ಬೆಂಗಳೂರು ಮಳೆ ಅವಘಡಗಳು; ಸಾಲ ಮಾಡಿ ಆದ್ರೂ ಪರಿಹಾರ ಕ್ರಮ: ಸಿಎಂ ಸಿದ್ದರಾಮಯ್ಯ

Story Highlights

ಬೆಂಗಳೂರು ಕಟ್ಟಡ ಕುಸಿತ ಅವಘಡ, ಬೆಂಗಳೂರು ಮಳೆ ಅವಘಡಗಳು ಸೇರಿದಂತೆ ಸಾಲ ಮಾಡಿ ಆದ್ರೂ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ

ಬೆಂಗಳೂರು (Bengaluru): ಬೆಂಗಳೂರು ಕಟ್ಟಡ ಕುಸಿತ ಅವಘಡದಲ್ಲಿ ಇಲ್ಲಿಯವರೆಗೆ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ (Karnataka CM Siddaramaiah) ರೂ. 5 ಲಕ್ಷ ಪರಿಹಾರ ಘೋಷಿಸಿದರು. ಮೃತ ದೇಹಗಳನ್ನು ಅವರ ಮನೆಗಳಿಗೆ ಸರ್ಕಾರ ತಲುಪಿಸಲಿದೆ ಎಂದು ಹೇಳಿದರು. ಗಾಯಾಳುಗಳಿಗೆ ಸರಕಾರ ಚಿಕಿತ್ಸೆಯನ್ನೂ ನೀಡಲಿದೆ ಎಂದರು.

ಕುಸಿತದ ಹಂತದಲ್ಲಿ ಬೆಂಗಳೂರಿನ ಮತ್ತೊಂದು ಕಟ್ಟಡ, ಕೂಡಲೇ ಕೆಡವಲು ಸೂಚನೆ

ಸಾಲ ಮಾಡಿ ಆದರು ಪ್ರವಾಹ ರಕ್ಷಣೆ ಕ್ರಮಗಳು

ವಿಪತ್ತು ನಿರ್ವಹಣೆಗೆ ರೂ.3 ಸಾವಿರ ಕೋಟಿ ಸಾಲ ಪಡೆದು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ಮಳೆಯಿಂದ ಎಲ್ಲೆಲ್ಲಿ ಅವಘಡಗಳು ಸಂಭವಿಸಿದರೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಳೆಯ ಸಮಸ್ಯೆಗೆ ಸರಕಾರ ಸ್ಪಂದಿಸುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದರು. ನೂರು ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಈ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಸರಕಾರಕ್ಕಿದೆ ಎಂದರು.

ಬೆಂಗಳೂರು: ಅನುಮತಿ ಪಡೆಯದೇ ಕಟ್ಟಡ ನಿರ್ಮಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಸಚಿವರಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಶಾಸಕ ಬೈರತಿ ಬಸವರಾಜು, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಭಾಗವಹಿಸಿದ್ದರು.

government has the power to face Bengaluru Rain Flood situation

Related Stories