ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯೋ ಇಲ್ವೋ? ಈ ರೀತಿ ಸುಲಭವಾಗಿ DBT ಚೆಕ್ ಮಾಡಿಕೊಳ್ಳಿ
Gruha Lakshmi Scheme : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಕೂಡ ಇತ್ತೀಚೆಗೆ ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಬಿಡುಗಡೆ ಆಗಿದೆ.
Gruha Lakshmi Scheme : ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಸುಲವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮೂಲಕ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು ₹2000 ರೂಪಾಯಿ ಹಣ ಡಿಬಿಟಿ (DBT Status) ಮೂಲಕ ವರ್ಗಾವಣೆ ಆಗುತ್ತಿದೆ. ಈಗಾಗಲೇ 10 ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರನ್ನು ತಲುಪಿದೆ..
ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಅವಕಾಶ! ಆದ್ರೆ ಈ ದಾಖಲೆ ಇರಬೇಕಷ್ಟೆ
11ನೇ ಕಂತಿನ ಹಣ ಕೂಡ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಕೂಡ ಇತ್ತೀಚೆಗೆ ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಬಿಡುಗಡೆ ಆಗಿದೆ. ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೋ ಇಲ್ಲವೋ ತಿಳಿದುಕೊಳ್ಳಬೇಕು ಎಂದರೆ, ಡಿಬಿಟಿ ಸ್ಟೇಟಸ್ ಚೆಕ್ ಮಾಡಬೇಕು.
ಒಂದು ವೇಳೆ ನಿಮಗೆ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂದು ಗೊತ್ತಿಲ್ಲ ಎಂದರೆ, ಸುಲಭವಾಗಿ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ.. ಪೂರ್ತಿ ಲೇಖನ ಓದಿ..
ಅನ್ನಭಾಗ್ಯ ಯೋಜನೆಯ ಹಣ ಅಕೌಂಟ್ ಗೆ ಇನ್ನೂ ಬರ್ತಿಲ್ವಾ? ಈ ಒಂದು ಕೆಲಸ ತಪ್ಪದೇ ಮಾಡಿ
DBT Status ಚೆಕ್ ಮಾಡುವ ಬಗೆ
*DBT ಸ್ಟೇಟಸ್ ಚೆಕ್ ಮಾಡಲು ಮೊದಲು ನೀವು DBT Karnataka App ಇನ್ಸ್ಟಾಲ್ ಮಾಡಿರಬೇಕು. ಒಂದು ವೇಳೆ ಆಪ್ ಇಲ್ಲ ಎಂದರೆ
https://play.google.com/store/apps/details?id=com.dbtkarnataka ಈ ಲಿಂಕ್ ಮೂಲಕ ಆಪ್ ಇನ್ಸ್ಟಾಲ್ ಮಾಡಿ
*ಬಳಿಕ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ, Get OTP ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
*ನಿಮ್ಮ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ, ಈಗ Verify ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ವೆರಿಫೈ ಆದ ನಂತರ ಫಲಾನುಭವಿಗಳಿಗೆ ಸಂಬಂಧಿಸಿದ ಮಾಹಿತಿ ಬರುತ್ತದೆ. ಈಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಅನ್ನು ನಮೂದಿಸಿ
*ಈಗ Create MPin ಎನ್ನುವ ಆಪ್ಶನ್ ಬರುತ್ತದೆ, ಈಗ 4 ಸಂಖ್ಯೆಗಳ ಪಿನ್ ನಂಬರ್ ಹಾಕಿ, ಮತ್ತೊಮ್ಮೆ ಅದೇ ನಂಬರ್ ಎಂಟ್ರಿ ಮಾಡಿ, ಅದನ್ನು Submit ಮಾಡಿ. ಈಗ MPIN create ಆಗುತ್ತದೆ.
*ಈಗ ಬರುವ Select Beneficiary ಎನ್ನುವ ಆಪ್ಶನ್ ನಲ್ಲಿ ನೀವು ಆಯ್ಕೆ ಮಾಡಿರುವ ಫಲಾನುಭವಿಯನ್ನು ಸೆಲೆಕ್ಟ್ ಮಾಡಿ
*ಬಳಿಕ Mpin ಹಾಕಿ Login ಮಾಡಿ.
*ಈಗ ಓಪನ್ ಆಗುವ ಪೇಜ್ ನ ಎಡಭಾಗದಲ್ಲಿ Payment Status ಎನ್ನುವ ಒಂದು ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ
*ಬಳಿಕ ಗೃಹಲಕ್ಷ್ಮಿ DBT status ಎನ್ನುವ ಮತ್ತೊಂದು ಆಯ್ಕೆ ಕಾಣುತ್ತದೆ..ಅದನ್ನು ಕ್ಲಿಕ್ ಮಾಡಿ
*ಇದೆಲ್ಲವನ್ನು ಮಾಡಿದ ನಂತರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ (Bank Account) ಬಂದಿದ್ಯಾ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಗೊತ್ತಾಗುತ್ತದೆ.
Get DBT check For Gruha Lakshmi Scheme Money Debited Your Bank Account