Bangalore NewsKarnataka News

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಪೆಂಡಿಂಗ್ ಹಣ ಕೂಡ ಜಮೆ! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದ ಮಹಿಳೆಯರು ನಂಬಿಕೊಂಡಿದ್ದಾರೆ. ತಮಗೆ ಮನೆ ನಡೆಸಲು ಅಥವಾ ಸ್ವಂತ ಖರ್ಚುಗಳನ್ನು ನೋಡಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ಇಂದ ಬರುವ ₹2000 ರೂಪಾಯಿ ಸಹಾಯ ಮಾಡುತ್ತಿದೆ. ಈ ಯೋಜನೆ ಜಾರಿಗೆ ಬಂದು, 1 ವರ್ಷ ಕಳೆದಿದೆ. ಆದರೆ ಎಲ್ಲಾ ಮಹಿಳೆಯರು ಕೂಡ ಈ ಒಂದು ಯೋಜನೆಯ ಸೌಲಭ್ಯವನ್ನು ಇನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ. ಆ ಮಹಿಳೆಯರು ಆತಂಕದಲ್ಲಿ ಇದ್ದಾರೆ…

ಹೌದು, ಈ ವರ್ಷ ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣ ಇನ್ನು ಕೂಡ ಮಹಿಳೆಯರ ಬ್ಯಾಂಕ್ ಖಾತೆ ತಲುಪದ ಕಾರಣ, ಇನ್ನು ಕೂಡ ತಮಗೆ ಹಣ ಬಂದಿಲ್ಲ ಎಂದು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು, ಹಾಗೆಯೇ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸಿದರೆ ಅವರಿಗೆ ಸರಿಯಾದ ಉತ್ತರ ಸಿಗುತ್ತಿಲ್ಲ, ತಮಗೆ ಹಣ ಬರುತ್ತೋ ಇಲ್ಲವೋ ಎನ್ನುವ ಗೊಂದಲಕ್ಕೆ ಉತ್ತರ ಅಂತೂ ಸಿಕ್ಕಿರಲಿಲ್ಲ. ಇದರಿಂದ ಮಹಿಳೆಯರಿಗೆ ಆತಂಕ ಕಡಿಮೆ ಆಗಿರಲೇ ಇಲ್ಲ.

Gruha Lakshmi pending money is also deposited for the women of this district

ಈ ಬಗ್ಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದು, ಆ ವೇಳೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿರಲಿಲ್ಲ, ಶೀಘ್ರದಲ್ಲೇ ಪೆಂಡಿಂಗ್ ಇರುವ ಹಣ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಜೂನ್ ಹಾಗೂ ಜುಲೈ ತಿಂಗಳ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಎಂದಿದ್ದಾರೆ.

ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ, ಸರ್ಕಾರವು ಈಗಾಗಲೇ 26.65 ಲಕ್ಷ ರೂಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಯ 11 ಹಾಗೂ 12ನೇ ಕಂತಿನ ಹಣವಾಗಿ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ಕೆಲವು ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಈ ಹಣ ತಲುಪಿದೆ. ಹಾಗಿದ್ದಲ್ಲಿ ಯಾವ ಜಿಲ್ಲೆಯ ಮಹಿಳೆಯರಿಗೆ ಹಣ ತಲುಪಿದೆ, ಹಣ ಬಂದಿದ್ಯಾ ಎಂದು ಚೆಕ್ ಮಾಡುವುದು ಹೇಗೆ? ಈ ಎಲ್ಲಾ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ಪೂರ್ತಿಯಾಗಿ ಲೇಖನ ಓದಿ..

ಮೊದಲನೆಯ ಹಂತದಲ್ಲಿ ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಕಲಬುರಗಿ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಈ ಜಿಲ್ಲೆಯ ಮಹಿಳೆಯರಿಗೆ ಈ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಆಗಿದೆ.

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ (Bank Balance) ಚೆಕ್ ಮಾಡುವ ಮೂಲಕ ಹಾಗೂ ಡಿಬಿಟಿ ಕರ್ನಾಟಕ ಆಪ್ ನಲ್ಲಿ ಚೆಕ್ ಮಾಡುವ ಮೂಲಕ, ನಿಮ್ಮ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು.

Gruha Lakshmi pending money is also deposited for the women of this district

Our Whatsapp Channel is Live Now 👇

Whatsapp Channel

Related Stories