ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣದ ಸುಳಿವೇ ಇರದವರಿಗೆ ಕೊನೆಗೂ ಸಿಹಿ ಸುದ್ದಿ!
Graha Lakshmi Yojana: ಸಾಕಷ್ಟು ಗೃಹಿಣಿಯರು ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ ತಮ್ಮ ಖಾತೆಯಲ್ಲಿ ಎಲ್ಲಾ ಮಾಹಿತಿಗಳು ದಾಖಲೆಗಳು ಸರಿಯಾಗಿ ಇದ್ದರೂ ಕೂಡ ತಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಎಂಬುದು ಹಲವು ಮಹಿಳೆಯರ ಬೇಸರ. ಇದೀಗ ಅಂತಹ ಮಹಿಳೆಯರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ(Graha Lakshmi Yojana) ಬಗ್ಗೆ ರಾಜ್ಯಾದ್ಯಂತ ಎಲ್ಲಾ ಕುಟುಂಬದ ಮಹಿಳೆಯರಿಗೂ ಬಹಳ ನಿರೀಕ್ಷೆ ಇದೆ. ಸಾಕಷ್ಟು ಜನರಿಗೆ ಎರಡು ಕಂತಿನ ಹಣ ಜಮಾ(2nd Installment) ಆಗಿದ್ದು ಆಗಿದೆ. ಆದರೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಹಣ ಸಂದಾಯವಾಗಿದೆಯೇ ಎನ್ನುವ ಪ್ರಶ್ನೆ ಬಂದ್ರೆ ಉತ್ತರ ಇಲ್ಲ ಎಂಬುದಾಗಿರುತ್ತದೆ ಹಾಗಾಗಿ ಸಾಕಷ್ಟು ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿಮಗೂ ಒಂದೂ ಕಂತಿನ ಹಣ ಬಂದಿಲ್ವಾ?
ಪ್ರತಿಯೊಬ್ಬರಿಗೂ ಅರ್ಜಿ ಸಲ್ಲಿಸಿದ ನಂತರ ತಮ್ಮ ಖಾತೆಗೂ ಹಣ ಸಂದಾಯ ಆಗಬೇಕು ಎನ್ನುವ ನಿರೀಕ್ಷೆ ಇರುವುದು ಸಹಜ ಆದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಸರ್ಕಾರ ಸಾಕಷ್ಟು ನಿಯಮಗಳನ್ನ ತಿಳಿಸಿತ್ತು. ಮೊದಲನೆಯದಾಗಿ ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿಯೇ ಇರಬೇಕು. ಎರಡನೆಯದಾಗಿ ಮನೆಯ ಯಜಮಾನ ಹೆಸರು ಆಕೆಯ ರೇಷನ್ ಕಾರ್ಡ್(Ration Card) ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ನಲ್ಲಿ ಒಂದೇ ತರನಾಗಿ ಇರಬೇಕು ಒಂದೇ ಒಂದು ಸಣ್ಣ ವ್ಯತ್ಯಾಸವಾದರೂ ಕೂಡ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಆಗುವುದಿಲ್ಲ.
ಇನ್ನು ಮೂರನೆಯದಾಗಿ ಬ್ಯಾಂಕ್ ಖಾತೆಗೆ ಕೆ ವೈ ಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕೂಡ ಕಡ್ಡಾಯ. ಈ ಮೇಲಿನ ನಿಯಮಗಳನ್ನು ಪಾಲಿಸದೆ ಇದ್ದರೆ ಅಂತವರ ಖಾತೆಗೆ ಹಣ ಸಂದಾಯ ವಾಗುವುದಿಲ್ಲ ಇದೇ ಕಾರಣಕ್ಕೆ ಮೊದಲ ಕಂತಿನ ಹಣ ಸುಮಾರು 12 ಲಕ್ಷ ಜನರಿಗೆ ಸಂದಾಯವಾಗಿಲ್ಲ.
ಯಾವಾಗ ಬರಲಿದೆ ಹಣ!
ಅಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆ ಸಿಕ್ಕಿದೆ ಇನ್ನು 45 ದಿನಗಳ ಅಂತರದಲ್ಲಿ ಎರಡು ಕಂತಿನ ಹಣವನ್ನು ಸರ್ಕಾರ ಜಮಾ ಮಾಡಿದೆ. ಮೊದಲ ಕಂತಿನ ಹಣ ಸುಮಾರು 96 ಲಕ್ಷ ಜನರಿಗೆ ಸಂದಾಯವಾಗಿದ್ದರೆ ಎರಡನೇ ಕಂತಿನ ಹಣ 61 ಲಕ್ಷ ಜನರಿಗೆ ಸಂದಾಯವಾಗಿದೆ ನವೆಂಬರ್ 10ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೂ ಕೂಡ ಹಣ ಸಂದಾಯವಾಗುವ ಭರವಸೆಯನ್ನು ಸರ್ಕಾರ ನೀಡಿದೆ.
ಹಣ ಬಾರದೆ ಇರುವುದಕ್ಕೆ ಕಾರಣ ಏನು? (Gruha Lakshmi Money Delayed)
ಸಾಕಷ್ಟು ಗೃಹಿಣಿಯರು ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ ತಮ್ಮ ಖಾತೆಯಲ್ಲಿ ಎಲ್ಲಾ ಮಾಹಿತಿಗಳು ದಾಖಲೆಗಳು ಸರಿಯಾಗಿ ಇದ್ದರೂ ಕೂಡ ತಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಎಂಬುದು ಹಲವು ಮಹಿಳೆಯರ ಬೇಸರ. ಆದ್ರೆ ಸರ್ಕಾರ ಈಗಾಗಲೇ ತಿಳಿಸಿರುವಂತೆ ನಿಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇದ್ದರೆ ಖಂಡಿತವಾಗಿಯೂ ಹಣ ಜಮಾ ಆಗುತ್ತದೆ.
ಇನ್ನು ಸ್ವತ: ಮಹಿಳೆಯರೇ ಪರಿಹರಿಸಿಕೊಳ್ಳಬೇಕಾದ ಸಮಸ್ಯೆಗಳನ್ನು ಹೊರತುಪಡಿಸಿ ಕೆಲವು ಸರ್ವರ್ ಸಮಸ್ಯೆಯಿಂದಾಗಿಯೂ ಅರ್ಜಿ ಸಲ್ಲಿಕೆಯಲ್ಲಿ ಸಮಸ್ಯೆ ಉಂಟಾಗಿದೆ. ಇಂತಹ ತೊಂದರೆ ತೊಡಕುಗಳನ್ನು ತಾವೇ ಸರಿಪಡಿಸಿಕೊಂಡು ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅನುಭವ ಯೋಜನೆಯಂತೆ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್(Gruha Lakshmi status) ಮಾಡಲು ಸಾಧ್ಯವಿಲ್ಲ ಆದರೆ ಯಾರ ಖಾತೆಗೆ ಹಣ ಸಂದಾಯ ಆಗಿಲ್ಲ ಅಂತಹ ಮಹಿಳೆಯರು ತಾವು ಸಲ್ಲಿಕೆ ಮಾಡಿದ ಅರ್ಜಿಗೆ ಸಿಕ್ಕಿರುವ ಸ್ವೀಕೃತಿ ಪ್ರತಿ, ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕಾಪಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಳೀಯ ಕಚೇರಿಗೆ ಹೋಗಿ ಸಿಡಿಪಿಓ ಅಧಿಕಾರಿಗಳಿಗೆ ಕೊಟ್ಟರೆ ಅವರು ನಿಮಗೆ ಯಾಕೆ ಹಣ ಸಂದಾಯ ಆಗಿಲ್ಲ ಎಂಬುದನ್ನು ಹೇಳುತ್ತಾರೆ. ಅದಕ್ಕೆ ಪರಿಹಾರ ಕಂಡು ಹಿಡಿಯುವುದು ಸುಲಭ ಹಾಗಾಗಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಲು ಇದು ಒಂದು ಉತ್ತಮ ಪರಿಹಾರ ಎನ್ನಬಹುದು.
Good news for those who have not received Grilahakshmi money for three months!
Follow us On
Google News |