ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ, ಇನ್ಮುಂದೆ ಪೋಸ್ಟ್ ಆಫೀಸ್‌ನಲ್ಲೇ ಸಿಗುತ್ತೆ 90 ಸಾವಿರ ಪರ್ಸನಲ್ ಲೋನ್!

Personal Loan : ಪೋಸ್ಟ್ ಆಫೀಸ್‌ RD ಖಾತೆ ಹೊಂದಿರುವವರಿಗೆ ಮತ್ತೊಂದು ಸೌಲಭ್ಯ ಸಿಗುತ್ತಿದ್ದು, ಇನ್ಮುಂದೆ ನೀವು ಪರ್ಸನಲ್ ಲೋನ್ (Personal Loan) ಕೂಡ ಪಡೆಯಬಹುದು.

Bengaluru, Karnataka, India
Edited By: Satish Raj Goravigere

Personal Loan : ಮೊದಲೆಲ್ಲಾ ಲೋನ್ ಪಡೆಯುವುದಕ್ಕೆ ಬ್ಯಾಂಕ್ (Bank Loan) ಮೇಲೆ ಮಾತ್ರ ಅವಲಂಬಿಸಿರುತ್ತಿದ್ದರು. ಆದರೆ ಈಗ ಹಾಗಿಲ್ಲ, ಬ್ಯಾಂಕ್ ಮಾತ್ರವಲ್ಲದೇ ಪೋಸ್ಟ್ ಆಫೀಸ್ ನಲ್ಲಿ ಕೂಡ ಹಲವು ಸೌಲಭ್ಯಗಳನ್ನು ಪಡೆಯಬಹುದು. ಆರಂಭದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಿಗುತ್ತಿದ್ದದ್ದು ಕೆಲವು ಸೇವೆಗಳು ಮಾತ್ರ.

ಪತ್ರಗಳನ್ನು ತಲುಪಿಸುವುದು, ಆಫೀಸ್ ಅಥವಾ ಕೋರ್ಟ್ ಅಥವಾ ಸರ್ಕಾರಿ ಇಲಾಖೆಯ ನೋಟಿಸ್ ತಲುಪಿಸುವುದು, ಸಣ್ಣ ಉಳಿತಾಯ ಖಾತೆ ಹೊಂದುವುದು, ಮನಿ ಆರ್ಡರ್ ಕಳಿಸುವುದು ಈ ಸೌಲಭ್ಯಗಳು ಮಾತ್ರ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿತ್ತು.

from now on you can get 90 thousand personal loan at the post office

ಆದರೆ ಈಗ ಪೋಸ್ಟ್ ಆಫೀಸ್ ನಲ್ಲಿ ಅನೇಕ ಸೌಲಭ್ಯಗಳು ಲಭ್ಯವಿದೆ. ಇಲ್ಲಿ ನೀವು ಹೆಚ್ಚು ಉಳಿತಾಯ ಮಾಡಬಹುದು, ಖಾತೆ ತೆರೆಯಬಹುದು. ಹಲವು ಯೋಜನೆಗಳ ಸೌಲಭ್ಯ ಪಡೆಯಬಹುದು. ಎಟಿಎಂ ರೀತಿಯಲ್ಲಿ ಬಳಸಬಹುದು.

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಇಎಂಐ ಕಟ್ಟಲಾಗದವರಿಗೆ ಬಂಪರ್ ಸುದ್ದಿ! ನೆಮ್ಮದಿಯ ವಿಚಾರ

ಹೀಗೆ ಅನೇಕ ಸೇವೆಗಳು ಲಭ್ಯವಿದೆ. ಪೋಸ್ಟ್ ಆಫೀಸ್ ನ ಸೇವೆಗಳು ವಿಸ್ತಾರ ಹೆಚ್ಚಾಗಿದ್ದು, ಹೆಚ್ಚಿನ ಜನರು ಬ್ಯಾಂಕ್ ಗೆ ಹೋಗುವುದಕ್ಕಿಂತ ಪೋಸ್ಟ್ ಆಫೀಸ್ ಸೇವೆಗಳನ್ನೇ ಬಳಸಲು ಇಷ್ಟಪಡುತ್ತಿದ್ದಾರೆ ಎಂದರೂ ತಪ್ಪಲ್ಲ.

ಪೋಸ್ಟ್ ಆಫೀಸ್ ನ RD ಯೋಜನೆಯ ವಿಷಯದಲ್ಲಿ ಇದೀಗ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಸಾಮಾನ್ಯವಾಗಿ ಪೋಸ್ಟ್ ಆಫೀಸ್ ನಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುವವರು RD ಖಾತೆ ಹೊಂದಿರುತ್ತಾರೆ, RD ಎಂದರೆ ರಿಕರಿಂಗ್ ಡೆಪಾಸಿಟ್.

RD ಯಲ್ಲಿ ಪ್ರತಿ ತಿಂಗಳು ಕೂಡ ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡುವುದು, ಇದರಲ್ಲಿ ನಿಮಗೆ 5 ವರ್ಷಗಳ ನಂತರ ರಿಟರ್ನ್ಸ್ ಬರುತ್ತದೆ. ಒಂದು ವೇಳೆ ನೀವು 5 ವರ್ಷ ತುಂಬುವ ಮೊದಲೇ, RD ಹಣ ಕಟ್ಟುವುದನ್ನು ನಿಲ್ಲಿಸಿದರು ಕೂಡ, 5 ವರ್ಷಗಳ ನಂತರವೇ ಈ ಯೋಜನೆಯ ಹಣ ನಿಮಗೆ ಸಿಗುವುದು.

ಈ ಒಂದು ವಿಚಾರದಲ್ಲಿ ಜನರಿಗೆ ಹೆಚ್ಚಿನ ಲಾಭವಿದೆ. RD ಯೋಜನೆಯಲ್ಲಿ ಹೂಡಿಕೆ ಮಾಡಲು ವಯಸ್ಸಿನ ಲಿಮಿಟ್ಸ್ ಇಲ್ಲ, ಯಾವುದೇ ವಯಸ್ಸಿನವರು ಹೂಡಿಕೆ ಮಾಡಬಹುದು, ಹಾಗೆಯೇ ಎಷ್ಟೇ ಹಣವನ್ನು ಬೇಕಾದರೂ ಹೂಡಿಕೆ ಮಾಡಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಂಪರ್ ಸುದ್ದಿ, ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಡಬಲ್ ಲಾಭ!

ಹಾಗಾಗಿ ಇದು ಒಳ್ಳೆಯ ಯೋಜನೆ ಆಗಿದೆ. RD ಖಾತೆ ಬಡವರಿಗೆ ಹಾಗೂ ಮಧ್ಯಮವರ್ಗದ ಜನರಿಗೆ ಬಹಳ ಉಪಯುಕ್ತವಾದ ಯೋಜನೆ ಎಂದರೆ ತಪ್ಪಲ್ಲ. ಈ ಸೌಲಭ್ಯಗಳ ಜೊತೆಗೆ RD ಖಾತೆ ಹೊಂದಿರುವವರಿಗೆ ಮತ್ತೊಂದು ಸೌಲಭ್ಯ ಸಿಗುತ್ತಿದ್ದು, ಇನ್ಮುಂದೆ ನೀವು ಪರ್ಸನಲ್ ಲೋನ್ (Personal Loan) ಕೂಡ ಪಡೆಯಬಹುದು.

RD ಖಾತೆ ಶುರು ಮಾಡಿದ 1 ವರ್ಷದ ನಂತರ ಪರ್ಸನಲ್ ಲೋನ್ (Personal Loan) ಪಡೆಯುವ ಅರ್ಹತೆ ನಿಮಗೆ ಸಿಗುತ್ತದೆ. ಇದರಲ್ಲಿ ನೀವು ಸಿಂಗಲ್ ಅಕೌಂಟ್ ಹೊಂದಿದ್ದರೆ, 45 ಸಾವಿರವರೆಗು ಪರ್ಸನಲ್ ಲೋನ್ ಪಡೆಯಬಹುದು, ಜಾಯಿಂಟ್ ಅಕೌಂಟ್ ಹೊಂದಿರುವವರು 90 ಸಾವಿರ ವರೆಗು ಪರ್ಸನಲ್ ಲೋನ್ ಪಡೆಯಬಹುದು.

ಹಾಗೆಯೇ ಈ Loan ಗಳಿಗೆ ಬಡ್ಡಿದರ ಕೂಡ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಈ ವಿಷಯಗಳು RD ಖಾತೆ ಹೊಂದಿರುವವರಿಗೆ ಅನುಕೂಲ ಆಗಲಿದ್ದು, ಈ ಸೌಲಭ್ಯಗಳನ್ನಿ ಪಡೆಯಿರಿ.

from now on you can get 90 thousand personal loan at the post office