ರೇಷನ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ರೆ ತಿದ್ದುಪಡಿಗೆ ಕೊನೆಯ ಅವಕಾಶ

ಕರ್ನಾಟಕದಲ್ಲಿ ಪಡಿತರ ಚೀಟಿಯ ತಿದ್ದುಪಡಿಗೆ ಆನ್ಲೈನ್ ಸೌಲಭ್ಯ ಒದಗಿಸಲಾಗಿದೆ. ವಿಳಾಸ, ಸದಸ್ಯರ ಹೆಸರು, ವಯಸ್ಸು ಸೇರಿದಂತೆ ಪ್ರಮುಖ ತಿದ್ದುಪಡಿಗಳಿಗೆ ಈ ತಿಂಗಳ ಅಂತ್ಯದವರೆಗೆ ಅರ್ಜಿ ಸಲ್ಲಿಸಬಹುದು.

  • ರೇಷನ್ ಕಾರ್ಡ್‌ ತಿದ್ದುಪಡಿ ಆನ್ಲೈನ್‌ನಲ್ಲಿ ಸೌಲಭ್ಯ
  • ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಅರ್ಜಿ ಸ್ವೀಕಾರ
  • ವಿಳಾಸ ಬದಲಾವಣೆ, ಸದಸ್ಯ ಸೇರ್ಪಡೆ, ಇ-ಕೆವೈಸಿ ತಿದ್ದುಪಡಿ ಲಭ್ಯ

ಬೆಂಗಳೂರು (Bengaluru): ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್‌ನಲ್ಲಿ (Ration Card Corrections) ತಪ್ಪು ಅಥವಾ ಅಪೂರ್ಣ ಮಾಹಿತಿಯಿಂದಾಗಿ ಅನುಭವಿಸುತ್ತಿರುವ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಆನ್ಲೈನ್ ತಿದ್ದುಪಡಿ ಸೌಲಭ್ಯವನ್ನು ಒದಗಿಸಿದೆ.

ಈ ಆಧುನಿಕ ವ್ಯವಸ್ಥೆಯ ಮೂಲಕ ಫಲಾನುಭವಿಗಳು ತಮ್ಮ ವಿಳಾಸ, ಪಡಿತರ ಅಂಗಡಿ, ಸದಸ್ಯರ ಹೆಸರು ಮತ್ತು ಇ-ಕೆವೈಸಿ ತಿದ್ದುಪಡಿಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು.

ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಗತ್ಯ ದಾಖಲೆಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ನೆರವಿನಿಂದ ಆನ್ಲೈನ್ ಮೂಲಕ ಅರ್ಜಿ (Apply Online) ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅರ್ಜಿಯ ಸ್ಥಿತಿಯನ್ನು ಆನ್ಲೈನ್‌ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: ಉಚಿತ ಬೋರ್ ವೆಲ್ ಕೊರೆಸಲು ಸಂಪೂರ್ಣ ಸಬ್ಸಿಡಿ, ರೈತರಿಂದ ಅರ್ಜಿ ಆಹ್ವಾನ

ಯಾವ ತಿದ್ದುಪಡಿಗಳು ಮಾಡಿಸಬಹುದು?

ಹುಟ್ಟಿದ ಮಕ್ಕಳ ಸೇರ್ಪಡೆ, ವಿಳಾಸ ಬದಲಾವಣೆ, ಪಡಿತರ ಚೀಟಿ ವರ್ಗ ಬದಲಾವಣೆ (APL Card, BPL Card), ನ್ಯಾಯಬೆಲೆ ಅಂಗಡಿ ಬದಲಾವಣೆ ಮತ್ತು ಇ-ಕೆವೈಸಿ ತಿದ್ದುಪಡಿ ಪ್ರಮುಖ ತಿದ್ದುಪಡಿಗಳಾಗಿವೆ. ಈ ಎಲ್ಲಾ ತಿದ್ದುಪಡಿಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಮಾಡಿಸಿಕೊಳ್ಳಬಹುದು.

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್ ಪ್ರತಿಗಳು, ಪಡಿತರ ಚೀಟಿ ಪ್ರತಿ, ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಸಂಬಂಧಿತ ದಾಖಲೆಗಳು (ಮರಣ ಪ್ರಮಾಣಪತ್ರ, ವಿಳಾಸ ಪೂರೈಕೆ ದಾಖಲೆ) ಅಗತ್ಯವಿರುತ್ತದೆ. OTP ದೃಢೀಕರಣಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಅವಶ್ಯಕವಾಗಿರುತ್ತದೆ.

ಇದನ್ನೂ ಓದಿ: ಇನ್ಮುಂದೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಕ್ಯಾನ್ಸಲ್, ರಾಜ್ಯ ಸರ್ಕಾರ ತೀರ್ಮಾನ!

ರೇಷನ್ ಕಾರ್ಡ್ ತಿದ್ದುಪಡಿ

ತಿದ್ದುಪಡಿ ಸ್ಥಿತಿಯನ್ನು ಆನ್ಲೈನ್‌ನಲ್ಲಿ ಪರಿಶೀಲಿಸುವ ಕ್ರಮ:

ಅಹವಾಲು ಸಂಖ್ಯೆಯನ್ನು ಒಳಗೊಂಡು ಆಹಾರ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ತಿದ್ದುಪಡಿ (Ration Card Update) ಅರ್ಜಿಯ ಸ್ಥಿತಿಯನ್ನು ಹಂತ ಹಂತವಾಗಿ ಪರಿಶೀಲಿಸಬಹುದು. ಜಿಲ್ಲೆಯ ಆಯ್ಕೆ ಮಾಡಿಕೊಂಡು, RC ಸಂಖ್ಯೆಯನ್ನು ನಮೂದಿಸಿ ಅರ್ಜಿಯ ಪ್ರಗತಿಯನ್ನು ಪಡೆಯಬಹುದು.

ಇದನ್ನೂ ಓದಿ: ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ವಾಪಾಸ್ ಕೊಡಲು ಒಂದು ವಾರ ಗಡುವು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಈ ತಿಂಗಳ ಅಂತ್ಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಪಡಿತರ ಚೀಟಿಯನ್ನು ಸರಿಯಾದ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ತಕ್ಷಣ ಅರ್ಜಿ ಸಲ್ಲಿಸಿ, ಸರ್ಕಾರದ ಪಡಿತರ ಸೌಲಭ್ಯವನ್ನು ನಿರಾಯಾಸವಾಗಿ ಪಡೆಯಿರಿ.

Online Correction for Ration Card in Karnataka

English Summary

======== Story End ========

Related Stories