟಕ ಮಹಿಳೆಯರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ! ಶೇ.50 ಸಬ್ಸಿಡಿ

ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಉದ್ಯೋಗಿನಿ ಯೋಜನೆಯು ಬಡ್ಡಿರಹಿತ ಸಾಲ, ಸಬ್ಸಿಡಿ ಹಾಗೂ ಸುಲಭ ಅರ್ಜಿ ಪ್ರಕ್ರಿಯೆ ಪರಿಚಯಿಸಿದೆ.

  • ಮಹಿಳೆಯರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯ
  • ಪರಿಶಿಷ್ಟ ಜಾತಿಗೆ ಶೇ.50 ಮತ್ತು ಸಾಮಾನ್ಯ ವರ್ಗಕ್ಕೆ ಶೇ.30 ಸಬ್ಸಿಡಿ
  • ಸುಲಭ ಅರ್ಜಿ ಪ್ರಕ್ರಿಯೆ, ಕನಿಷ್ಠ ದಾಖಲೆಗಳ ಅಗತ್ಯ

ಬೆಂಗಳೂರು (Bengaluru): ನಿಮ್ಮದೇ ಆದ ವ್ಯವಹಾರ ಪ್ರಾರಂಭಿಸಲು ಕನಸು ಕಾಣುತ್ತಿದ್ದೀರಾ? ಆದರೆ ಹಣಕಾಸು ಸಮಸ್ಯೆಯಿಂದ ಹಿಂಜರಿಯುತ್ತಿದ್ದೀರಾ? ಹಾಗಿದ್ದರೆ ಕರ್ನಾಟಕ ಸರ್ಕಾರದ (Karnataka Government) ಉದ್ಯೋಗಿನಿ ಯೋಜನೆ (Udyogini Scheme) ನಿಮ್ಮ ಸಹಾಯಕ್ಕೆ ಬಂದಿದೆ.

ಮಹಿಳೆಯರು ಆರ್ಥಿಕವಾಗಿ ಮುನ್ನಡೆಯಲು ಬಡ್ಡಿರಹಿತ ಸಾಲ (interest-free loan) ಮತ್ತು ಸರ್ಕಾರದ ಸಬ್ಸಿಡಿ (Subsidy Loan) ಮೂಲಕ ಈ ಯೋಜನೆ ಪ್ರೋತ್ಸಾಹ ನೀಡುತ್ತದೆ.

ಕರ್ನಾಟಕ ಮಹಿಳೆಯರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ! ಶೇ.50 ಸಬ್ಸಿಡಿ

ಈ ಯೋಜನೆಯಲ್ಲಿಯ ವಿಶೇಷತೆ ಏನೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ.50ರಷ್ಟು ಮತ್ತು ಸಾಮಾನ್ಯ ವರ್ಗದವರಿಗೆ ಶೇ.30ರಷ್ಟು ಸಬ್ಸಿಡಿಯೊಂದಿಗೆ ಗರಿಷ್ಠ ₹3 ಲಕ್ಷವರೆಗೆ ಸಾಲ ಸೌಲಭ್ಯ (Loan Scheme) ದೊರೆಯುವುದು. ಇದಲ್ಲದೆ, ಅರ್ಹ ಮಹಿಳೆಯರಿಗೆ 3-6 ದಿನಗಳ ವೃತ್ತಿಪರ ತರಬೇತಿಯು ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟ್ ಖರೀದಿಸುವ ಅವಕಾಶ! ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು 18 ರಿಂದ 55 ವರ್ಷದ ಮಹಿಳೆಯರು ಅರ್ಹರು. ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ವ್ಯಾಪಾರದ ವೆಚ್ಚವು ₹1 ಲಕ್ಷದಿಂದ ₹3 ಲಕ್ಷದ ನಡುವೆ ಇರಬೇಕು. ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ.

ಅರ್ಜಿ ಸಲ್ಲಿಸುವುದು ಬಹಳ ಸುಲಭವಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಜಿ ಸಲ್ಲಿಸಿದ ನಂತರ ಸಾಲ ಮೊತ್ತವನ್ನು ನೇರವಾಗಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ವರ್ಗಾಯಿಸಲಾಗುತ್ತದೆ.

Udyogini Scheme

ಸಾಲ ವಿತರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಸಾಲವನ್ನು ಮಂಜೂರು ಮಾಡಿದ ನಂತರ, ಹಣವನ್ನು ನೇರವಾಗಿ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆಕೆಯ ಬ್ಯಾಂಕ್ ಖಾತೆಗೆ ಹಣ ಬರುವ ಮುನ್ನ 3-6 ದಿನಗಳ ವೃತ್ತಿಪರ ತರಬೇತಿಯು ನೀಡಲಾಗುತ್ತದೆ. ಇದರಿಂದ ಮಹಿಳೆಯರು ತಮ್ಮ ವ್ಯವಹಾರವನ್ನು ಯಶಸ್ವಿಯಾಗಿ ನಡೆಸಲು ಬೇಕಾದ ತಾಂತ್ರಿಕ ಜ್ಞಾನವನ್ನು ಹೊಂದಬಹುದು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪಂಚಾಯಿತಿ ಮೂಲಕ ವಿತರಣೆ, ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸುಳಿವು

ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್
  2. ವಿಳಾಸ ಮತ್ತು ಆದಾಯ ಪುರಾವೆ
  3. ಜಾತಿ ಪ್ರಮಾಣಪತ್ರ (ಅನ್ವಯವಾದರೆ)
  4. ಬ್ಯಾಂಕ್ ಖಾತೆ ವಿವರಗಳು
  5. ಮೊಬೈಲ್ ಸಂಖ್ಯೆ

ಉದ್ಯೋಗಿನಿ ಯೋಜನೆ

ಏಕೆ ಉದ್ಯೋಗಿನಿ ಯೋಜನೆ ಮುಖ್ಯ?

ಈ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಪ್ರೋತ್ಸಾಹಿಸುತ್ತದೆ. ಕೇವಲ ಸಾಲ (Loan Scheme) ನೀಡುವಷ್ಟಕ್ಕೆ ಅಲ್ಲದೆ, ಮಹಿಳೆಯರ ವ್ಯವಹಾರಗಳ ಬೆಳವಣಿಗೆಗೆ ಸಹಕಾರ ನೀಡುವ ತರಬೇತಿಯನ್ನು ಸಹ ನೀಡುತ್ತದೆ. ಇದರಿಂದ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಿ ಸಮಾಜದಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಲು (Own Business) ಅವಕಾಶ ಪಡೆಯುತ್ತಾರೆ.

ಇದನ್ನೂ ಓದಿ: ಬಿಪಿಎಲ್ ಕುಟುಂಬಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್‌ ಯೋಜನೆ! ನೀವೂ ಅಪ್ಲೈ ಮಾಡಿ

ಮಹಿಳೆಯರು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಹಾಗೂ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ತಾಣ https://kswdc.karnataka.gov.in/21/udyogini/en ಭೇಟಿ ನೀಡಿ ಪರಿಶೀಲಿಸಬಹುದು.

ಸೂಚನೆ: ಸದ್ಯ ಮೇಲೆ ನೀಡಲಾದ ವೆಬ್ ಸೈಟ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸುತ್ತಿದ್ದು, ಸರಿಯಾದ ಬಳಿಕ ಪ್ರಯತ್ನಿಸಿ.

ಹಾಗಾದರೆ ಮಹಿಳೆಯರೇ, ಸ್ವಾವಲಂಬಿ ಬದುಕಿಗಾಗಿ ಮೊದಲ ಹೆಜ್ಜೆ ಇಡಿ. ಉದ್ಯೋಗಿನಿ ಯೋಜನೆಯ ನೆರವಿನಿಂದ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ! 💪

Empowering Women Entrepreneurs in Karnataka by Udyogini Scheme

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories