Ads By Google
Bangalore News

ಸ್ವಂತ ಕೃಷಿ ಭೂಮಿ ಇರೋರಿಗೆ ಉಚಿತ ಬೋರ್ ವೆಲ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ

ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರ ನೆಲದಲ್ಲಿ ಬೋರ್ವೆಲ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಸಹಾಯ ಸಿಗುತ್ತದೆ.

Ads By Google

ರಾಜ್ಯ ಸರ್ಕಾರವು ಬಡವರ ಕಷ್ಟಕ್ಕೆ ನೆರವಾಗುವ ಸರ್ಕಾರ ಆಗಿದೆ. ರೈತರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಆ ಮೂಲಕ ರೈತರಿಗೆ ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತಲೇ ಬಂದಿದೆ.

ಕೃಷಿ ಕೆಲಸ ಎಂದರೆ ಅಲ್ಲಿ ಮುಖ್ಯವಾಗಿ ನೀರಾವರಿ ವ್ಯವಸ್ಥೆ ಇರಬೇಕು. ಒಂದು ವೇಳೆ ನಿಮ್ಮ ಕೃಷಿ ನೆಲದಲ್ಲಿ ನೀರಾವರಿ ವ್ಯವಸ್ಥೆ ಚೆನ್ನಾಗಿಲ್ಲ ಎಂದರೆ, ನಿಮಗಾಗಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಮನೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಇದ್ರೂ ರೇಷನ್ ಕಾರ್ಡ್ ಬಂದ್ ಆಗುತ್ತಾ? ಸರ್ಕಾರದ ಹೊಸ ರೂಲ್ಸ್

ಗಂಗಾ ಕಲ್ಯಾಣ ಯೋಜನೆ

ರೈತರ ನೀರಾವರಿ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಗಂಗಾ ಕಲ್ಯಾಣ ಯೋಜನೆಯ (Ganga Kalyana Yojana) ಮೂಲಕ ರೈತರ ನೆಲದಲ್ಲಿ ಬೋರ್ವೆಲ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಸಹಾಯ ಸಿಗುತ್ತದೆ.

ಈ ಮೂಲಕ ರೈತರು ಕೃಷಿ ಕೆಲಸಕ್ಕೆ ಬೇಕಾಗುವ ನೀರನ್ನು ಬೋರ್ವೆಲ್ ಮೂಲಕ ಒದಗಿಸಿಕೊಳ್ಳಬಹುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಗಂಗಾ ಕಲ್ಯಾಣ ಯೋಜನೆ ಅಂದರೆ ಏನು?

ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರ ಕೃಷಿ ನೆಲದಲ್ಲಿ ತೆರೆದ ಬಾವಿ, ಕೊಳವೆ ಬಾವಿ ಅಥವಾ ಬೋರ್ವೆಲ್ ತೆರೆಯಲು ಸರ್ಕಾರದಿಂದ 1.5 ಲಕ್ಷದವರೆಗೂ ಉಚಿತ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ. ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ 3.5 ಲಕ್ಷದವರೆಗು ರೈತರಿಗೆ ನೀಡಲಾಗುತ್ತಿದೆ.

ಸ್ವಂತ ಆಸ್ತಿ, ಸೈಟ್, ಮನೆ, ಜಮೀನು ಇರುವವರಿಗೆ ಸರ್ಕಾರದಿಂದ ಹೊಸ ಆದೇಶ! ಖಡಕ್ ನಿರ್ಧಾರ

ಗಂಗಾ ಕಲ್ಯಾಣ ಯೋಜನೆಗೆ ಮಾನದಂಡ:

*ಅರ್ಜಿ ಹಾಕುವವರು ಹಳ್ಳಿಯವರಾದರೆ ಅವರ ವಾರ್ಷಿಕ ಆದಾಯ 90 ಸಾವಿರದ ಒಳಗಿರಬೇಕು, ಸಿಟಿಯವರಾದರೆ ಅವರ ವಾರ್ಷಿಕ ಆದಾಯ 1.03 ಲಕ್ಷದ ಒಳಗಿರಬೇಕು.
*18 ರಿಂದ 55 ವರ್ಷಗಳ ಒಳಗಿರುವವರು ಅರ್ಜಿ ಸಲ್ಲಿಸಬಹುದು
*ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ಮಾತ್ರ ಅರ್ಜಿ ಸಲ್ಲಿಸಬಹುದು
*ಅರ್ಜಿ ಹಾಕುವವರು ಸಣ್ಣ ಕೃಷಿಕ ಆದರೂ ಆಗಿರಬೇಕು.

ಇನ್ನು ಮುಂದೆಯೂ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸವನ್ನು ತಪ್ಪದೇ ಮಾಡಿ

ಅಗತ್ಯವಿರುವ ದಾಖಲೆಗಳು

*ಅರ್ಜಿ ಹಾಕುವವರ ಪ್ರಮಾಣ ಪತ್ರ
*ರೇಷನ್ ಕಾರ್ಡ್ (Ration Card)
*ಆಧಾರ್ ಕಾರ್ಡ್ (Aadhaar Card)
*ಪ್ಯಾನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಬಿಪಿಎಲ್ ಕಾರ್ಡ್
*ಕೃಷಿ ನೆಲದ ಕೂಡಿವಿಕೆ ರಸ್ತೆ ಕಡತದ ಕಾಪಿ
*ಬ್ಯಾಂಕ್ ಪಾಸ್ ಬುಕ್ (Bank Passbook)
*ಭೂಮಿಯ ಕಂದಾಯ ರಶೀದಿ
*ಸ್ವಯಂ ಘೋಷಣೆ ಪತ್ರ
*ಸುರಕ್ಷಿತ ಸ್ವಯಂ ಘೋಷಣೆ ಪತ್ರ.

ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ! ಆನ್ಲೈನ್ ಸುಲಭ ಪ್ರಕ್ರಿಯೆ ಇಲ್ಲಿದೆ

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ವಿಧಾನ

*ಅರ್ಜಿ ಸಲ್ಲಿಸುವವರು ಮೊದಲು ಈ https://kmdc.karnataka.gov.in/31/ganga-kalyana-schmeme/en ಲಿಂಕ್ ಗೆ ಭೇಟಿ ನೀಡಿ

*ಯೋಜನೆಯ ಹೆಸರು ಬರುವ ಆಪ್ಶನ್ ಸೆಲೆಕ್ಟ್ ಮಾಡಿ

*ಬಳಿಕ ಅಪ್ಲಿಕೇಶನ್ ಇರುವ ಪೇಜ್ ಬರುತ್ತದೆ, ಅದನ್ನು ಸೆಲೆಕ್ಟ್ ಮಾಡಿ

*ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳಿಗೂ ಸರಿಯಾಗಿ ಉತ್ತರಿಸಿ

*ಅವಶ್ಯಕತೆ ಇರುವ ಎಲ್ಲಾ ದಾಖಲೆಗಳನ್ನ ಅಪ್ಲೋಡ್ ಮಾಡಿ

*ಬಳಿಕ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

ಇಷ್ಟು ಕೆಲಸಗಳನ್ನು ಮಾಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Free bore well for agricultural land Farmers, Apply for Ganga Kalyana Yojana

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere