ಹೊಸ ಜಿಯೋ ಪ್ರಿಪೇಯ್ಡ್ ಪ್ಲಾನ್, ಬೆಲೆ ಏರಿಕೆ ನಡುವೆ ಅಗ್ಗದ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್ ಲಾಂಚ್

ಈಗ 4G ಸ್ಮಾರ್ಟ್ ಫೋನ್ ಗಳಿಗೆ ಅನುಕೂಲ ಆಗುವ ಹಾಗೆ ಬಹಳ ಕಡಿಮೆ ಬೆಲೆಗೆ ಹೊಸ ಪ್ರೀಪೇಯ್ಡ್ ಪ್ಲಾನ್ ಗಳನ್ನು ಜಾರಿಗೆ ತರಲಾಗಿದ್ದು, ಈ ಪ್ಲಾನ್ ಇಂದ ಏನೆಲ್ಲಾ ಉಪಯೋಗ ಆಗುತ್ತದೆ ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ.

ಕಳೆದ ಕೆಲವು ದಿನಗಳ ಹಿಂದೆ ಜಿಯೋ ಸಂಸ್ಥೆ ಪ್ರಿಪೇಯ್ಡ್ ಪ್ಲಾನ್ ಗಳನ್ನು (Recharge Plans) ಜಾಸ್ತಿ ಮಾಡಿದ ಕಾರಣ, ಗ್ರಾಹಕರಿಗೆ ಜಿಯೋ ಸಂಸ್ಥೆಯ ಮೇಲೆ ಬೇಸರ ಶುರುವಾಗಿತ್ತು, ಈಗಾಗಲೇ ಹಲವು ಜನರು ಜಿಯೋ (Jio Prepaid) ಬಿಟ್ಟು ಬೇರೆ ನೆಟ್ವರ್ಕ್ ಗಳಿಗೆ ಪೋರ್ಟ್ ಮಾಡಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ.

25% ಗಿಂತ ಹೆಚ್ಚು ರೀಚಾರ್ಜ್ ಪ್ಲಾನ್ ಗಳನ್ನು ಜಾಸ್ತಿ ಮಾಡಿರುವುದು ಇದಕ್ಕೆ ಕಾರಣ. ಈ ರೀತಿ ಆಗಿ ಜನರು ಗೊಂದಲದಲ್ಲಿ ಇರುವ ವೇಳೆ ಜಿಯೋ ಈಗ ತಮ್ಮ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದೆ.

ರಿಲಯನ್ಸ್ ಜಿಯೋ ಸಂಸ್ಥೆ ಒಂದು ಟೆಲಿಕಾಂ ಕಂಪನಿ ಮಾತ್ರವಲ್ಲ, ಜಿಯೋ ಲ್ಯಾಪ್ ಟಾಪ್ (Jio Laptop) ಲಾಂಚ್ ಮಾಡಿದೆ, ಜಿಯೋ ಮೊಬೈಲ್ ಫೋನ್ ಅನ್ನು ಕೂಡ ಅತ್ಯಂತ ಕಡಿಮೆ ಬೆಲೆಗೆ ಲಾಂಚ್ ಕಡಿಮೆ. ಕಳೆದ ವರ್ಷ ಜಿಯೋ ಭಾರತ್ ವಿ2 ಫೋನ್ ಅನ್ನು ಕೇವಲ ₹999 ರೂಪಾಯಿಗೆ ಲಾಂಚ್ ಮಾಡಿ, ಇದರಲ್ಲಿ ಹಲವು ಫೀಚರ್ಸ್ ಗಳನ್ನು ಕೊಡಲಾಯಿತು. ಜನ ಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ಮಾರುಕಟ್ಟೆಗೆ ತಂದ ಫೋನ್ (Jio Phone) ಆಗಿತ್ತು ಜಿಯೋ ಭಾರತ್ ವಿ2.

