ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಬಗ್ಗೆ ಡಿಕೆ ಶಿವಕುಮಾರ್ ಕೊಟ್ರು ಸಿಹಿ ಸುದ್ದಿ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಅಕ್ಕಿ ಹಣ ಶೀಘ್ರವೇ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  • ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಅಕ್ಕಿ ಶೀಘ್ರ ವಿತರಣೆ.
  • 3 ತಿಂಗಳಿನಿಂದ ಫಲಾನುಭವಿಗಳಿಗೆ ಹಣ ಮತ್ತು ಅಕ್ಕಿ ವಿತರಣೆ ವಿಳಂಬ.
  • ಎಲ್ಲಾ 5 ಗ್ಯಾರಂಟಿಗಳು ನಿರಂತರ: ಡಿಕೆ ಶಿವಕುಮಾರ್

ಬೆಂಗಳೂರು (Bengaluru): ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತೀಚೆಗೆ ಮಾತನಾಡಿದಂತೆ, ಗೃಹಲಕ್ಷ್ಮಿ (Gruha Lakshmi Scheme) ಮತ್ತು ಅನ್ನಭಾಗ್ಯ ಯೋಜನೆಗಳ (Annabhagya Scheme) ಹಣ ಮತ್ತು ಅಕ್ಕಿಯನ್ನು ಫಲಾನುಭವಿಗಳಿಗೆ ಶೀಘ್ರವಾಗಿ ವಿತರಿಸಲಾಗುತ್ತದೆ.

ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಬಾಕಿ ಮೊತ್ತವನ್ನು ಈಗ ಶೀಘ್ರವೇ ವಿತರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಹಣ ಇನ್ಮೇಲೆ ತಪ್ಪದೆ ಖಾತೆಗೆ ಜಮಾ ಆಗುತ್ತೆ: ಕೆ.ಹೆಚ್.ಮುನಿಯಪ್ಪ

ಈ ಕುರಿತು ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, “ನಾವು ಕೊಟ್ಟ ಮಾತಿನಂತೆ ಕಾರ್ಯನಿರ್ವಹಿಸುತ್ತೇವೆ, ಎಲ್ಲ 5 ಗ್ಯಾರಂಟಿಗಳು ನಿರಂತರವಾಗಿ ಮುಂದುವರಿಯುತ್ತವೆ” ಎಂದು ಮತ್ತೂಮ್ಮೆ ತಿಳಿಸಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಮಾತನಾಡಿ, ಹಣ ಮತ್ತು ಅಕ್ಕಿಯ ವಿತರಣೆಯಲ್ಲಿ ವಿಳಂಬ ಆಗಿದ್ದರೂ, ಇದು ಶೀಘ್ರದಲ್ಲಿಯೇ ಪರಿಹಾರಗೊಳ್ಳಲಿದೆ.

Gruha Lakshmi Scheme

ನಾವು ಜನರ ಭರವಸೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದ ಡಿಕೆ ಶಿವಕುಮಾರ್ ಅವರು ಯಾವುದೇ ಯೋಜನೆ ನಿಲ್ಲುವುದಿಲ್ಲ, ಈ ಬಗ್ಗೆ ಕ್ರಮಕ್ಕೆ ಸೂಚಿಸಿ ಈ ಕೂಡಲೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ಅವರಿಂದ ಬಂದ ಈ ಸ್ಪಷ್ಟನೆ ಇತ್ತೀಚೆಗೆ ಜನರಲ್ಲಿ ಇದ್ದ ಗೊಂದಲಗಳಿಗೆ ತೆರೆ ಬಿದ್ದಾಂತಾಗಿದೆ.

ಇದನ್ನೂ ಓದಿ: ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ!

ಅನ್ನಭಾಗ್ಯ ಯೋಜನೆ

ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು (CM Siddaramaiah) ಕೂಡ ಮಾತನಾಡಿದ್ದು, ಯೋಜನೆಗಳ ಬಾಕಿ ಹಣ ಕೂಡಲೇ ಬಿಡುಗಡೆಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ, ಅಲ್ಲದೆ ಯೋಜನೆಗಳು ಸ್ಥಗಿತವಾಗುತ್ತವೆ ಎಂಬುದು ವದಂತಿ ಆಗಿದ್ದು, ಈ ಯೋಜನೆಗಳು ನಿರಂತರ ಮುಂದುವರೆಯುತ್ತವೆ ಎಂಬ ಭರವಸೆ ನೀಡಿದ್ದಾರೆ.

Gruha lakshmi and Anna Bhagya Funds Distributed Soon

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories