2 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಹೊಸ ಪಟ್ಟಿ ಬಿಡುಗಡೆ
ಆರ್ಥಿಕವಾಗಿ ಸಬಲ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ
- ಆರ್ಥಿಕವಾಗಿ ಬಲಿಷ್ಠ ಮಹಿಳೆಯರ ಆದಾಯ ಪರಿಶೀಲನೆ ಪ್ರಾರಂಭ
- ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರರಿಗೆ ಯೋಜನೆ ತಡೆಯಲು ಕ್ರಮ
- ಪಟ್ಟಿಯಿಂದ ಈಗಾಗಲೇ 2 ಲಕ್ಷ ಮಹಿಳೆಯರನ್ನು ಕೈಬಿಟ್ಟ ಸರ್ಕಾರ
ಬೆಂಗಳೂರು (Bengaluru): ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ದೊಡ್ಡ ತಿದ್ದುಪಡಿ ನಡೆಸಲು ತೀರ್ಮಾನಿಸಿದೆ. ಅನರ್ಹ ಮಹಿಳೆಯರನ್ನು ಗುರುತಿಸುವುದರ ಜೊತೆಗೆ ಅವರ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಹಣ ವಿತರಣೆ ಮಾಡುವ ತೀರ್ಮಾನಕ್ಕೆ ಬಂದಿದೆ.
ಈ ಹಿಂದೆ ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರು ಹಣ ಪಡೆಯುತ್ತಿದ್ದರು. ಆದರೆ ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರು ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಜಿಎಸ್‌ಟಿ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಪತ್ತೆಯಾಗಿದೆ. ಇಂತಹ ಫಲಾನುಭವಿಗಳನ್ನು ಈಗಾಗಲೇ ಯೋಜನೆಯಿಂದ ಕೈಬಿಡಲಾಗಿದೆ.
ಇದನ್ನೂ ಓದಿ: ರೇಷನ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ರೆ ತಿದ್ದುಪಡಿಗೆ ಕೊನೆಯ ಅವಕಾಶ
ಇನ್ನೊಂದೆಡೆ, ಕೆಲವು ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದರೂ ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಸರ್ಕಾರ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಪರಿಶೀಲನೆ ಸಭೆ ನಡೆಸುತ್ತಿದೆ. ಫಲಾನುಭವಿಗಳ ಆದಾಯ ವಿವರಗಳನ್ನು ಮತ್ತೆ ಪರಿಶೀಲಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಈ ಮೂಲಕ ಯೋಜನೆ ಸದುಪಯೋಗವನ್ನು ಸುಸೂತ್ರವಾಗಿ ನಡೆಸಲು ಸರ್ಕಾರ ತುದಿಗಾಲಿನಲ್ಲಿ ನಿಂತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಕೊಡೋಕೆ ಅದೇನು ಸಂಬಳನಾ: ಸಚಿವ ಜಾರ್ಜ್
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಬಿಪಿಎಲ್ (BPL Card), ಎಪಿಎಲ್ (APL Card) ಹಾಗೂ ಅಂತ್ಯೋದಯ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯಾಗಿ ಹೆಸರು ಇರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರಾಗುತ್ತಾರೆ.
ಇದನ್ನೂ ಓದಿ: ಉಚಿತ ಬೋರ್ ವೆಲ್ ಕೊರೆಸಲು ಸಂಪೂರ್ಣ ಸಬ್ಸಿಡಿ, ರೈತರಿಂದ ಅರ್ಜಿ ಆಹ್ವಾನ
ಜೊತೆಗೆ, ಕುಟುಂಬದ ಯಜಮಾನಿ ಅಥವಾ ಪತಿ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ಅವರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
Major Changes in Gruha Lakshmi Scheme
Our Whatsapp Channel is Live Now 👇