12 OTT platform free with this Jio recharge

ಹೀಗೆ ಮುಕೇಶ್ ಅಂಬಾನಿ ಅವರ ಒಡೆತನದ ಜಿಯೋ ಸಂಸ್ಥೆ ಗ್ರಾಹಕರಿಗೆ ಅನುಕೂಲ ಆಗುವ ಹಾಗೆ, ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುವೆ ಹಾಗೆ ಮಾಡಿದೆ. ಅದೇ ರೀತಿ ಈಗ 4G ಸ್ಮಾರ್ಟ್ ಫೋನ್ ಗಳಿಗೆ ಅನುಕೂಲ ಆಗುವ ಹಾಗೆ ಬಹಳ ಕಡಿಮೆ ಬೆಲೆಗೆ ಹೊಸ ಪ್ರೀಪೇಯ್ಡ್ ಪ್ಲಾನ್ ಗಳನ್ನು ಜಾರಿಗೆ ತರಲಾಗಿದ್ದು, ಈ ಪ್ಲಾನ್ ಇಂದ ಏನೆಲ್ಲಾ ಉಪಯೋಗ ಆಗುತ್ತದೆ ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ.

ಸ್ಟೇಟ್ ಬ್ಯಾಂಕಿನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ, ಸಿಗಲಿದೆ ಅನ್ನಪೂರ್ಣ ಯೋಜನೆಯಲ್ಲಿ 50,000!

₹299 ರೂಪಾಯಿಯ ಪ್ಲಾನ್:

ಇದು ರಿಲಯನ್ಸ್ ಜಿಯೋ (Reliance Jio) ಜಾರಿಗೆ ತಂದಿರುವ ಯೋಜನೆ ಆಗಿದ್ದು, ಈ ಒಂದು ರೀಚಾರ್ಜ್ ಪ್ಲಾನ್ ನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ, ಜೊತೆಗೆ 42 ಜಿಬಿ ಡೇಟಾ ಸಿಗುತ್ತದೆ, ಅಂದರೆ ದಿನಕ್ಕೆ 1.5GB ಡೇಟಾ ಸಿಗುತ್ತದೆ.

ಇದರ ಜೊತೆಗೆ ದಿನಕ್ಕೆ 100 ಉಚಿತ SMS ಸಿಗಲಿದ್ದು, ಈ ಎಲ್ಲಾ ಸೌಕರ್ಯಗಳ ಜೊತೆಗೆ ಕೆಲವು ಓಟಿಟಿ ಪ್ಲಾಟ್ ಫಾರ್ಮ್ ಗಳ ಚಂದಾದಾರಿಕೆ ಕೂಡ ಸಿಗುತ್ತದೆ. ಇಂಥ ಉತ್ತಮವಾದ ಪ್ಲಾನ್ ಅನ್ನು ಲಾಂಚ್ ಮಾಡಿದೆ ಜಿಯೋ. ಇದರಿಂದ 4G ಗ್ರಾಹಕರಿಗೆ ರಿಲೀಫ್ ಆಗಲಿದೆ ಎಂದರು ತಪ್ಪಲ್ಲ.

ಈ 299 ರೂಪಾಯಿಯ ಪ್ಲಾನ್ ನಲ್ಲಿ ಸಿಗುವ ಇನ್ನಷ್ಟು ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ನಿಮಗೆ ಡೇಟಾ ಖಾಲಿ ಆದರೆ 64kbps ಸ್ಪೀಡ್ ನಲ್ಲಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಇದೆಲ್ಲವೂ ಸಿಗುತ್ತದೆ. ಆದರೆ ಇಲ್ಲಿ ಜಿಯೋ ಸಿನಿಮಾ ಪ್ರೀಮಿಯಂ ಇರುವುದಿಲ್ಲ.

ಇದು 299 ರೂಪಾಯಿಯ ಪ್ಲಾನ್ ಗಳ ಸೌಲಭ್ಯ ಆಗಿರಲಿದೆ. ಇನ್ನು 349 ರೂಪಾಯಿಯ ಪ್ಲಾನ್ ನಲ್ಲಿ ಅನಿಯಮಿತ 5G ಡೇಟಾ ಸಿಗುತ್ತದೆ. ಈ ಪ್ಲಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಸ್ಟೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು?

New Jio Prepaid Plan Launch at Cheap Price Amid Price Hike

Related Stories