ಉಚಿತ ಬೋರ್ ವೆಲ್ ಕೊರೆಸಲು ಸಂಪೂರ್ಣ ಸಬ್ಸಿಡಿ, ರೈತರಿಂದ ಅರ್ಜಿ ಆಹ್ವಾನ
2024-25ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್ ವೆಲ್ ಕೊರೆಸಲು ಪರಿಶಿಷ್ಟ ಜಾತಿ ರೈತರಿಗೆ ಅನುದಾನ ಮತ್ತು ಸಂಪೂರ್ಣ ಸಬ್ಸಿಡಿ ನೀಡಲಾಗುತ್ತಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಬಹುದು.
- ಗರಿಷ್ಠ 2 ಹೆಕ್ಟೇರ್ ವರೆಗೆ ಶೇ.90 ಬೋರ್ ವೆಲ್ ಕೊರೆಸಲು ಸಹಾಯಧನ ಲಭ್ಯ
- 1.5 ಲಕ್ಷದಿಂದ 6 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಾಲ ಸೌಲಭ್ಯ
- ಕೊಳವೆ ಬಾವಿ, ಪಂಪ್ ಸೆಟ್ ಮತ್ತು ಪೈಪ್ ಲೈನ್ ಸೌಲಭ್ಯ
ಬೆಂಗಳೂರು, ಕರ್ನಾಟಕ: ರೈತರು ತಮ್ಮ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸುಧಾರಿಸಿಕೊಳ್ಳಲು ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಗಂಗಾ ಕಲ್ಯಾಣ ಯೋಜನೆಯು (Ganga Kalyana Scheme) ವಿಶೇಷ ಅವಕಾಶ ನೀಡುತ್ತಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿಯ ರೈತರು ಬೋರ್ ವೆಲ್ (borewell subsidy) ಕೊರೆಸಲು ಹಾಗೂ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸಂಪೂರ್ಣ ಸಬ್ಸಿಡಿ ಸಹಿತ ಅನುದಾನ ಪಡೆಯಬಹುದು. ಈ ಮೂಲಕ ನೀರಾವರಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬಹುದು.
ಇದನ್ನೂ ಓದಿ: ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ವಾಪಾಸ್ ಕೊಡಲು ಒಂದು ವಾರ ಗಡುವು
ಬಳ್ಳಾರಿ ಜಿಲ್ಲೆಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ರೂ.153.53 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಶೇ.90ರಷ್ಟು ಅನುದಾನವನ್ನು ಪಡೆದು ಗರಿಷ್ಠ 2 ಹೆಕ್ಟೇರ್ ವರೆಗೆ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸಾಧಿಸಬಹುದಾಗಿದೆ.
ರೈತರು ಈ ಅವಕಾಶವನ್ನು ಬಳಸಿಕೊಳ್ಳಲು ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಯೋಜನೆಯ ಆಕರ್ಷಕ ವೈಶಿಷ್ಟ್ಯಗಳು:
ಈ ಯೋಜನೆಯ ವಿಶೇಷತೆಯು ರೈತರಿಗೆ 1.5 ಲಕ್ಷರಿಂದ 3 ಲಕ್ಷ ರೂಪಾಯಿ ವರೆಗೆ ಬೋರ್ ವೆಲ್ ನಿರ್ಮಾಣ ಸಾಲವನ್ನು ((borewell subsidy Loan) ಒದಗಿಸುವುದಾಗಿದೆ. ಪಂಪ್ ಸೆಟ್‌ಗೆ ವಿದ್ಯುತ್ ಪೂರೈಕೆಗಾಗಿ 50,000 ರೂಪಾಯಿ ವರೆಗೆ ಸಾಲ (Loan) ನೀಡಲಾಗುತ್ತದೆ. ಹತ್ತಿರದ ನದಿಗಳಿಂದ ನೀರಿನ ಪೈಪ್ ಲೈನ್ ಹಚ್ಚುವ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.
ಇದನ್ನೂ ಓದಿ: ಇನ್ಮುಂದೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಕ್ಯಾನ್ಸಲ್, ರಾಜ್ಯ ಸರ್ಕಾರ ತೀರ್ಮಾನ!
ರೈತರ ಭೂಮಿ ಆಧಾರಿತ ಅನುದಾನ ಸಹ ಲಭ್ಯವಿದೆ. 8 ಎಕರೆ ಭೂಮಿ ಹೊಂದಿರುವ ರೈತರಿಗೆ 4 ಲಕ್ಷ ರೂಪಾಯಿ ಹಾಗೂ 15 ಎಕರೆ ಭೂಮಿ ಹೊಂದಿರುವವರಿಗೆ 6 ಲಕ್ಷ ರೂಪಾಯಿವರೆಗೆ ಸಂಪೂರ್ಣ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ನಿರಂತರ ನೀರಾವರಿ ಸೌಲಭ್ಯ ದೊರೆಯುತ್ತದೆ.
ಅರ್ಹತೆಗಳು:
- ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
- ಹಳ್ಳಿಯ ರೈತರಿಗೆ ವಾರ್ಷಿಕ ಆದಾಯ 96 ಸಾವಿರಕ್ಕಿಂತ ಕಡಿಮೆ, ನಗರ ರೈತರಿಗೆ 1.03 ಲಕ್ಷಕ್ಕಿಂತ ಕಡಿಮೆ ಆದಾಯವಿರಬೇಕು.
- 18 ರಿಂದ 55 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
ಈ ಯೋಜನೆಯು ನೀರಾವರಿ ಸಮಸ್ಯೆಯಿಂದ ತೊಂದರೆ ಪಡುತ್ತಿರುವ ರೈತರ ಜೀವನಶೈಲಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಸಾಧ್ಯತೆಯಿದೆ.
Applications Invited for Ganga Kalyana Scheme borewell subsidy
Our Whatsapp Channel is Live Now 👇