ಉಚಿತ ಕರೆಂಟ್, ಗೃಹಜ್ಯೋತಿ ಯೋಜನೆ: ಮನೆ ಬದಲಿಸಿದರೂ ಸಿಗುತ್ತೆ ಬೆನಿಫಿಟ್
ಹಳೆಯ ಮನೆಯಿಂದ ಹೊಸ ಮನೆಗೆ ಶಿಫ್ಟ್ ಆದರೂ ಹೊಸ ಬಾಡಿಗೆ ಮನೆಯಲ್ಲೂ ನೀವು ಗೃಹಜ್ಯೋತಿ ಯೋಜನೆ ಮೂಲಕ ಉಚಿತ ಕರೆಂಟ್ ಬೆನಿಫಿಟ್ ಪಡೆದುಕೊಳ್ಳಬಹುದು
- ಮನೆ ಬದಲಿಸಿದರೂ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಿರಿ
- ಹಳೆಯ ಆರ್‌ಆರ್ ಸಂಖ್ಯೆ ಡಿ-ಲಿಂಕ್ ಮಾಡಬೇಕು.
- ರಾಜ್ಯಾದ್ಯಾಂತ 179078 ಡಿ-ಲಿಂಕ್ ಅರ್ಜಿಗಳು ಸ್ವೀಕಾರ
Gruha Jyothi Scheme : ಗೃಹಜ್ಯೋತಿ ಯೋಜನೆಯಿಂದ ರಾಜ್ಯದ ಅನೇಕ ಜನರಿಗೆ ಉಚಿತ ವಿದ್ಯುತ್ (Free Electricity) ಪಡೆಯುವ ಅವಕಾಶ ಲಭಿಸಿದೆ. ಆದರೆ, ಜನರಿಗೆ ಕೆಲವೊಮ್ಮೆ ಗೊಂದಲವೇನೆಂದರೆ, ಮನೆ ಬದಲಿಸಿದಾಗ ಯೋಜನೆಯ ಲಾಭ ಮುಂದುವರಿಸುವುದು ಹೇಗೆ? ಮತ್ತೆ ಗೃಹಜ್ಯೋತಿ ಯೋಜನೆ ಬೆನಿಫಿಟ್ ಪಡೆಯುವುದು ಹೇಗೆ ಎನ್ನುವುದು.
ಇತ್ತೀಚೆಗೆ ಇಂಧನ ಇಲಾಖೆ ಈ ಗೊಂದಲ ನಿವಾರಿಸಲು ಹೊಸ ಮಾರ್ಗೋಪಾಯವನ್ನು ತಿಳಿಸಿದೆ. ಹಳೆಯ ಮನೆ ಬದಲಾಯಿಸಿದ ಮೇಲೆ, ಹೊಸ ಮನೆಗೆ ಶಿಫ್ಟ್ ಆದರೂ ಈ ಯೋಜನೆಯ ಲಾಭ ಪಡೆಯಲು, ಹಳೆಯ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಬೇಕಾಗುತ್ತದೆ.
ಇದು ಪ್ರಕ್ರಿಯೆಯ ಒಂದು ಭಾಗ. ಈಗಾಗಲೇ, ರಾಜ್ಯಾದ್ಯಾಂತ 179078 ಡಿ-ಲಿಂಕ್ ಅರ್ಜಿಗಳು ಸ್ವೀಕರವಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 131936 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಹಣ ಇನ್ಮೇಲೆ ತಪ್ಪದೆ ಖಾತೆಗೆ ಜಮಾ ಆಗುತ್ತೆ: ಕೆ.ಹೆಚ್.ಮುನಿಯಪ್ಪ
ಹಳೆಯ ಆರ್‌ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಮನೆ ಅಥವಾ ಬಾಡಿಗೆ ಮನೆಗಳಲ್ಲಿ ಪೂರಕ RR ಸಂಖ್ಯೆ ಮೂಲಕ ಮತ್ತೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದಂತೆ, “ಈ ಯೋಜನೆ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತಿದೆ. ವಿದ್ಯುತ್ ಬಿಲ್ (Electricity Bill) ಕಡಿತದ ಮೂಲಕ ಬಹಳಷ್ಟು ಅನುಕೂಲ ಮಾಡಿಕೊಡಲಾಗಿದೆ, ಜೊತೆಗೆ ಪ್ರಕ್ರಿಯೆ ಸರಳಗೊಳಿಸಲು, ಡಿ-ಲಿಂಕ್ ಸೇವೆಯನ್ನು ಸಾಫ್ಟ್‌ವೇರ್ ಮೂಲಕ ಕಾರ್ಯಗತಗೊಳಿಸಲಾಗಿದೆ”.
ಇದನ್ನೂ ಓದಿ: ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ!
How to De-link:
ಗ್ರಾಹಕರು https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ಹಳೆಯ ಮನೆಯ ಗೃಹಜ್ಯೋತಿ ಯೋಜನೆಗೆ ನೀಡಿರುವ ಆರ್ ಆರ್ ಸಂಖ್ಯೆ ಡಿಲಿಂಕ್ ಮಾಡಿಕೊಳ್ಳಬಹುದು. ಪೋರ್ಟಲ್ ಓಪನ್ ಆಗದಿದ್ದರೆ, ಕ್ಯಾಶೆ ಮೆಮರಿ ಕ್ಲಿಯರ್ ಮಾಡಿ ಪುನಃ ಪ್ರಯತ್ನಿಸಬಹುದು.
ಇನ್ನು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಈ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಕೂಡ ಬಹಳ ಮಹತ್ವದ ಯೋಜನೆಯಾಗಿದೆ.
Gruha Jyothi Scheme: How to Continue Benefits After Shifting Homes
Our Whatsapp Channel is Live Now 👇