Gruha Lakshmi Yojana : ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಗೆ (Bank Account) ತಲುಪುತ್ತಿಲ್ಲ, ಅದರಲ್ಲೂ ಜೂನ್ ಮತ್ತು ಜುಲೈ ತಿಂಗಳ ಹಣ ಇನ್ನು ಕೂಡ ಬಂದಿಲ್ಲ ಎಂದು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು..

ಸರ್ಕಾರ ತಮಗೆ ಹಣ ವರ್ಗಾವಣೆ ಮಾಡುತ್ತೋ ಇಲ್ಲವೋ ಎಂದು ತಲೆಕೆಡಿಸಿಕೊಂಡಿದ್ದರು, ಅಂಥವರಿಗೆ ಈಗ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಇಂದು ಅಥವಾ ನಾಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ..

Gruha Lakshmi Yojana funds have been released, Check the women of this district

ಹೌದು, ಇದರ ಬಗ್ಗೆ ರಾಜ್ಯ ಸರ್ಕಾರದ ಕಡೆಯಿಂದಲೇ ಮಾಹಿತಿ ಸಿಕ್ಕಿದೆ. ಇಂದು ಅಥವಾ ನಾಳೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಮಾಡಲಾಗುತ್ತದೆ  ಎಂದು ಮಾಹಿತಿ ಸಿಕ್ಕಿದೆ.

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮತ್ತೆ ಅವಕಾಶ, ಏನೆಲ್ಲಾ ಬದಲಾವಣೆ ಮಾಡಬಹುದು? ಇಲ್ಲಿದೆ ಮಾಹಿತಿ

ಇನ್ನೇನು ವರಮಹಾಲಕ್ಷ್ಮಿ ಹಬ್ಬ ಬರುತ್ತಿದ್ದು, ಈ ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಇವತ್ತು ಅಥವಾ ನಾಳೆ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಈ ಕೆಲವು ಜಿಲ್ಲೆಯ ಮಹಿಳೆಯರಿಗೆ ಈ ಒಂದು ಯೋಜನೆಯ ಹಣ ಸಿಗುತ್ತದೆ.

ಇನ್ನು ಮೊದಲ ಹಂತದಲ್ಲಿ ಯಾವ ಊರುಗಳ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆ ಎಂದು ನೋಡುವುದಾದರೆ, ಮೊದಲ ಹಂತದಲ್ಲಿ ಕಲಬುರ್ಗಿ, ಬಳ್ಳಾರಿ, ಬೆಳಗಾವಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಈ ಜಿಲ್ಲೆಗಳಲ್ಲಿ ನೆಲೆಸಿರುವ ಮಹಿಳೆಯರಿಗೆ ಇಂದು ಅಥವಾ ನಾಳೆ ಗೃಹಲಕ್ಷ್ಮಿ ಯೋಜನೆಯ ಹಣ ಲಭಿಸುತ್ತದೆ. ಬುಧವಾರದ ಒಳಗೆ ರಾಜ್ಯದ ಎಲ್ಲಾ ಮಹಿಳೆಯರಿಗೆ ತಲುಪಲಿದೆ..

ಹೌದು, ಇದು ಸರ್ಕಾರವು ಮಹಿಳೆಯರಿಗೆ ನೀಡುತ್ತಿರುವ ಗುಡ್ ನ್ಯೂಸ್ ಆಗಿದ್ದು, ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ತಾಂತ್ರಿಕ ದೋಷಗಳ ಕಾರಣ ಇನ್ನು ಮಹಿಳೆಯರ ಖಾತೆಗೆ ಜಮೆ ಆಗಿರಲಿಲ್ಲ.

ಕುರಿ ಸಾಕಾಣಿಕೆ, ಉಚಿತ ಊಟ ಹಾಗೂ ವಸತಿಯೊಂದಿಗೆ 10 ದಿನಗಳ ಕುರಿ ಸಾಕಾಣಿಕೆ ತರಬೇತಿ! ಅರ್ಜಿಆಹ್ವಾನ

ಆದರೆ ಈ ತಿಂಗಳು ಕೊನೆಗು ಹಬ್ಬಗಳ ನಡುವೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜೂನ್ ತಿಂಗಳ ಹಣ ಬಿಡುಗಡೆ ಆಗುತ್ತಿದ್ದು, ಮಹಿಳೆಯರು ಇದರಿಂದ ಬಹಳ ಸಂತೋಷವಾಗಿದ್ದಾರೆ. .

ಇದೀಗ ಮೊದಲ ಹಂತದಲ್ಲಿ ಸರ್ಕಾರವು 26.55 ಲಕ್ಷ ಮಹಿಳೆಯರಿಗೆ ಅರ್ಹತೆ ಇರುವವರಿಗೆ ಜೂನ್ ತಿಂಗಳ ಹಣ ಇವತ್ತೇ ಬಿಡುಗಡೆ ಆಗಲಿದೆ. ಇಂದು ಅಥವಾ ಬುಧವಾರದ ಒಳಗೆ ಜೂನ್ ತಿಂಗಳ ಹಣ ಬಿಡುಗಡೆ ಆಗಲಿದ್ದು, ಇನ್ನು ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ.

Gruha Lakshmi Yojana funds have been released, Check the women of this district