Ads By Google
Bangalore News

ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್

ಈ ಬಾರೀ ಐಟಿಆರ್ ಸಲ್ಲಿಕೆ ಮಾಡುವವರ ಪೈಕಿ ಯಾರಾದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಇದ್ದರೆ, ಅಂಥವರು ಗೃಹಲಕ್ಷ್ಮೀ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ.

Ads By Google

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಚುನಾವಣೆ ಪ್ರಚಾರದ ವೇಳೆಯಲ್ಲೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಅದೇ ರೀತಿ 5 ಯೋಜನೆಗಳನ್ನ ಸಹ ಜಾರಿಗೆ ತರಲಾಗಿದ್ದು, ಜನರು ಅವುಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಅವುಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಪ್ರಮುಖವಾದದ್ದು ಎಂದರೆ ತಪ್ಪಲ್ಲ. ಈ ಯೋಜನೆಯನ್ನು ರಾಜ್ಯದ ಮಹಿಳೆಯರಿಗಾಗಿ ಜಾರಿಗೆ ತರಲಾಗಿದ್ದು, ಗೃಹಲಕ್ಷ್ಮಿ ಯೋಜನೆ ಶುರುವಾಗಿ ಈಗಾಗಲೇ 10 ತಿಂಗಳು ಕಳೆದು ಹೋಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯನ್ನು ನಡೆಸಿಕೊಂಡು ಹೋಗುಗ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್

ರಾಜ್ಯದಲ್ಲಿ 1.18 ಕೋಟಿಗಿಂತ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಸಾಕಷ್ಟು ಜನರು ಈ ಯೋಜನೆಯ ಮೂಲಕ ಹಣ ಪಡೆಯುತ್ತಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಬಳಸಿ ಮಹಿಳೆಯರು ತಮ್ಮ ಮನೆಯ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ, ಇನ್ನು ಕೆಲವರು ಆ ಹಣವನ್ನು ಕೂಡಿಟ್ಟು, ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಇನ್ನೂ ಕೂಡ 11ನೇ ಕಂತಿನ ಹಣ ಮಹಿಳೆಯರಿಗೆ ಬಂದಿಲ್ಲ.

ಶೀಘ್ರದಲ್ಲೇ 11ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಇದ್ದ ಆತಂಕ ಕಡಿಮೆ ಆಗಿದೆ.

ಕೋಳಿ ಸಾಕಾಣಿಕೆ ಉಚಿತ ತರಬೇತಿ! ಸರ್ಟಿಫಿಕೇಟ್ ಸೇರಿದಂತೆ ಊಟ ಮತ್ತು ವಸತಿಯೂ ಕೂಡ ಉಚಿತ

ಕೆಲವು ಮಹಿಳೆಯರಿಗೆ ಇನ್ನು ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ, ಅಂಥವರು ನೀಡಿರುವ ದಾಖಲೆ ಸರಿ ಇದೆಯಾ ಎಂದು ಚೆಕ್ ಮಾಡಬೇಕು. ಆಧಾರ್ ಕಾರ್ಡ್ NCPI ಮ್ಯಾಪಿಂಗ್ ಆಗಿದ್ಯಾ, ಆಧಾರ್ ಕಾರ್ಡ್ ಅನ್ನು (Aadhaar Card) ಬ್ಯಾಂಕ್ ಅಕೌಂಟ್ ಹಾಗೂ ರೇಷನ್ ಕಾರ್ಡ್ ಗೆ ಲಿಂಕ್ ಮಾಡಲಾಗಿದ್ಯಾ? ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿದ್ಯಾ? ಇದೆಲ್ಲವೂ ಸರಿ ಇದ್ದರೆ ಅಂಥವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಖಂಡಿತವಾಗಿ ಬರುತ್ತದೆ. ಆದರೆ ಇನ್ಮುಂದೆ ಇನ್ನೂ ಕೆಲವು ಮಹಿಳೆಯರಿಗೆ ಹಣ ಸಿಗುವುದಿಲ್ಲ..

ತಮ್ಮ ಜಮೀನುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ರಾಜ್ಯದ ಎಲ್ಲಾ ಆಸ್ತಿಗಳಿಗೆ ಲಿಂಕ್ ಕಡ್ಡಾಯ!

ಹೌದು, ಕೆಲವು ಮಹಿಳೆಯರು ನೀಡಿರುವ ಎಲ್ಲಾ ಮಾಹಿತಿ, ದಾಖಲೆಗಳು ಸರಿ ಇದ್ದರು ಸಹ ಅವರು ಗೃಹಲಕ್ಷ್ಮೀ ಯೋಜನೆ ಇಂದ ವಂಚಿತರಾಗುವ ಸಾಧ್ಯತೆ ಎಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ವಿಚಾರ ಏನು ಎಂದರೆ ಎಲ್ಲರೂ ಐಟಿಆರ್ ಸಲ್ಲಿಸುವುದಕ್ಕೆ ಜುಲೈ 31 ಕೊನೆಯ ದಿನಾಂಕ ಆಗಿದೆ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿರುವುದು ಆರ್ಥಿಕವಾಗಿ ಕಷ್ಟದಲ್ಲಿರುವ ಮಹಿಳೆಯರಿಗಾಗಿ.

ಹಾಗಾಗಿ ಈ ಬಾರೀ ಐಟಿಆರ್ ಸಲ್ಲಿಕೆ ಮಾಡುವವರ ಪೈಕಿ ಯಾರಾದರೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಇದ್ದರೆ, ಅಂಥವರು ಗೃಹಲಕ್ಷ್ಮೀ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ. ಈಗ ಐಟಿಆರ್ ಸಲ್ಲಿಕೆ ಮಾಡುವವರ ಪಟ್ಟಿ ಸಿದ್ದಪಡಿಸಿ ಅಂತವರಿಗೆ ಇನ್ಮುಂದೆ ಯೋಜನೆಯ ಹಣ ಸಿಗದೇ ಇರಬಹುದು.

Even if all the documents are correct, such women will not get Gruha Lakshmi Scheme money

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere