ಈಗಾಗಲೇ ರೆಷನ್ ಕಾರ್ಡ್ ಅರ್ಜಿ ಸಲ್ಲಿಸಿರುವ ಈ ಜಿಲ್ಲೆಯವರಿಗೆ ಬಿಗ್ ಅಪ್ಡೇಟ್

ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಹೊಸ ಅರ್ಜಿ ಸಲ್ಲಿಕೆ, ತಿದ್ದುಪಡಿ ಪ್ರಕ್ರಿಯೆ ನಡೆದಿದ್ದು, ಕೆಲವು ಜಿಲ್ಲೆಗಳಿಗೆ ಮೊದಲು ನೀಡಿಕೆ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನಲಾಗಿದೆ.

  • ಕೆಲವು ಜಿಲ್ಲೆಗಳಿಗೆ ಮೊದಲು ರೇಷನ್ ಕಾರ್ಡ್ ವಿತರಣೆ
  • ಗ್ರಾಮ ಒನ್, ಕರ್ನಾಟಕ ಒನ್‌ನಲ್ಲಿ ಹೆಚ್ಚು ಅರ್ಜಿ ಸಲ್ಲಿಕೆ
  • ಯೋಜನೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ

ಬೆಂಗಳೂರು (Bengaluru): ರಾಜ್ಯದ ಹಲವಾರು ಬಡ ಕುಟುಂಬಗಳು ನಿರೀಕ್ಷೆಯೊಂದಿಗೆ ಸರ್ಕಾರಿ ಯೋಜನೆಗಳ (government schemes) ಪ್ರಯೋಜನ ಪಡೆಯಲು ರೇಷನ್ ಕಾರ್ಡ್ (Ration Card) ನಿರೀಕ್ಷಿಸುತ್ತಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಉಪಯೋಗ ಪಡೆಯಲು ಇದರ ಅಗತ್ಯವಿದೆ ಎಂಬುದು ಗೊತ್ತೇ ಇದೆ.

ರೇಷನ್ ಕಾರ್ಡ್ ವಿತರಣೆಯಲ್ಲಿ ಈ ಬಾರಿ ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಬಾಗಲಕೋಟೆ, ಹಾವೇರಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ ಜಿಲ್ಲೆಗಳ ನಿವಾಸಿಗಳಿಗೆ ಮೊದಲ ಪ್ರಾಧಾನ್ಯತೆ ಇದೆ ಎನ್ನಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿದ್ಯಾವಿಕಾಸ ಯೋಜನೆ, ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ

ಈ ಹಿಂದಿನ ಹಂತದಲ್ಲಿ ಗ್ರಾಮ ಒನ್ (Grama One) ಮತ್ತು ಕರ್ನಾಟಕ ಒನ್ (Karnataka One) ಕೇಂದ್ರಗಳಲ್ಲಿ ಜನರು ಅರ್ಜಿ ಸಲ್ಲಿಸಿ ಅಥವಾ ತಿದ್ದುಪಡಿ ಮಾಡಿಕೊಂಡು, ಅರ್ಜಿ ಪ್ರಕ್ರಿಯೆಯನ್ನು ಮುಗಿಸಿದ್ದರು.

ಬಿಪಿಎಲ್ (BPL) ಕಾರ್ಡ್‌ಗಾಗಿ ಕಾಯುತ್ತಿರುವ ಕುಟುಂಬಗಳು ತಮ್ಮ ಅರ್ಜಿಯ ಸ್ಥಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಯಾರಿಗೆ ಹಾಗೂ ಯಾವ ಜಿಲ್ಲೆಗಳಿಗೆ ಕಾರ್ಡ್ ವಿತರಿಸಲಾಗುತ್ತದೆ ಎಂಬುದನ್ನು ಅರ್ಜಿ ವಿಲೇವಾರಿ ನಂತರ ನಿರ್ಧರಿಸಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿ

ಇದನ್ನೂ ಓದಿ: ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಹೊಸ ಕಡ್ಡಾಯ ನಿಯಮ!

ಇದರ ಜೊತೆಗೆ, ಬಡತನ ರೇಖೆಗಿಂತ ಮೇಲಿರುವವರು ಬಿಪಿಎಲ್ ಕಾರ್ಡ್ ಅನ್ನು ಕೊಂಡಿರುವುದು ಬೆಳಕಿಗೆ ಬಂದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹವರು ಸ್ವಯಂ ಇಚ್ಛೆಯಿಂದ ತಮ್ಮ ಕಾರ್ಡ್‌ಗಳನ್ನು ರದ್ದುಪಡಿಸದಿದ್ದರೆ, ದಂಡ ಕೂಡ ವಿದಿಸಬಹುದಾಗಿದ್ದು ಜೊತೆಗೆ ಕಾರ್ಡ್ ಕೂಡ ಕ್ಯಾನ್ಸಲ್ ಆಗಲಿದೆ.

ಸರ್ಕಾರದ ಸ್ಪಷ್ಟ ಆದೇಶವು, ನಕಲಿ ಅಥವಾ ಅನರ್ಹ ಕಾರ್ಡ್‌ಗಳನ್ನು ಹೊಂದಿರುವವರಿಗೆ ಶಿಸ್ತು ಕ್ರಮ ಅನುಸರಿಸಲಾಗುವುದು ಎಂದು ಎಚ್ಚರಿಸಿದೆ. ಯಾವುದೇ ಹಕ್ಕು ಅಥವಾ ಪ್ರಯೋಜನ ಪಡೆಯುವ ಮುನ್ನ, ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂಬ ಸಂದೇಶ ಇದಾಗಿದೆ.

Priority Ration Cards for Select Districts

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories