ಗ್ರಾಹಕರನ್ನು ಸೆಳೆಯಲು Jio ಮೆಗಾ ಪ್ಲ್ಯಾನ್‌, ಅತೀ ಕಡಿಮೆ ಬೆಲೆಗೆ 5G ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್!

ಇದೀಗ ಜಿಯೋ ಸಂಸ್ಥೆಯು ಅತೀಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಲಾಂಚ್ (Prepaid Recharge) ಮಾಡಿದ್ದು, ಇದರಲ್ಲಿ 5ಜಿ ಡೇಟಾ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಒಳಗೊಂಡಿದೆ.

Bengaluru, Karnataka, India
Edited By: Satish Raj Goravigere

ಕೆಲವು ದಿನಗಳ ಹಿಂದೆ ರಿಲಯನ್ಸ್ ಜಿಯೋ ಸಂಸ್ಥೆ ರೀಚಾರ್ಜ್ ಪ್ಲಾನ್ ಗಳನ್ನು (Recharge Plans) ಜಾಸ್ತಿ ಮಾಡಿದ ಕಾರಣಕ್ಕೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದ್ದಕ್ಕಿದ್ದಂತೆ ರೀಚಾರ್ಜ್ ಪ್ಲಾನ್ ಗಳಲ್ಲಿ 100 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಜಾಸ್ತಿ ಮಾಡಿದ ಕಾರಣ, ಜನರು ಜಿಯೋ ಬಿಟ್ಟು ಬೇರೆ ನೆಟ್ವರ್ಕ್ ಗೆ (Jio Network) ಪೋರ್ಟ್ ಮಾಡಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಈ ಕಾರಣಗಳಿಗೆ ಇದೀಗ ಜಿಯೋ ಸಂಸ್ಥೆ ತಮ್ಮ ಗ್ರಾಹಕರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ..

ಇದೀಗ ಜಿಯೋ ಸಂಸ್ಥೆಯು ಅತೀಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಲಾಂಚ್ (Prepaid Recharge) ಮಾಡಿದ್ದು, ಇದರಲ್ಲಿ 5ಜಿ ಡೇಟಾ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಒಳಗೊಂಡಿದೆ. ಈ ಒಂದು ಪ್ಲಾನ್ ಮೂಲಕ ಗ್ರಾಹಕರನ್ನು ಮತ್ತೆ ತಮ್ಮ ಕಡೆಗೆ ಸೆಳೆಯುವ ಪ್ಲಾನ್ ಹೊಂದಿದೆ ಜಿಯೋ. ಹಾಗಿದ್ದಲ್ಲಿ ಈ ಪ್ಲಾನ್ ನಲ್ಲಿ ಯಾವೆಲ್ಲಾ ಸೌಲಭ್ಯವಿದೆ? ಈ ಪ್ಲಾನ್ ದರ ಎಷ್ಟು? ವ್ಯಾಲಿಡಿಟಿ ಎಷ್ಟು ದಿವಸ?ಪೂರ್ತಿ ಮಾಹಿತಿ ತಿಳಿಯೋಣ…

Jio mega plan to attract customers, launch 5G data recharge plan at lowest price

ಹೊಸ ಜಿಯೋ ಪ್ರಿಪೇಯ್ಡ್ ಪ್ಲಾನ್, ಬೆಲೆ ಏರಿಕೆ ನಡುವೆ ಅಗ್ಗದ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಲಾಂಚ್

ಜಿಯೋ ಇಂದ ₹349 ರೂಪಾಯಿಯ ರೀಚಾರ್ಜ್ ಪ್ಲಾನ್:

