ಬಂಗಾರ, ಚಿನ್ನ ಇದು ನಮ್ಮ ದೇಶದಲ್ಲಿ ಹೆಚ್ಚಾಗಿ ಬಳಸುವ ಲೋಹ ಎಂದರೆ ತಪ್ಪಲ್ಲ. ಅದೆಷ್ಟೋ ಜನರು ಚಿನ್ನವನ್ನು ತುಂಬಾ ಇಷ್ಟಪಟ್ಟು ಖರೀದಿ (Buy Gold) ಮಾಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಆಭರಣಗಳನ್ನು (Gold Jewellery) ಧರಿಸುವುದು, ಚಿನ್ನ ಖರೀದಿ ಮಾಡುವುದು ಅಂದರೆ ತುಂಬಾ ಇಷ್ಟ.
ಚಿನ್ನ ಒಂದು ಅಲಂಕಾರಿಕ ಆಭರಣ ಎನ್ನುವುದರ ಜೊತೆಗೆ ಪಾರಂಪರಿಕೆಯ ವಸ್ತುವಾಗಿ ಕೂಡ ಭಾರತದಲ್ಲಿ ಕಂಡುವರುವುದನ್ನು ನಾವು ನೋಡಿರುತ್ತೇವೆ. ಹಲವು ಕುಟುಂಬಗಳಲ್ಲಿ ಬಹಳಷ್ಟು ವರ್ಷಗಳಿಂದ ಚಿನ್ನದ ಆಭರಣಗಳನ್ನು ಉಳಿಸಿಕೊಂಡು ಬಂದಿರುತ್ತಾರೆ.
ಚಿನ್ನದ ಬಗ್ಗೆ ಇರುವ ಆಸೆ ಮತ್ತು ಆಸಕ್ತಿ ಒಂದು ಕಡೆಯಾದರೆ, ಇದನ್ನು ಇನ್ವೆಸ್ಟ್ಮೆಂಟ್ ರೀತಿಯಲ್ಲಿ ಹೂಡಿಕೆ ಮಾಡುವವರು ಇನ್ನೊಂದು ಕಡೆ. ಕಷ್ಟಕಾಲದಲ್ಲಿ ಚಿನ್ನ ಇದ್ದರೆ ಸಹಾಯ ಆಗುತ್ತದೆ ಎನ್ನುವ ಯೋಚನೆ ಇಂದೇ ಹಲವಾರು ಜನರು ಚಿನ್ನ ಖರೀದಿ ಮಾಡುತ್ತಾರೆ.
ಕಾರ್ ಲೋನ್ ಇಎಂಐ ಕಟ್ಟಿಲ್ಲ ಅಂತ ಬ್ಯಾಂಕಿನವರು ಕಾರ್ ಸೀಜ್ ಮಾಡೋಕೆ ಬಂದ್ರೆ ಏನ್ ಮಾಡಬೇಕು?
ಮತ್ತೊಂದು ಕಡೆ ಚಿನ್ನ ಖರೀದಿಯ ಬಗ್ಗೆ ಜನರಲ್ಲಿ ಭಯ ಕೂಡ ಇದೆ. ಅದಕ್ಕೆ ಕಾರಣ ಚಿನ್ನದ ಬೆಲೆ (Gold Price) ದಿನದಿಂದ ಗಗನಕ್ಕೆ ಮುಟ್ಟುತ್ತಿದೆ ಎನ್ನುವುದರ ಜೊತೆಗೆ, ಕಳ್ಳತನದ ಭಯ ಕೂಡ ಇದೆ..
ಅಕಸ್ಮಾತ್ ಯಾರಾದರೂ ಚಿನ್ನ ಖರೀದಿ ಮಾಡಿದರೆ ಎನ್ನುವ ಭಯ ಕೂಡ ಇರುತ್ತದೆ. ಅದರ ಜೊತೆಗೆ ಈಗ ಪ್ರಕೃತಿ ವಿಕೋಪ ಬಂದು, ಮನೆಯಲ್ಲಿರುವ ಚಿನ್ನವೆಲ್ಲಾ ನಾಶವಾದರೆ ಎನ್ನುವ ಭಯ ಕೂಡ ಜನರಲ್ಲಿದ್ದು, ಒಂದು ವೇಳೆ ಈ ರೀತಿ ನಿಮ್ಮ ಚಿನ್ನದ ಆಭರಣಗಳು ಕಳ್ಳತನವಾದರೆ, ಅಥವಾ ಪ್ರಕೃತಿ ವಿಕೋಪದಲ್ಲಿ ಹಾನಿಯಾದರೆ ಏನು ಮಾಡಬೇಕು?
