ರೈತರು ಎಷ್ಟೇ ಕಷ್ಟಪಟ್ಟರೂ, ಎಷ್ಟೇ ನಿಷ್ಠೆಯಿಂದ ಕೆಲಸ ಮಾಡಿದರೂ ಕೂಡ ಅವರು ಅಂದುಕೊಂಡ ಹಾಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಇದಂತೂ ಸತ್ಯ. ಏಕೆಂದರೆ ಕೃಷಿ ನಮ್ಮ ದೇಶದ ಮೂಲ ಉದ್ಯೋಗ, ಉದ್ಯಮವೇ ಆಗಿದ್ದರು ಸಹ, ಕೃಷಿ ಕೆಲಸ ಮಾಡುವವರಿಗೆ ಉತ್ತಮವಾದ ಆದಾಯ ಅಂತೂ ಇಲ್ಲ. ಹಾಗಾಗಿ ಸರ್ಕಾರ ರೈತರನ್ನು ಸಪೋರ್ಟ್ ಮಾಡುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಅದರ ಮೂಲಕ ರೈತರಿಗೆ ಅರ್ಥಿಕವಾಗಿ ಸಹಾಯ ಮಾಡುತ್ತದೆ.
ಈ ಮೂಲಕ ರೈತರು ಕಷ್ಟಪಡದ ಹಾಗೆ ಆದಷ್ಟು ಸಹಾಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರ ಪರವಾಗಿ ಅನೇಕ ಯೋಜನೆಗಳನ್ನೇ ಜಾರಿಗೆ ತಂದಿದೆ. ಕೃಷಿ ಕೆಲಸಕ್ಕೆ ಸಪೋರ್ಟ್ ಮಾಡುವುದರ ಜೊತೆಗೆ, ರೈತರು ತಮ್ಮದೇ ಆದ ಸ್ವಂತ ಉದ್ಯೋಗ ಶುರು ಮಾಡಿ, ಶುರು ಮಾಡಿ, ಅದರ ಮೂಲಕ ಉತ್ತಮವಾದ ಲಾಭ ಗಳಿಸಲು ಸಹಾಯ ಮಾಡಬೇಕು ಎನ್ನುವುದು ಕೂಡ ಸರ್ಕಾರದ ಉದ್ದೇಶ ಆಗಿದ್ದು, ಅದಕ್ಕಾಗಿಯೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ..
ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ, ಇನ್ಮುಂದೆ ಪೋಸ್ಟ್ ಆಫೀಸ್‌ನಲ್ಲೇ ಸಿಗುತ್ತೆ 90 ಸಾವಿರ ಪರ್ಸನಲ್ ಲೋನ್!
ರೈತರು ಹಳ್ಳಿಯಲ್ಲೇ ಇದ್ದುಕೊಂಡು, ಕೃಷಿಯ ಜೊತೆಗೆ ಹೆಚ್ಚು ಹಣಕಾಸು ಗಳಿಕೆ ಮಾಡಬಹುದಾದ ಕೆಲವು ಕೆಲಸಗಳಿವೆ, ಅವುಗಳನ್ನು ಮಾಡಲು ಸರ್ಕಾರ ಪ್ರೋತ್ಸಾಹ ಕೊಡುತ್ತಿದೆ. ಅಂಥ ಕೆಲಸಗಳಲ್ಲಿ ಕುರಿ ಸಾಕಾಣಿಕೆ ಕೂಡ ಒಂದು.
ಈಗ ಕುರಿಗಳ ಮಾಂಸಕ್ಕೆ ಬಹಳ ಬೇಡಿಕೆ ಇದೆ, ಈ ಕಾರಣಕ್ಕೆ ಕುರಿ ಸಾಕಾಣಿಕೆಗೆ ಭಾರಿ ಬೇಡಿಕೆ ಇದ್ದು, ಇದೀಗ ಸರ್ಕಾರವು ಕುರಿ ಸಾಕಾಣಿಕೆ ಮಾಡುವುದಕ್ಕೆ ತರಬೇತಿ, ಕೊಡುವುದಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ರೈತರು ಈ ಒಂದು ಸೌಲಭ್ಯಕ್ಕೆ ಅಪ್ಲೈ ಮಾಡುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಯೋಣ..
ಉಚಿತ ವಸತಿ ಜೊತೆಗೆ ಕುರಿ ಸಾಕಾಣಿಕೆ ಟ್ರೇನಿಂಗ್:
ಇದೀಗ ಸರ್ಕಾರವು ಹೊಸದಾಗಿ ಕುರಿ ಮತ್ತು ಕೋಳಿ ಸಾಕಾಣಿಕೆ ತರಬೇತಿ ಶುರು ಮಾಡಲಿದೆ. ಈ ತರಬೇತಿ ಆಗಸ್ಟ್ 20 ರಿಂದ ಆಗಸ್ಟ್ 29ರ ವರೆಗೂ ನಡೆಯಲಿದೆ. ಹಳ್ಳಿಯಲ್ಲಿದ್ದು, ಯಾರೆಲ್ಲಾ ಯಾವುದೇ ಉದ್ಯೋಗ ಮಾಡುತ್ತಿಲ್ಲವೋ ಅಂಥ ಯುವಕರು ಈ ತರಬೇತಿ ಕೊಡಲಾಗುತ್ತದೆ. 18 ರಿಂದ 45 ವರ್ಷಗಳ ಒಳಗಿನವರು ಈ ಒಂದು ತರಬೇತಿ ಪಡೆಯಲು ಅರ್ಹರಾಗುತ್ತಾರೆ. ಆಸಕ್ತಿ ಇರುವ ಯುವಕರು 9110865650 ಈ ನಂಬರ್ ಗೆ ಕರೆಮಾಡಿ, ತರಬೇತಿಗೆ ಮೊದಲೇ ರಿನಿಸ್ಟರ್ ಮಾಡಿಸಿಕೊಳ್ಳಬಹುದು.
ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಇಎಂಐ ಕಟ್ಟಲಾಗದವರಿಗೆ ಬಂಪರ್ ಸುದ್ದಿ! ನೆಮ್ಮದಿಯ ವಿಚಾರ
ದಾವಣಗೆರೆಯಲ್ಲಿ ತರಬೇತಿ:
ಇದು ಇನ್ನೊಂದು ತರಬೇತಿ ಆಗಿದ್ದು, 2 ದಿನಗಳ ಕಾಲ ನಡೆಯಲಿದೆ. ಆಗಸ್ಟ್ 9 ಮತ್ತು ಆಗಸ್ಟ್ 10 ರಂದು ಎರಡು ದಿನಗಳ ಕಾಲ ನಡೆಯಲಿದೆ. ಈ ತರಬೇತಿ ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಕಾಪಿ,2 ಪಾಸ್ ಪೋರ್ಟ್ ಸೈಜ್ ಫೋಟೋ, SC/ST ವರ್ಗದವರು ಕ್ಯಾಸ್ಟ್ ಸರ್ಟಿಫಿಕೇಟ್ ಇವುಗಳ ಜೊತೆಗೆ ಹೋಗಬೇಕು. ಈ ತರಬೇತಿ ದಾವಣಗೆರೆ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಇದಕ್ಕಾಗಿ ಯಾವುದೇ ಭತ್ಯೆ ಸಿಗುವುದಿಲ್ಲ.
Apply For 10 Days Sheep Farming Training with Free Accommodation
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.