ಇದು ಹೊಸದಾಗಿ ಲಾಂಚ್ ಆಗಿರುವ ಅಲ್ಪಾವಧಿ ರೀಚಾರ್ಜ್ ಯೋಜನೆ ಆಗಿದೆ. ಇದರಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಸಿಗಲಿದ್ದು, ಹೆಚ್ಚಿನ ಡೇಟಾ ಸೌಲಭ್ಯವಿದೆ. ಈ ಕಾರಣಕ್ಕೆ ಇದು, ಸುಲಭವಾಗಿ ಎಲ್ಲರೂ ಅಫಾರ್ಡ್ ಮಾಡಬಹುದಾದ ರೀಚಾರ್ಜ್ ಪ್ಲಾನ್ ಆಗಿದ್ದು, ಈ ಹೊಸ ಪ್ಲಾನ್ ಜನರಿಗೆ ಸಹ ಇಷ್ಟವಾಗುತ್ತಿದೆ. ಹೆಚ್ಚು ಇಂಟರ್ನೆಟ್ (Internet) ಬಳಕೆ ಮಾಡುವವರಿಗೆ ಇದು ಒಳ್ಳೆಯ ರೀಚಾರ್ಜ್ ಪ್ಲಾನ್ ಆಗಿದೆ.

5G ಡೇಟಾ:

ಈ 349 ರೂಪಾಯಿಯ ರೀಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಎಲ್ಲಾ ನೆಟ್ವರ್ಕ್ ಗಳಿಗೆ ಉಚಿತ ಫ್ರೀ ಕರೆಗಳ ಸೌಲಭ್ಯ (Free Calls) ಸಿಗುತ್ತದೆ. ಅದರ ಜೊತೆಗೆ 28 ದಿನಗಳ ಅವಧಿಗೆ 56GB ಡೇಟಾ ಸಿಗುತ್ತದೆ. ಇದರ ಅರ್ಥ ದಿನಕ್ಕೆ 2GB ಡೇಟಾ ಸಿಗಲಿದೆ. ಹಾಗೆಯೇ 5G ನೆಟ್ವರ್ಕ್ ಬಳಸುವವರಿಗೆ, ಅವರ ಏರಿಯಾದಲ್ಲಿ ಉತ್ತಮವಾದ 5G ಸೇವೆ ಹೊಂದಿದ್ದರೆ, ಅಂಥವರಿಗೆ ಉಚಿತವಾಗಿ 5G ಅನಿಯಮಿತ ಸೇವೆ ಸಹ ಲಭ್ಯವಿದೆ. ಇಷ್ಟೆಲ್ಲಾ ಆಫರ್ ಗಳು 349 ರೂಪಾಯಿಯ ರೀಚಾರ್ಜ್ ಪ್ಲಾನ್ ನಲ್ಲಿ ಲಭ್ಯವಿದೆ.

ಕೇವಲ ₹107 ರೂಪಾಯಿಗೆ ರೀಚಾರ್ಜ್ ಪ್ಲಾನ್ ತಂದ BSNL ನೆಟ್ ವರ್ಕ್, ಏರ್‌ಟೆಲ್ ಹಾಗೂ ಜಿಯೋಗೆ ಢವಢವ

ಕಾಲ್ ಮತ್ತು 5G ಡೇಟಾ ಸೇವೆ ಮಾತ್ರವಲ್ಲದೇ, ಇನ್ನು ಬೇರೆ ಸೇವೆಗಳು ಕೂಡ ಈ ಒಂದು ಪ್ಲಾನ್ ನಲ್ಲಿ ಲಭ್ಯವಿದ್ದು, OTT ಹೆಚ್ಚಾಗಿ ನೋಡುವವರಿಗೆ ಜಿಯೋ ಸಿನಿಮಾ ಫ್ರೀ ಚಂದಾದಾರಿಕೆ ಸಿಗುತ್ತದೆ. ಜೊತೆಗೆ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಬಳಕೆ ಮಾಡಬಹುದು. ಈ ಎಲ್ಲಾ ಸೇವೆಗಳು ಸಿಗುವುದರಿಂದ, 28 ದಿನಗಳ ಅವದಿಗೆ ಇದು ಉತ್ತಮವಾದ ರೀಚಾರ್ಜ್ ಪ್ಲಾನ್ ಆಗಿದೆ. ಜಿಯೋ ಗ್ರಾಹಕರು ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು.

Jio mega plan to attract customers, launch 5G data recharge plan at lowest price