ನಿಮ್ಮ ಚಿನ್ನವನ್ನು ವಾಪಸ್ ಪಡೆಯುವುದಕ್ಕೆ ಕೆಲವು ಮಾರ್ಗಗಳಿವೆ. ಅವುಗಳ ಬಗ್ಗೆ ಇಂದು ತಿಳಿಯೋಣ.. ಚಿನ್ನ ಖರೀದಿ ಬಗ್ಗೆ ಬೇಸರ ಇಟ್ಟುಕೊಳ್ಳಬೇಡಿ..
ಒಂದು ವೇಳೆ ನೀವು ಚಿನ್ನ ಕಳುವಾಗಿ ಬಿಡುತ್ತದೆ ಎನ್ನುವ ಭಯ ಹೊಂದಿದ್ದರೆ, ನಿಮ್ಮ ಹತ್ತಿರುವ ಇರುವ ಚಿನ್ನಕ್ಕಾಗಿ ವಿಮೆ (Gold Insurance) ಮಾಡಿಸಿಕೊಳ್ಳಬಹುದು. ಇದನ್ನು ನೀವು ಚಿನ್ನ ಖರೀದಿ ಮಾಡುವಾಗ ಮಾಡಿಸಬಹುದಾಗಿದ್ದು, ಇದೊಂದು ಉಚಿತವಾದ ವಿಮೆ (Free Insurance) ಆಗಿರುತ್ತದೆ.
ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಫಿಕ್ಸೆಡ್ ಇಟ್ರೆ ಎಷ್ಟು ರಿಟರ್ನ್ಸ್ ಬರುತ್ತೆ? ಒಟ್ಟಾರೆ ಸಿಗೋ ಬಡ್ಡಿ ಎಷ್ಟು ಗೊತ್ತಾ?
ಚಿನ್ನಕ್ಕಾಗಿಯೇ ವಿಶೇಷವಾಗಿ ಈ ರೀತಿ ವಿಮೆ ಮಾಡಿಸಬಹುದು ಅಥವಾ ಹೋಮ್ ವಿಮೆಯಲ್ಲಿ ಚಿನ್ನವನ್ನು ಆಯ್ಕೆ ಮಾಡಿದರೆ, ಆಗ ಚಿನ್ನ ಕೂಡ ಇನ್ಷುರೆನ್ಸ್ ಗೆ ಒಳಪಡುತ್ತದೆ.
ಈ ರೀತಿ ನಿಮ್ಮ ಚಿನ್ನವನ್ನು ಸೆಕ್ಯೂರ್ ಮಾಡಿಕೊಳ್ಳಬಹುದು.
ಹೀಗೆ ವಿಮೆ ಮಾಡಿಸಿಕೊಂಡರೆ, ನಿಮ್ಮ ಹತ್ತಿರ ಇರುವ ಚಿನ್ನ, ಯಾವುದೇ ಸಮಸ್ಯೆ ಆಗಿ ಕಳೆದುಹೋದರೆ, ಪ್ರಕೃತಿ ವಿಕೋಪಕ್ಕೆ ಒಳಪಟ್ಟರೆ, ಸುಟ್ಟು ಹೋದರೆ, ನಿಮಗೆ ಹೊಸ ಚಿನ್ನ ಸಿಗುತ್ತದೆ.
ಆದರೆ ಇದಕ್ಕಾಗಿ ನೀವು ಚಿನ್ನ ಖರೀದಿ ಮಾಡಿರುವ ರಿಸಿಪ್ಟ್ ನಿಮ್ಮ ಹತ್ತಿರ ಇರಬೇಕು. ಇದು ಮುಖ್ಯವಾಗುತ್ತದೆ, ವಿಮೆ ಕಂಪನಿಯವರು ನಿಮಗೆ ಚಿನ್ನ ನೀಡುವುದಕ್ಕೆ ಈ ಒಂದು ದಾಖಲೆಯನ್ನು ಪ್ರಮುಖವಾಗಿ ಕೇಳಬಹುದು. ಹಾಗಾಗಿ ಚಿನ್ನ ಖರೀದಿಯ ರೆಸಿಪ್ಟ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳಿ.
if your gold jewelry is stolen or lost, you will get full money!
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.