ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಬೇಕಾದಷ್ಟು ಹಣವನ್ನು ಸಂಪೂರ್ಣವಾಗಿ ಹೊಂದಿಸಲು ಸಾಧ್ಯವಾಗದೇ ಹೋದಾಗ, ಹೋಮ್ ಲೋನ್ (Home Loan) ಪಡೆದು ಸ್ವಂತ ಮನೆಯ (Own House) ಕನಸನ್ನು ನನಸು ಮಾಡಿಕೊಳ್ಳುತ್ತೇವೆ.
ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಗಳು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಎಷ್ಟಿದೆಯೋ ಅದರ ಆಧಾರದ ಮೇಲೆ ಬಡ್ಡಿ ವಿಧಿಸಿ, ಹೋಮ್ ಲೋನ್ ಕೊಡುತ್ತದೆ. ಹಾಗಿದ್ದಲ್ಲಿ ಹೋಮ್ ಲೋನ್ ಪಡೆಯುವುದಕ್ಕೆ ಬೆಸ್ಟ್ ಬ್ಯಾಂಕ್ ಗಳು ಯಾವುವು ಗೊತ್ತಾ? ಪೂರ್ತಿ ಡೀಟೇಲ್ಸ್ ತಿಳಿಯೋಣ..
ನಿಮ್ಮ ಮನೆಗೆ ಲಿಫ್ಟ್ ಹಾಕಿಸೋಕೆ ಎಷ್ಟು ಖರ್ಚಾಗುತ್ತೆ ಗೊತ್ತಾ? ಈ ಲೆಕ್ಕಾಚಾರ ನೋಡಿ ದುಬಾರಿ ಅನ್ನಿಸಲ್ಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಒಳ್ಳೆಯ ಕ್ರೆಡಿಟ್ ಸ್ಕೋರ್ ಅಂದರೆ 750 ಗಿಂತ ಜಾಸ್ತಿ ಕ್ರೆಡಿಟ್ ಸ್ಕೋರ್ (CIBIL Score) ಇರುವವರಿಗೆ ಈ ಬ್ಯಾಂಕ್ ನಲ್ಲಿ 8.6% ಇಂದ 9.65% ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುತ್ತದೆ. ಹಾಗೆಯೇ ಸಾಲ ಕೂಡ ಬೇಗ ಮಂಜೂರಾಗುತ್ತದೆ. 700 ಇಂದ 749 ವರೆಗು ಕ್ರೆಡಿಟ್ ಸ್ಕೋರ್ ಇದ್ದರೆ 8.7% ಬಡ್ಡಿದರದಲ್ಲಿ ಸಾಲ ಸಿಗಬಹುದು.
650 ಇಂದ 699 ವರೆಗು ಕ್ರೆಡಿಟ್ ಸ್ಕೋರ್ ಇದ್ದರೆ 9.45% ಬಡ್ಡಿದರಲ್ಲಿ ಸಾಲ ಸಿಗುತ್ತದೆ. 550 ಇಂದ 649 ವರೆಗು ಕ್ರೆಡಿಟ್ ಸ್ಕೋರ್ ಇದ್ದರೆ 9.65% ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಹೀಗೆ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ.
ಬ್ಯಾಂಕ್ ಆಫ್ ಬರೋಡಾ
ಇಲ್ಲೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಕೊಡಲಾಗುತ್ತದೆ. ಇಲ್ಲಿ ಹೋಮ್ ಲೋನ್ ಮೇಲಿನ ಬಡ್ಡಿದರ 8.60% ಇಂದ 10.60% ವರೆಗು ಇರುತ್ತದೆ. ಈ ಬಡ್ಡಿದರವನ್ನು ಯಾರು ಉದ್ಯೋಗ ಹೊಂದಿದ್ದಾರೋ, ಯಾರು ಸ್ವಂತ ಉದ್ಯೋಗ ಮಾಡುತ್ತಿದ್ದಾರೋ ಅದರ ಮೇಲೆ ನಿರ್ಧರಿಸಲಾಗುತ್ತದೆ. ಹೋಮ್ ಲೋನ್ ಪಡೆಯುವುದಕ್ಕೆ ಈ ಹೋಮ್ ಲೋನ್ ಕೂಡ ಒಳ್ಳೆಯ ಆಯ್ಕೆ ಆಗಿದೆ.
2017ರಲ್ಲಿ ಗೋಲ್ಡ್ ರೇಟ್ ಎಷ್ಟಿತ್ತು ಗೊತ್ತಾ? ಕೇವಲ 6 ವರ್ಷಕ್ಕೆ ಇಷ್ಟೊಂದು ದುಬಾರಿ ಆಯ್ತಾ ಚಿನ್ನದ ಬೆಲೆ
ICICI ಬ್ಯಾಂಕ್
ಹೋಮ್ ಲೋನ್ ಪಡೆಯುವುದಕ್ಕೆ ಇದು ಕೂಡ ಉತ್ತಮವಾದ ಬ್ಯಾಂಕ್ ಆಗಿದ್ದು, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ಸಿಗುತ್ತದೆ. 800 ಕ್ರೆಡಿಟ್ ಸ್ಕೋರ್ ಇದ್ದರೆ 9% ಬಡ್ಡಿದರದಲ್ಲಿ ಹೋಮ್ ಲೋನ್ (Home Loan) ಸಿಗುತ್ತದೆ. 750 ಇಂದ 800 ವರೆಗು ಕ್ರೆಡಿಟ್ ಸ್ಕೋರ್ ಇದ್ದರೆ, 9.10% ಬಡ್ಡಿದರ ವಿಧಿಸಲಾಗುತ್ತದೆ.
HDFC ಬ್ಯಾಂಕ್
ಇಲ್ಲಿ ಕೂಡ ನಿಮಗೆ ಒಳ್ಳೆಯ ಬಡ್ಡಿದರಕ್ಕೆ ಹೋಮ್ ಲೋನ್ ಸಿಗುತ್ತದೆ. 8.50% ಇಂದ 9.15% ವರೆಗು ಹೋಮ್ ಲೋನ್ ಗೆ ಬಡ್ಡಿದರ ನಿಗದಿ ಆಗಿರುತ್ತದೆ. ಉದ್ಯೋಗ ಮಾಡುತ್ತಿರುವವರಿಗೆ ಅವರ ಕ್ರೆಡಿಟ್ ಸ್ಕೋರ್ ಮೇಲೆ ಬಡ್ಡಿ ನಿಗದಿ ಆಗುತ್ತದೆ. ಈ ರೀತಿಯಾಗಿ ಹೋಮ್ ಲೋನ್ ಪಡೆಯಬಹುದು.
ಪೆಟ್ರೋಲ್ ಬೆಲೆ ಕೇವಲ ₹40 ರೂಪಾಯಿ ಇದ್ದಾಗ, Yamaha RX100 ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಸುದ್ದಿ
ಪಂಜಾಬ್ ನ್ಯಾಷನಲ್ ಬ್ಯಾಂಕ್
ಈ ಬ್ಯಾಂಕ್ ನಲ್ಲಿ 8.40% ಇಂದ 10.10% ವರೆಗು ಹೋಮ್ ಲೋನ್ ಬಡ್ಡಿದರ ನಿಗದಿ ಮಾಡಲಾಗಿದೆ. ಇಲ್ಲೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಸಿಗುತ್ತದೆ.
ಈ ಎಲ್ಲಾ Banks ಹೋಮ್ ಲೋನ್ ಪಡೆಯಲು ಉತ್ತಮವಾದ ಆಯ್ಕೆ ಆಗಿದ್ದು, ನೀವು ಈ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಪಡೆಯಬಹುದು.
What is the interest rate for State Bank and Canara Bank Home Loans
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.