ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ರೆ ಈ ರೀತಿ ಮಾಡಲು ಸೂಚನೆ

ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ ಬಂದಿಲ್ಲದಿದ್ದರೆ ಇ-ಕೆವೈಸಿ, ಆಧಾರ್ ಸೀಡಿಂಗ್ ಅನಿವಾರ್ಯ. ಮೂರು ತಿಂಗಳ ಬಾಕಿ ಹಣದ ಭರವಸೆ ಕೊಟ್ಟಿದ್ದಾರೆ ಸಚಿವೆ.

  • ಗೃಹಲಕ್ಷ್ಮಿ ಹಣಕ್ಕೆ ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡಬೇಕು
  • SMS ಇಲ್ಲದಿದ್ದರೂ ಬ್ಯಾಂಕ್ ಪಾಸ್ಬುಕ್ ಪರಿಶೀಲನೆ ಅಗತ್ಯ
  • ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಭರವಸೆ: ಮೂರು ತಿಂಗಳ ಬಾಕಿ ಹಣ ಶೀಘ್ರವೇ

ಗೃಹಲಕ್ಷ್ಮಿ ಯೋಜನೆ (Gruha lakshmi Scheme) ಮೂಲಕ ಸರ್ಕಾರದಿಂದ ಬರುವ ₹2000 ನೆರವು (financial support) ದೊಡ್ಡ ಆಶಾಕಿರಣ. ಆದರೆ ಕೆಲವರಿಗೆ ಈ ಹಣ ಇನ್ನೂ ಖಾತೆಗೆ ತಲುಪಿಲ್ಲ ಎನ್ನುವುದು ಬೇಸರದ ಸಂಗತಿ.

ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ (Lakshmi Hebbalkar), “ಮುಂದಿನ ಕೆಲ ದಿನಗಳಲ್ಲಿ ಮೂರು ತಿಂಗಳ ಬಾಕಿ ಹಣ ಖಾತೆಗೆ ಜಮೆಯಾಗುತ್ತದೆ” ಎಂಬ ಭರವಸೆ ನೀಡಿದ್ದಾರೆ. ಆದರೆ ಹಿಂದಿನ ಕಂತು ಇನ್ನೂ ಲಭ್ಯವಾಗಿಲ್ಲದವರಿಗೆ ಕೆಲವು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಪ್ರಮುಖವಾಗಿ, ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ (bank account) ಇ-ಕೆವೈಸಿ (e-KYC) ಹಾಗೂ ಆಧಾರ್ ಸೀಡಿಂಗ್ ಮಾಡಿಸಬೇಕಾಗುತ್ತದೆ. NPCI ಕಡ್ಡಾಯಗೊಳಿಸಿದ್ದು, ಈ ಪ್ರಕ್ರಿಯೆ ಇಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ.

ಇದನ್ನೂ ಓದಿ: ಈಗಾಗಲೇ ರೆಷನ್ ಕಾರ್ಡ್ ಅರ್ಜಿ ಸಲ್ಲಿಸಿರುವ ಈ ಜಿಲ್ಲೆಯವರಿಗೆ ಬಿಗ್ ಅಪ್ಡೇಟ್

ಹಣ ಬಾರದಿರುವವರು ತಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ್ನು ಪರಸ್ಪರ ಲಿಂಕ್ ಮಾಡಿಸಬೇಕು. ಇದರಿಂದ ಯೋಜನೆಗೆ ಸಂಬಂಧಪಟ್ಟ ಗುರುತಿನ ದೃಢೀಕರಣ ಸರಿ ಇರುತ್ತದೆ.

Gruha Lakshmi Scheme

ಹೆಚ್ಚಿನ ಬಾರಿ ಹಣ ಜಮೆಯಾಗಿದ್ದರೂ ಮಹಿಳೆಯರ ಮೊಬೈಲ್‌ಗೆ SMS ಬರುವುದಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್ ಗೆ ಹೋಗಿ ಪಾಸ್ಬುಕ್ ಚೆಕ್ ಮಾಡುವುದು ಅತ್ಯಂತ ಮುಖ್ಯ. ಅಲ್ಲಿಯೇ ನಿಖರವಾದ ವಿವರ ಲಭ್ಯವಾಗುತ್ತದೆ.

ಅಲ್ಲದೆ, ನೀವು ಬ್ಯಾಂಕ್ ಗೆ ಹೋಗಿ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಇ-ಕೆವೈಸಿ ಸಮಸ್ಯೆ ಪರಿಹರಿಸಿಕೊಳ್ಳುವುದು ಉತ್ತಮ. ಈ ಮೂಲಕ ಹಣ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ವಿದ್ಯಾವಿಕಾಸ ಯೋಜನೆ, ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ

ಇಂತಹ ಸಮಸ್ಯೆಗಳು ಬಗೆಹರಿದಾಗ, ಗೃಹಲಕ್ಷ್ಮಿ ಯೋಜನೆಯ ನಿಜವಾದ ಲಾಭ ಮಹಿಳೆಯರಿಗೆ ತಲುಪುತ್ತದೆ. ಇನ್ನು ಕೆಲ ಜಿಲ್ಲೆಯ ಮಹಿಳೆಯರಿಗೆ ನಾಲ್ಕು, ಐದು ತಿಂಗಳ ಹಣವೂ ಖಾತೆ ಸೇರಿಲ್ಲ ಎಂಬುದಾಗಿ ದೂರಿದ್ದಾರೆ. ಒಟ್ಟಾರೆ ಈ ತಿಂಗಳ ಕೊನೆಯ ಒಳಗಾಗಿ ಮಹಿಳೆಯರಿಗೆ ಬಾಕಿ ಹಣ ತಲುಪುವ ನಿರೀಕ್ಷೆ ಇದೆ.

Gruha lakshmi Scheme Delay, Here’s What to Do

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories