ಹಲವು ಜನರಿಗೆ ಒಳ್ಳೆಯ ಬ್ಯುಸಿನೆಸ್ ಮಾಡಬೇಕು (Own Business) ಎಂದು ಕನಸು ಇರುತ್ತದೆ. ಆದರೆ ಹೆಚ್ಚು ಬಂಡವಾಳ ಹಾಕಲು ಸಾಧ್ಯ ಆಗುವುದಿಲ್ಲ, ಹಾಗೆಯೇ ಲಾಭ ಕೊಡುವಂಥ ಯಾವ ಬ್ಯುಸಿನೆಸ್ ಶುರು ಮಾಡಬಹುದು ಎನ್ನುವ ಗೊಂದಲ ಕೂಡ ಇರುತ್ತದೆ.
ಒಂದು ವೇಳೆ ನೀವು ಕೂಡ ಅದೇ ಪರಿಸ್ಥಿತಿಯಲ್ಲಿ ಇದ್ದರೆ, ನಿಮಗಾಗಿ ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ (Business Idea) ತಿಳಿಸಿಕೊಡುತ್ತೇವೆ. ಈ 5 ಬ್ಯುಸಿನೆಸ್ ಗಳನ್ನು ಕಡಿಮೆ ಹೂಡಿಕೆ ಇಂದ ಶುರು ಮಾಡಿ, ಒಳ್ಳೆಯ ಲಾಭ ಗಳಿಸಬಹುದು.
ಆಧಾರ್ ಕಾರ್ಡ್ ಇರೋ ಎಲ್ಲರಿಗೂ ಸೆಪ್ಟೆಂಬರ್ 14 ಕೊನೆಯ ಗಡುವು! ಕೇಂದ್ರದಿಂದ ಖಡಕ್ ವಾರ್ನಿಗ್
1. ಕ್ಲೌಡ್ ಕಿಚನ್: ಈಗ ಟ್ರೆಂಡಿಂಗ್ ನಲ್ಲಿರುವ ಬ್ಯುಸಿನೆಸ್ ಇದು ಎಂದು ಹೇಳಿದರೂ ಕೂಡ ತಪ್ಪಲ್ಲ. ಬಹಳಷ್ಟು ಜನರು ಆರೋಗ್ಯಕರವಾದ ಅಡುಗೆ ಇಷ್ಟಪಡುತ್ತಾರೆ. ನೀವು ಉತ್ತಮವಾಗಿ ಅಡುಗೆ ಮಾಡುವವರಾದರೆ ಕ್ಲೌಡ್ ಕಿಚನ್ ಶುರು ಮಾಡಬಹುದು. ಈಗ Swiggy, Zomato ಇದೆಲ್ಲವೂ ಇರುವ ಕಾರಣ, ಬ್ಯುಸಿನೆಸ್ ಬೆಳೆಯುವುದಕ್ಕೆ ಸಹಾಯ ಆಗುತ್ತದೆ. 1 ಲಕ್ಷ ಹೂಡಿಕೆ ಇಂದ ಕ್ಲೌಡ್ ಕಿಚನ್ ಶುರು ಮಾಡಬಹುದು.
2. ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ (Digital Marketing) : ಇದನ್ನು ನೀವು ₹80,000 ಹೂಡಿಕೆಯಲ್ಲಿ ಶುರು ಮಾಡಬಹುದು. ಪ್ರಸ್ತುತ ಬಹಳ ಬೇಡಿಕೆ ಹೊಂದಿರುವ ಬ್ಯುಸಿನೆಸ್ ಗಳಲ್ಲಿ ಇದು ಕೂಡ ಪ್ರಮುಖವಾದದ್ದು, ನಿಮಗೆ ಕಂಟೆಂಟ್ ಕ್ರಿಯೇಷನ್ ಬರಬೇಕು, ಗ್ರಾಫಿಕ್ ಡಿಸೈನಿಂಗ್ ಬರಬೇಕು. ಈಗಿನ ಟ್ರೆಂಡ್ ಅರ್ಥವಾಗಬೇಕು. ಇದಿಷ್ಟು ಇದ್ದರೆ, ಸಾಕು ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಶುರು ಮಾಡಬಹುದು. ಒಳ್ಳೆಯ ಆದಾಯ ಕೂಡ ಪಡೆಯಬಹುದು.
3. ಅಫಿಲಿಯೇಟ್ ಮಾರ್ಕೆಟಿಂಗ್: ಈ ಒಂದು ಬ್ಯುಸಿನೆಸ್ ಅನ್ನು ಕೇವಲ 3000 ರೂಪಾಯಿಗೆ ಶುರು ಮಾಡಬಹುದು. ಒಂದು ವೆಬ್ಸೈಟ್ ನಲ್ಲಿ ಅಥವಾ ಬ್ಲಾಗ್ ನಲ್ಲಿ ಬ್ರ್ಯಾಂಡ್ ಗಳನ್ನು ಪ್ರೊಮೋಟ್ ಮಾಡಬಹುದು.
ಒಂದು ವೇಳೆ ನಿಮ್ಮ ಹತ್ತಿರ ಬ್ಲಾಗ್ (Blog) ಅಥವಾ ವೆಬ್ಸೈಟ್ (Website) ಇಲ್ಲ ಎಂದರೆ, ಅಮೆಜಾನ್ ನ (Amazon) ಸಬ್ ಸಂಸ್ಥೆಯಲ್ಲಿ ಸೈನ್ ಅಪ್ ಮಾಡಿ. ಇದರಿಂದ ನೀವು ಅಫಿಲಿಯೇಟ್ ಮಾರ್ಕೆಟಿಂಗ್ ಬ್ಯುಸಿನೆಸ್ ಶುರು ಮಾಡಬಹುದು.
ಕಡಿಮೆ ಟೈಮ್ ನಲ್ಲಿ ಜಾಸ್ತಿ ದುಡ್ಡು ಮಾಡ್ಬೇಕು ಅನ್ನೋರಿಗೆ 4 ಬಿಸಿನೆಸ್ ಐಡಿಯಾಗಳು! ಬಂಡವಾಳ ಬೇಕಿಲ್ಲ
4. ಡ್ರಾಪ್ ಶಿಪಿಂಗ್ ಬ್ಯುಸಿನೆಸ್: ಒಬ್ಬ ವ್ಯಕ್ತಿಯಿಂದ ಯಾವುದೇ ವಸ್ತುವನ್ನು ಪಡೆದು, ಅದನ್ನು ಇನ್ನೊಬ್ಬ ವ್ಯಕ್ತಿಗೆ ತಲುಪಿಸುವುದು. ಈ ಕೆಲಸವನ್ನು ನಿಮ್ಮ ಪರವಾಗಿ ಇನ್ನೊಬ್ಬರು ಮಾಡುತ್ತಾರೆ. ಈ ಒಂದು ಬ್ಯುಸಿನೆಸ್ ಕೂಡ ಒಳ್ಳೆಯ ತರುವಂಥ ಬ್ಯುಸಿನೆಸ್ ಆಗಿದ್ದು, ಇದನ್ನು ಶುರು ಮಾಡಲು, ₹10,000 ವರೆಗೂ ಹಣ ಬೇಕಾಗುತ್ತದೆ. ಈ ಒಂದು ಹೂಡಿಕೆಯನ್ನು ಸುಲಭವಾಗಿ ಮಾಡಬಹುದಾಗಿದೆ.
5. ವೆಬ್ಸೈಟ್ ಡಿಸೈನಿಂಗ್ (Web Designing): ಈಗ ಬಹಳ ಬೇಡಿಕೆ ಇರುವ ಬ್ಯುಸಿನೆಸ್ ಗಳಲ್ಲಿ ಇದು ಕೂಡ ಒಂದು. ಒಂದು ವೆಬ್ಸೈಟ್ ಅನ್ನು ಆಕರ್ಷಕವಾಗಿ ಡಿಸೈನ್ ಮಾಡುವ ಸ್ಕಿಲ್ ನಿಮಗೆ ಬಂದರೆ, ಈ ಬ್ಯುಸಿನೆಸ್ ಶುರು ಮಾಡಬಹುದು.
ಬಹುತೇಕ ಎಲ್ಲಾ ಬ್ಯುಸಿನೆಸ್ ಗಳು ಕೂಡ ವೆಬ್ಸೈಟ್ (Website) ಬಳಕೆ ಮಾಡುತ್ತದೆ. ನಿಮ್ಮ ಸ್ಕಿಲ್ ಮೇಲೆ ಇಲ್ಲಿ ಉತ್ತಮವಾಗಿ ಹಣ ಗಳಿಸಬಹುದು. ಈ ಬ್ಯುಸಿನೆಸ್ ಅನ್ನು ₹30,000 ಹೂಡಿಕೆಯಲ್ಲಿ ಶುರು ಮಾಡಬಹುದು.
ಸ್ವಂತ ಬಿಸಿನೆಸ್, ವ್ಯಾಪಾರ ಮಾಡೋರಿಗೆ ಕಡಿಮೆ ಬಡ್ಡಿಗೆ ಸಿಗಲಿದೆ 2 ಲಕ್ಷ ಬಿಸಿನೆಸ್ ಲೋನ್! ಅಪ್ಲೈ ಮಾಡಿ
Starting any business in these 5 businesses is Very Profitable
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.