ಈಗಿನ ಕಾಲದಲ್ಲಿ ಸಾಲ ಪಡೆಯೋದು ಕಷ್ಟ ಅಲ್ಲವೇ ಅಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ ಸಾಕು, ಯಾವುದೇ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯಬಹುದು. ಹೋಮ್ ಲೋನ್ (Home Loan), ಕಾರ್ ಲೋನ್ (Car Loan), ಪರ್ಸನಲ್ ಲೋನ್ (Personal Loan) ಈ ರೀತಿ ವಿವಿಧ ರೀತಿಯ ಲೋನ್ ಗಳನ್ನು ಕೂಡ ಪಡೆಯಬಹುದು.
ಇನ್ನು ಕಾರ್ ಕ್ರೇಜ್ ಇರುವ ಸಾಕಷ್ಟು ಜನರು ಲೋನ್ ಪಡೆಯುತ್ತಾರೆ, ಕಾರ್ ವೆಚ್ಚದ 80% ವರೆಗು ಲೋನ್ ನಲ್ಲಿ (Car Loan) ಸಿಗುತ್ತದೆ. ಲೋನ್ ಪಡೆದ ನಂತರ ಒಂದು ವೇಳೆ ನೀವು ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡದೇ ಹೋದರೇ, ಬ್ಯಾಂಕ್ ಇಂದ ನಿಮ್ಮ ಕಾರ್ ಸೀಜ್ ಮಾಡುತ್ತಾರೆ. ಆ ರೀತಿ ಆದಾಗ ಏನು ಮಾಡಬೇಕು ಗೊತ್ತಾ?
ಬ್ಯಾಂಕ್ ನವರು (Bank) ಇದ್ದಕ್ಕಿದ್ದ ಹಾಗೆ ನೀವು ಇಎಂಐ ಪಾವತಿ ಮಾಡಿಲ್ಲ ಎಂದು ವಾಹನ ಸೀಜ್ ಮಾಡಲು ಸಾಧ್ಯವಿಲ್ಲ. ಮೊದಲ ಬಾರಿ ಇಎಂಐ ಕಟ್ಟದೇ ಇದ್ದಾಗ, ನಿಮಗೆ ನೆನಪು ಮಾಡಲು ಮೆಸೇಜ್ ಗಳನ್ನು ಕಳಿಸಲಾಗುತ್ತದೆ. ಅದನ್ನು ಮೀರಿ, ಎರಡನೇ ಇಎಂಐ ಕಟ್ಟದೇ ಇದ್ದಾಗ, ನಿಮಗೆ ನೋಟೀಸ್ ಕಳಿಸಲಾಗುತ್ತದೆ.
ಈ 5 ಬ್ಯುಸಿನೆಸ್ ನಲ್ಲಿ ಯಾವುದೇ ಶುರು ಮಾಡಿದ್ರೂ ಕೈ ತುಂಬಾ ದುಡ್ಡು! ಮಾಡೋ ಸ್ಕಿಲ್ ಇದ್ರೆ ಸಾಕು
ಹಾಗೆಯೇ ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತದೆ, ಜೊತೆಗೆ ನೀವು ಲೋನ್ ಅಪ್ಲಿಕೇಶನ್ ನಲ್ಲಿ ಜಾಮೀನುದಾರರಾಗಿ ಸೂಚಿಸಿರುವ ವ್ಯಕ್ತಿಯನ್ನು ಸಂಪರ್ಕಿಸಲಾಗುತ್ತದೆ. ಈ ಎಲ್ಲಾ ಕ್ರಮಗಳನ್ನು ಬ್ಯಾಂಕ್ ತೆಗೆದುಕೊಳ್ಳುತ್ತದೆ..
ಇಷ್ಟೆಲ್ಲಾ ಪ್ರಯತ್ನವಾದ ನಂತರ ಕೂಡ ನೀವು ಮೂರನೇ ಬಾರಿ ಇಎಂಐ ತಪ್ಪಿಸಿಬಿಟ್ಟರೆ, ಬ್ಯಾಂಕ್ ಗೆ ಯಾವುದೇ ಮಾಹಿತಿ ಕೊಡದೇ ಹೋದರೆ, ಆಗ ಬ್ಯಾಂಕ್ ವತಿಯಿಂದ ನಿಮ್ಮ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗುತ್ತದೆ.
ಸತತ ಮೂರು ಸಾರಿ ಇಎಂಐ ಪಾವತಿ ಮಾಡದೇ ಇದ್ದರೆ, ಆಗ ನಿಮ್ಮ ವಾಹನವನ್ನು ಸೀಜ್ ಮಾಡುವ ಸಾಧ್ಯತೆ ಇರುತ್ತದೆ. ನೀವು ಲೋನ್ ಪಡೆಯುವ ಮುನ್ನ ಬ್ಯಾಂಕ್ ಗೆ ಸಂಬಂಧಿಸಿದ ಈ ಎಲ್ಲಾ ಮಾಹಿತಿಯನ್ನು ತಿಳಿದಿಕೊಳ್ಳಬೇಕು. ಒಂದು ವೇಳೆ ನಿಮ್ಮ ವಾಹನ ಸೀಜ್ ಮಾಡಿದರೆ, ನಂತರ ಏನು ಮಾಡಬೇಕು ಎಂದು ತಿಳಿಯೋಣ..
ಫೈನ್ ಕಟ್ಟಿ ಕಾರ್ ಬಿಡಿಸಿಕೊಳ್ಳಿ:
ಈ ವೇಳೆ ನಿಮ್ಮ ಮನೆಗೆ ಬ್ಯಾಂಕ್ ಇಂದ ರಿಕವರಿ ಏಜೆನ್ಟ್ ಗಳು ಸಹ ಬರುತ್ತಾರೆ. ಅವರ ಬಳಿ ಸರಿಯಾದ ದಾಖಲೆಗಳನ್ನು ಪ್ರಸ್ತುತಪಡಿಸಬೇಕು. ಇಲ್ಲಿ ನೀವು ದಂಡ ಪಾವತಿ ಮಾಡುವುದಕ್ಕೆ, ಒಂದು ತಿಂಗಳ ಸಮಯ ಸಿಗುತ್ತದೆ.
ಕಾರ್ ನಿಲ್ಲಿಸಿರುವ ಗೋಡೌನ್ ಗೆ ಬಾಡಿಗೆ, 4 ತಿಂಗಳ ಇಎಂಐ ಇದೆಲ್ಲವನ್ನು ನೀವು ಪಾವತಿ ಮಾಡಿ, ದಂಡ ಕಟ್ಟಿದ ನಂತರ ನಿಮ್ಮ ಕಾರ್ ಅನ್ನು ಬಿಡಿಸಿಕೊಳ್ಳಬಹುದು. ಇದಕ್ಕಾಗಿ 1 ತಿಂಗಳ ಸಮಯಾವಕಾಶ ಸಿಗುತ್ತದೆ.
ಕಡಿಮೆ ಟೈಮ್ ನಲ್ಲಿ ಜಾಸ್ತಿ ದುಡ್ಡು ಮಾಡ್ಬೇಕು ಅನ್ನೋರಿಗೆ 4 ಬಿಸಿನೆಸ್ ಐಡಿಯಾಗಳು! ಬಂಡವಾಳ ಬೇಕಿಲ್ಲ
ನಿಮ್ಮ ಹಕ್ಕುಗಳ ಬಗ್ಗೆ ತಿಳಿಯಿರಿ:
ಇಲ್ಲಿ ನೀವು ಪ್ರಮುಖವಾಗಿ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಯಬೇಕು. ಒಂದು ವೇಳೆ ನೀವು ಇಎಂಐ (Loan EMI) ಕಟ್ಟಿಲ್ಲ ಎಂದರೆ, ಇದ್ದಕಿದ್ದ ಹಾಗೆ, ಯಾವಾಗ ಬೇಕೆಂದರೆ ಆಗ ರಿಕವರಿ ಏಜೆನ್ಟ್ ಗಳು ನಿಮ್ಮ ಮನೆಗೆ ಬಂದು ವಾಹನವನ್ನು ಸೀಜ್ ಮಾಡುವ ಹಾಗಿಲ್ಲ.
ಅವರ ವಿರುದ್ಧ ನೀವು ಕಾನೂನಾತ್ಮಕವಾಗಿ ದೂರು ಕೊಡಬಹುದು. ಲೋನ್ ಪಡೆದಿದ್ದರೂ ಎನ್ನುವ ಖಾಸಗಿ ಮಾಹಿತಿಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳುವ ಹಾಗೆ ಕೂಡ ಇಲ್ಲ.
What should we do if not paid the car loan EMI and the car is seized
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.