ಗೃಹಲಕ್ಷ್ಮಿ ಹಣ ಪಂಚಾಯಿತಿ ಮೂಲಕ ವಿತರಣೆ, ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸುಳಿವು
ಹತ್ತು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
- ಅಪಘಾತದಿಂದಾಗಿ ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ವಿಳಂಬ
- ಹತ್ತು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಮಾಡುವ ಭರವಸೆ
- ಹೊಸ ಮಾದರಿಯಲ್ಲಿ ಹಣ ಬಿಡುಗಡೆ ಪ್ರಕ್ರಿಯೆ ಆರಂಭ
“ಗೃಹಲಕ್ಷ್ಮಿಯರೆ, ಆತಂಕಪಡುವ ಅಗತ್ಯವೇ ಇಲ್ಲ!” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಮೂರು ತಿಂಗಳಿಂದ ಲಭ್ಯವಾಗದೆ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ಸಚಿವೆ ಮಾಧ್ಯಮದವರೊಂದಿಗೆ ಮಾತಾಡುತ್ತಾ ಸ್ಪಷ್ಟನೆ ನೀಡಿದ್ದಾರೆ.
ಅವರು ಕಾರು ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದೂವರೆ ತಿಂಗಳ ಕಾಲ ವಿಶ್ರಾಂತಿಯಲ್ಲಿ ಇರಬೇಕಾದ್ದರಿಂದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 2 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಹೊಸ ಪಟ್ಟಿ ಬಿಡುಗಡೆ
“ನಾನು ಕಚೇರಿಯಲ್ಲಿ ಇದ್ದಿದ್ದರೆ ಹಣಕಾಸು ಇಲಾಖೆಗೆ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸುತ್ತಿದ್ದೆ. Bengaluru ಗೆ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಹೊರಡುತ್ತಿದ್ದೇನೆ ಹತ್ತು ದಿನಗಳಲ್ಲಿ ಹಣ ಖಾತೆಗೆ ಜಮಾ ಮಾಡಲಾಗುತ್ತದೆ,” ಎಂದರು.
ಹಣ ಬಿಡುಗಡೆ ಪ್ರಕ್ರಿಯೆಯಲ್ಲಿಯೂ ನವೀಕರಣವಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಐದು ತಾಲ್ಲೂಕು ಪಂಚಾಯಿತಿಗಳಿಗೆ ಹಣವನ್ನು ನೀಡಲಾಗಿದೆ. ಅಲ್ಲಿಂದ ಸಿಡಿಪಿಒಗಳ ಮೂಲಕ ಫಲಾನುಭವಿಗಳಿಗೆ ಹಣ ಜಮಾ (Bank Account) ಮಾಡಲಾಗುತ್ತದೆ. “ಈ ಪ್ರಕ್ರಿಯೆ ಬಲವಾಗಿ ಸಾಗುತ್ತಿದೆ, ಒಂದು ವಾರದಿಂದ ಹತ್ತು ದಿನಗಳೊಳಗೆ ಎಲ್ಲಾ ಮಹಿಳೆಯರ ಖಾತೆಗೆ ಹಣ ತಲುಪಲಿದೆ,” ಎಂದು ಸಚಿವೆ ಹೇಳಿದರು.
ಇದನ್ನೂ ಓದಿ: ರೇಷನ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ರೆ ತಿದ್ದುಪಡಿಗೆ ಕೊನೆಯ ಅವಕಾಶ
ಹಣಕಾಸು ಇಲಾಖೆಯು ಕಳೆದ ಎರಡು ತಿಂಗಳ ಠೇವಣಿಗಳ ಮಾಹಿತಿಯನ್ನು ಕೂಡ ಹೊಂದಿದೆ. ಬಜೆಟ್ ಅಧಿವೇಶನದ ವೇಳೆ ಮುಂದಿನ ಮೂರು ತಿಂಗಳ ಹಣವನ್ನು ಜಮಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
Lakshmi Hebbalkar Assures Gruha Lakshmi Funds Soon
Our Whatsapp Channel is Live Now 👇