ಆಧಾರ್ ಕಾರ್ಡ್ ಎನ್ನುವುದು ಭಾರತೀಯರಾದ ನಮ್ಮೆಲ್ಲರ ಬಳಿ ಇರಲೇಬೇಕಾದ ಪ್ರಮುಖವಾದ ಗುರುತಿನ ಚೀಟಿ. ಈಗ ಯಾವುದೇ ಒಂದು ಕೆಲಸ ಮಾಡಿಸುವುದಕ್ಕೂ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಬ್ಯಾಂಕ್ ಕೆಲಸಗಳಿಗೆ, ಯಾವುದೇ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ, ಸಿಮ್ ಖರೀದಿಗೆ ಹೀಗೆ ಅನೇಕ ವಿಚಾರಗಳಿಗೆ ಆಧಾರ್ ಕಾರ್ಡ್ ಬೇಕಾಗುತ್ತದೆ.
ಆಧಾರ್ ಕಾರ್ಡ್ ಅನ್ನು ಕೇಂದ್ರ ಸರ್ಕಾರದ UIDAI ಪ್ರತಿಯೊಬ್ಬರಿಯು ಯುನಿಕ್ ನಂಬರ್ ನೀಡುವ ಮೂಲಕ ವಿತರಣೆ ಮಾಡುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರ ಬಳಿ ಆಧಾರ್ ಕಾರ್ಡ್ ಇರಬೇಕು. ಇದಕ್ಕೆ ಸಂಬಂಧಿಸಿದ ಹಾಗೆ ಒಂದು ಪ್ರಮುಖವಾದ ವಿಷಯವನ್ನು ಕೂಡ ತಿಳಿಯಬೇಕಿದೆ, ಆಧಾರ್ ಕಾರ್ಡ್ ಅನ್ನು ಆಗಾಗ ಅಪ್ಡೇಟ್ ಮಾಡಿಸಬೇಕು, 10 ವರ್ಷಗಳಿಂದ ಯಾರೆಲ್ಲಾ ಅಪ್ಡೇಟ್ ಮಾಡಿಸಿಲ್ಲವೋ ಅಂಥವರಿಗೆ ಉಚಿತವಾಗಿ ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ.
ಕಡಿಮೆ ಟೈಮ್ ನಲ್ಲಿ ಜಾಸ್ತಿ ದುಡ್ಡು ಮಾಡ್ಬೇಕು ಅನ್ನೋರಿಗೆ 4 ಬಿಸಿನೆಸ್ ಐಡಿಯಾಗಳು! ಬಂಡವಾಳ ಬೇಕಿಲ್ಲ
ಸೆಪ್ಟೆಂಬರ್ 14 ಇದಕ್ಕಾಗಿ ಕೊನೆಯ ದಿನಾಂಕ ಆಗಿದ್ದು, ಈ ಮೊದಲು ಮಾರ್ಚ್ 14 ಕೊನೆಯ ದಿನಾಂಕ ಆಗಿತ್ತು, ಅದನ್ನು ಜೂನ್ 14ಕ್ಕೆ ಮುಂದಕ್ಕೆ ಹಾಕಲಾಗಿತ್ತು, ಈಗ ಸೆಪ್ಟೆಂಬರ್ 14ಕ್ಕೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ ಈ ದಿನಾಂಕದ ಒಳಗೆ ಮಾಡಿಸಿಕೊಂಡರೆ ಒಳ್ಳೆಯದು.
ಆಧಾರ್ ಅಪ್ಡೇಟ್ ಮಾಡುವ ವಿಧಾನ: ಒಂದು ವೇಳೆ ನೀವು ಸೆಪ್ಟೆಂಬರ್ 14ರ ಒಳಗೆ ಆಧಾರ್ ಅಪ್ಡೇಟ್ ಮಾಡಬೇಕು ಎಂದು ಬಯಸಿದರೆ, ಅದನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ..
*https://ssup.uidai.gov.in/ssup/ ಮೊದಲು ಈ ಲಿಂಕ್ ಓಪನ್ ಮಾಡಿ, ಲಾಗಿನ್ ಆಪ್ಶನ್ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಎಂಟರ್ ಮಾಡಿ, Get OTP ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಈಗ ಲಿಂಕ್ ಆಗಿರುವ ಫೋನ್ ನಂಬರ್ ಗೆ ಬರುವ ಓಟಿಪಿಯನ್ನು ಹಾಕಿದರೆ, ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಸೇವೆಗಳು ಎನ್ನುವ ಟ್ಯಾಬ್ ನಲ್ಲಿ, ಅಪ್ಡೇಟ್ ಆಧಾರ್ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.
ಸ್ವಂತ ಬಿಸಿನೆಸ್, ವ್ಯಾಪಾರ ಮಾಡೋರಿಗೆ ಕಡಿಮೆ ಬಡ್ಡಿಗೆ ಸಿಗಲಿದೆ 2 ಲಕ್ಷ ಬಿಸಿನೆಸ್ ಲೋನ್! ಅಪ್ಲೈ ಮಾಡಿ
*ಈಗ ಆಧಾರ್ ನಲ್ಲಿ ಯಾವೆಲ್ಲಾ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕು ಎನ್ನುವ ಆಪ್ಶನ್ ಬರುತ್ತದೆ. ಅದರ ಪೈಕಿ ನೀವು ಏನನ್ನು ಮಾಡಬೇಕು ಎನ್ನುವುದನ್ನು ಸೆಲೆಕ್ಟ್ ಮಾಡಿ, ಅದರ ವಿವರಗಳನ್ನು ಭರ್ತಿ ಮಾಡಿ ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಿ.
*ಎಲ್ಲಾ ವಿಚಾರವನ್ನು ಫಿಲ್ ಮಾಡಿದ ಬಳಿಕ ದೃಢೀಕರಿಸಿದರೆ, ನಿಮ್ಮ ಮಾಹಿತಿ ಅಪ್ಡೇಟ್ ಆಗುತ್ತದೆ.
*ಸರ್ಕಾರ ಕೊಟ್ಟಿರುವ ಕೊನೆಯ ದಿನಾಂಕದ ಒಳಗೆ ನೀವು ಆಧಾರ್ ಅಪ್ಡೇಟ್ ಮಾಡುವುದು ಒಳ್ಳೆಯದು.
*ಇಲ್ಲದಿದ್ದರೆ ನಿಮಗೆ ತೊಂದರೆ ಆಗಬಹುದು. ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡುವುದು ಅಥವಾ ಇನ್ನಿತರ ಕೆಲಸಕ್ಕೆ ಸಮಸ್ಯೆ ಉಂಟಾಗಬಹುದು.
*ಮಾಹಿತಿಗಳನ್ನು ಅಪ್ಡೇಟ್ ಮಾಡಿದ ನಂತರ ಅದಕ್ಕಾಗಿ ಶುಲ್ಕ ಪಾವತಿ ಮಾಡಬೇಕು, ಮೊಬೈಲ್ ನಲ್ಲೇ ಆಧಾರ್ ಅಪ್ಡೇಟ್ ಮಾಡಿಸಿದರು ಕೂಡ ಶುಲ್ಕವನ್ನು ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ಮಾಡಿಸಬಹುದು.
ಗ್ರಾಹಕರನ್ನು ಸೆಳೆಯಲು Jio ಮೆಗಾ ಪ್ಲ್ಯಾನ್, ಅತೀ ಕಡಿಮೆ ಬೆಲೆಗೆ 5G ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್!
*ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಹರಿದಾಡುತ್ತಿದ್ದು, ಸೆಪ್ಟೆಂಬರ್ 14ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಲಿಲ್ಲ ಎಂದರೆ, ಅಂಥವರ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಎಂದು ಹೇಳಲಾಗುತ್ತಿದೆ, ಆದರೆ ಇದು ಸುಳ್ಳು ಮಾಹಿತಿ ಆಗಿದ್ದು ಆ ಥರ ಏನೂ ಆಗುವುದಿಲ್ಲ ಎಂದು ಖುದ್ಧು UIDAI ಸ್ಪಷ್ಟನೆ ನೀಡಿದೆ.
September 14 Last Date for All Aadhaar Card Holders
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.