Loan Scheme : ಯಾವುದೇ ಊರು ಅಥವಾ ದೇಶದಲ್ಲಿ ಮಹಿಳೆಯರು ಉನ್ನತಿ ಹೊಂದಿದರೆ, ಆ ದೇಶ ಉನ್ನತಿಯ ಸ್ಥಿತಿ ತಲುಪುತ್ತದೆ ಎಂದು ಹೇಳುತ್ತಾರೆ. ಮಹಿಳೆಯರಿಗೆ ಆ ರೀತಿ ಗೌರವ ಮತ್ತು ಪ್ರೋತ್ಸಾಹ ಕೊಡುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಕೂಡ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಇರಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ಈಗಲೂ ಕೂಡ ಸರ್ಕಾರ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಮಹಿಳೆಯರಿಗೆ ಯಾವ ರೀತಿ ಪ್ರಯೋಜನ ಸಿಗುತ್ತದೆ ಎಂದು ನೋಡೋಣ..
ಈಗಾಗಲೇ ಮಹಿಳೆಯರಿಗೆ ಅನುಕೂಲ ಆಗುವ ಹಾಗೆ ಗೃಹಲಕ್ಷ್ಮೀ ಯೋಜನೆ, ಸ್ವಾನಿಧಿ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದೆ. ಅದರ ಜೊತೆಯಲ್ಲೇ ಇದೀಗ ಅನ್ನಪೂರ್ಣ ಯೋಜನೆಯನ್ನು ಸಹ ಸರ್ಕಾರ ಜಾರಿಗೆ ತಂದಿದೆ.
ಇದು ಅಡುಗೆ ಚೆನ್ನಾಗಿ ಮಾಡುವ ಮಹಿಳೆಯರು, ಅದೇ ವಿಷಯದಲ್ಲಿ ಸ್ವಂತ ಉದ್ಯೋಗ (Own Business) ಶುರು ಮಾಡಿ, ಹಣ ಗಳಿಸಲು ಸರ್ಕಾರ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಸ್ವ ಉದ್ಯೋಗ ಮಾಡಬೇಕು ಎಂದುಕೊಂಡಿರುವ ಮಹಿಳೆಯರಿಗೆ ಇದು ಸಿಹಿ ಸುದ್ದಿ.
ಸ್ಟೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು?
ಅನ್ನಪೂರ್ಣ ಯೋಜನೆಯ ಉದ್ದೇಶ ಏನು?
ಸ್ವಂತ ಉದ್ಯೋಗದ ಕನಸು ಹೊತ್ತು, ರುಚಿಕಟ್ಟಾಗಿ ಅಡುಗೆ ಮಾಡಬಹುದಾದ ಕಲೆ ಹೊಂದಿರುವ ಮಹಿಳೆಯರಿಗೆ ಸಹಾಯ ಅಗುವಂಥ ಯೋಜನೆ ಇದಾಗಿದೆ. ಅನ್ನಪೂರ್ಣ ಯೋಜನೆಯ ಮೂಲಕ ಮಹಿಳೆಯರು ಅಡುಗೆ ಕ್ಷೇತ್ರದಲ್ಲಿ ತಮ್ಮದೇ ಸ್ವಂತ ಉದ್ಯೋಗ ಶುರು ಮಾಡುವುದಕ್ಕೆ, ಸರ್ಕಾರವೇ ಹಣ ಸಹಾಯ ಮಾಡಲಿದ್ದು, ₹50,000 ರೂಪಾಯಿಗಳ ವರೆಗು ಕಡಿಮೆ ಬಡ್ಡಿಗೆ ಸಾಲ (Loan) ಪಡೆಯಬಹುದು.
ಅರ್ಹತೆ ಏನು?
ಹಣಕಾಸಿನ ವಿಷಯದಲ್ಲಿ ಸಹಾಯ ಸಿಗುವ ಈ ಯೋಜನೆಗೆ ಯಾರೆಲ್ಲಾ ಅರ್ಹರಾಗುತ್ತಾರೆ?
*ಹಳ್ಳಿ ಮತ್ತು ಸಿಟಿ ಎರಡು ಕಡೆ ವಾಸ ಮಾಡುವ ಮಹಿಳೆಯರು ಅನ್ನಪೂರ್ಣ ಯೋಜನೆಯ ಸೌಲಭ್ಯ ಪಡೆಯಬಹುದು.
*ಸರ್ಕಾರದಿಂದ ಸಾಲ ಪಡೆದು, ಮೆಸ್ ಅಥವಾ ಹೋಟೆಲ್ ಶುರು (Hotel Business) ಮಾಡುವುದಕ್ಕೆ ಬೇಕಾದ ಉಪಕರಣಗಳನ್ನು ಖರೀದಿ ಮಾಡಬಹುದು.
*ಈ ಸಾಲ ಸಿಗುವುದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡರ ಸಹಭಾಗಿತ್ವದಲ್ಲಿ. ಹಾಗಾಗಿ ಎಲ್ಲಾ ಮಹಿಳೆಯರು ಕೂಡ ಈ ಒಂದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
2017ರಲ್ಲಿ ಗೋಲ್ಡ್ ರೇಟ್ ಎಷ್ಟಿತ್ತು ಗೊತ್ತಾ? ಕೇವಲ 6 ವರ್ಷಕ್ಕೆ ಇಷ್ಟೊಂದು ದುಬಾರಿ ಆಯ್ತಾ ಚಿನ್ನದ ಬೆಲೆ
ಯಾವ ಬ್ಯಾಂಕ್ ನಲ್ಲಿ ಲಭ್ಯವಿದೆ?
ಸರ್ಕಾರೇತರ ಬ್ಯಾಂಕ್ ಗಳಲ್ಲಿ ಈ ಯೋಜನೆ ಲಭ್ಯವಿದ್ದು, SBI ನಲ್ಲಿ ವಿಶೇಷವಾಗಿ ಮಹಿಳಾ ಅಕೌಂಟ್ ತೆರೆದರೆ, ಸುಲಭವಾಗಿ ಈ ಒಂದು ಸಾಲ ಸೌಲಭ್ಯ ಪಡೆಯಬಹುದು. ಈ ಯೋಜನೆಯಲ್ಲಿ 50 ಸಾವಿರ ಸಾಲ (Loan) ಸಿಗಲಿದ್ದು, ಇದಕ್ಕೆ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ.
ಈ ಸಾಲ ಪಡೆಯವವರು ತಿಂಗಳಿಗೆ ₹1388 ರೂಪಾಯಿಗಳ ಇಎಂಐ ಪಾವತಿ ಮಾಡಿಕೊಂಡು ಹೋಗಬಹುದು. ಮಹಿಳೆಯರಿಗೆ ಬಹಳ ಸಹಾಯ ಅಗುವಂಥ ಯೋಜನೆ ಇದಾಗಿದೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ.
Bumper Scheme from State Bank to women, will get 50,000 in Annapurna Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.