Fixed Deposit : ನಾವು ಎಷ್ಟೇ ಸಂಪಾದನೆ ಮಾಡಿದರೂ ಸಹ, ಅದರಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡಿ, ಹೂಡಿಕೆ ಮಾಡಿದರೆ, ನಮ್ಮ ಭವಿಷ್ಯಕ್ಕೆ ಒಳ್ಳೆಯದು. ಇದರಿಂದ ಬದುಕಿನಲ್ಲಿ ಭವಿಷ್ಯವನ್ನು ಚೆನ್ನಾಗಿ ಕಟ್ಟಿಕೊಳ್ಳಬಹುದು. ಹಲವಾರು ಜನರು ಇದೇ ಪ್ಲಾನ್ ನಲ್ಲಿ ಇರುತ್ತಾರೆ.
ಹೂಡಿಕೆಗೆ ಉತ್ತಮ ಆಯ್ಕೆ ಯಾವುದು ಎಂದು ನೋಡುವುದಾದರೆ, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗಳಲ್ಲಿ Fixed Deposit ಮಾಡುವುದು ಎಂದರೆ ತಪ್ಪಲ್ಲ. ಇದರಿಂದ ಬಹಳಷ್ಟು ಲಾಭ ಸಿಗಲಿದ್ದು, ಒಳ್ಳೆಯ ಬಡ್ಡಿದರ ಕೂಡ ಸಿಗುತ್ತದೆ. ಹಾಗಾಗಿ ಹೂಡಿಕೆಗೆ ಇದು ಒಳ್ಳೆಯ ಆಯ್ಕೆ.
ಒಂದು ವೇಳೆ ನೀವು FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ಅದಕ್ಕಾಗಿ SBI ನ ಈ ಒಂದು FD ಯೋಜನೆ ಒಳ್ಳೆಯ ಆಯ್ಕೆ ಎಂದರೆ ತಪ್ಪಲ್ಲ. State Bank Of India ತಮ್ಮ ಗ್ರಾಹಕರಿಗಾಗಿ ಒಂದು ವಿಶೇಷವಾದ FD ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಅತ್ಯುತ್ತಮವಾದ ರಿಟರ್ನ್ಸ್ ನಿಮಗೆ ಸಿಗುತ್ತದೆ.
ಈ ಒಂದು ಯೋಜನೆ ಯಾವುದು? ಇದರಿಂದ ಏನೆಲ್ಲಾ ಪ್ರಯೋಜನ ನಿಮಗೆ ಸಿಗುತ್ತದೆ ಎಂದು ತಿಳಿಸುತ್ತೇವೆ.. ಹಾಗೆಯೇ ಈ ಯೋಜನೆಯ ಫಲಾನುಭವ ಪಡೆಯುವುದು ಹೇಗೆ ಎಂದು ಕೂಡ ನೋಡೋಣ..
ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ, 1 ಕೆಜಿ ಜಿರಳೆ ರೇಟ್ ಕೇಳಿದ್ರೆ ತಲೆ ತಿರುಗುತ್ತೆ! ಇಲ್ಲಿದೆ ವೈರಲ್ ಸುದ್ದಿ
SBI ಅಮೃತ್ ಕಲಶ್ ಯೋಜನೆ:
ಇದು SBI ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಇದರಲ್ಲಿ ನೀವು ಸುಮಾರು 2 ಕೋಟಿ ರೂಪಾಯಿಗಳವರೆಗು ಹೂಡಿಕೆ ಮಾಡಬಹುದು. ಇದು 2023 ರಲ್ಲಿ ಏಪ್ರಿಲ್ ನಲ್ಲಿ ಜಾರಿಗೆ ಬಂದ ಯೋಜನೆ ಆಗಿದ್ದು, 400 ದಿನಗಳ ಅವಧಿಯ FD ಹೂಡಿಕೆಯ ಯೋಜನೆ ಆಗಿದೆ.
ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಹಣಕ್ಕೆ ಸುರಕ್ಷತೆ ಸಿಗುತ್ತದೆ, ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ. ಈ ಯೋಜನೆಯಲ್ಲಿ 2024ರ ಸೆಪ್ಟೆಂಬರ್ ವರೆಗೂ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಮತ್ತೊಂದು ಒಳ್ಳೆಯ ಸೌಲಭ್ಯ ಸಿಗಲಿದ್ದು, ಅದು ಈ FD ಯೋಜನೆಯಲ್ಲಿ ಸಿಗುವ ಬಡ್ಡಿದರ. ಹೆಚ್ಚು ಬಡ್ಡಿದರ ಸಿಗುವ ಕಾರಣ, ಇದರಲ್ಲಿ ಹೂಡಿಕೆ ಮಾಡುವುದಕ್ಕೆ ಜನರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ.
ಇನ್ಮುಂದೆ ನಿಮ್ಮ ಚಿನ್ನಾಭರಣ ಕಳ್ಳತನ ಆದ್ರೆ ಅಥವಾ ಕಳೆದು ಹೋದ್ರೂ ಪೂರ್ತಿ ಹಣ ಸಿಗುತ್ತೆ! ಹೀಗೆ ಮಾಡಿ
ಈ ಅಮೃತ್ ಕಲಶ್ FD ಯೋಜನೆಯ ಅಡಿಯಲ್ಲಿ, ಸಾಮಾನ್ಯ ಜನರಿಗೆ 7.10% ಬಡ್ಡಿದರ ಸಿಗಲಿದ್ದು, ಹಿರಿಯ ನಾಗರೀಕರಿಗೆ 7.60% ಬಡ್ಡಿದರ ಸಿಗುತ್ತದೆ ಎಂದು ಮಾಹಿತಿ ಸಿಗಲಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಶುರುವಾದ ಈ ಒಂದು ಯೋಜನೆಗೆ ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಮೊದಲಿಗೆ 2023ರ ಜೂನ್ ಗೆ ಈ ಯೋಜನೆ ಕೊನೆಯಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹೆಚ್ಚು ಇಷ್ಟಪಡುತ್ತಿರುವ ಕಾರಣ, ಅಮೃತ್ ಕಲಶ್ ಯೋಜನೆಯ ಅವಧಿಯನ್ನು ಹೆಚ್ಚಿಸಲಾಗಿದ್ದು, 2024ರ ಸೆಪ್ಟೆಂಬರ್ ವರೆಗು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶವಿದೆ. ಆಸಕ್ತಿ ಇರುವವರು ಹೂಡಿಕೆ ಮಾಡಬಹುದು.
Bumper Scheme for State Bank Account Holders, get double profit for your fixed Deposit
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.