ನಮ್ಮ ಹುಡುಗರಿಗೆ ಬೇರೆ ಎಲ್ಲಾ ಬೈಕ್ ಗಳಿಗಿಂತ ಯಮಹಾ RX100 Bike ಮೇಲೆ ವಿಶೇಷವಾದ ಕ್ರೇಜ್ ಇದೆ ಎಂದರೆ ತಪ್ಪಲ್ಲ. ಈ ಬೈಕ್ ತಯಾರಿಕೆ ಹಲವು ವರ್ಷಗಳ ಹಿಂದೆಯೇ ನಿಂತು ಹೋಗಿದೆ, ಆದರೂ ಕೂಡ ಈ ಬೈಕ್ ಮೇಲೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.
ಜನರಿಗೆ ಈ ಬೈಕ್ ಮೇಲೆ ಇರುವ ಕಾರಣದಿಂದ ಇದೀಗ ಯಮಹಾ ಸಂಸ್ಥೆಯು RX100 ಬೈಕ್ ಅನ್ನು ಮತ್ತೆ ಮಾರುಕಟ್ಟೆಗೆ ತರುವುದಕ್ಕೆ ಮುಂದಾಗಿದೆ. ಬೈಕ್ ಪ್ರಿಯರಿಗೆ ಇದು ಬಹಳ ಸಂತೋಷದ ಸುದ್ದಿ ಆಗಿದ್ದು, ಈ ವಿಚಾರದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..
RX ಬೈಕ್ ಹೊಸದಾಗಿ ಬರುತ್ತಿರುವ ಕಾರಣ, ಈ ಬಾರಿ RX100 ಬೈಕ್ ನಲ್ಲಿ ಮೈಲೇಜ್ ಇನ್ನೂ ಚೆನ್ನಾಗಿ ಇರಲಿದ್ದು, ಬೈಕರ್ ಗಳಿಗೆ ಹೆಚ್ಚು ಅನುಕೂಲ ಸಿಗಲಿದೆ. ಒಟ್ಟಿನಲ್ಲಿ ಈಗಿನ ಯುವಕರಿಗೆ RX100 ಬೈಕ್ ಮತ್ತೆ ಲಾಂಚ್ ಆಗುತ್ತಿರುವುದು ಸಂತೋಷ ತಂದಿದ್ದು, ಅವರೆಲ್ಲರೂ ಸಹ ಈ ಬೈಕ್ ಬೇಗ ಲಾಂಚ್ ಆಗಲಿ ಎಂದು ಕಾಯುತ್ತಿದ್ದಾರೆ. ಹಾಗಿದ್ದಲ್ಲಿ, RX100 ಹೊಸ ಬೈಕ್ ಲಾಂಚ್ (Bike Launches) ಆಗೋದು ಯಾವಾಗ? ಏನೆಲ್ಲಾ ಹೊಸ ಫೀಚರ್ಸ್ ಗಳು ಇರಲಿದೆ? ಎಲ್ಲಾ ಮಾಹಿತಿ ತಿಳಿಯೋಣ..
ಬಾಡಿಗೆ ಮನೆ ಓನರ್ ಗಳಿಗೆ ಇನ್ಮುಂದೆ ಹೊಸ ರೂಲ್ಸ್, ಏಕಾಏಕಿ ಕಠಿಣ ನಿಯಮ ಜಾರಿಗೆ ತಂದ ಸರ್ಕಾರ!
RX100 ಬೈಕ್ ವಿಶೇಷತೆಗಳೇನು?
Yamaha RX100 Bike ಹೊಸ ಮಾದರಿಯ ಬೈಕ್ ಇನ್ನು ಕೂಡ ಲಾಂಚ್ ಆಗಿಲ್ಲ, ಆದರೆ ಬೈಕ್ ನ ಫೀಚರ್ಸ್ ಇಂದ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ.. ಹೊಸ RX100 ಬೈಕ್ ನ ಬಾಡಿ ತುಂಬಾ ಸ್ಲಿಮ್ ಆಗಿದೆ. ಹಾಗೆಯೇ ಬೈಕ್ ನ ಸೀಟ್ ಉದ್ದ ಇದ್ದು, ಇದರ ಟ್ಯಾಂಕ್ ಚಿಕ್ಕದಾಗಿದೆ.
ಈ ಫೀಚರ್ಸ್ ಬೇರೆ ಎಲ್ಲಾ ಬೈಕ್ ಗಿಂತಲು ವಿಭಿನ್ನವಾಗಿದೆ ಎಂದರೂ ತಪ್ಪಲ್ಲ. ಈ ರೀತಿ ಸ್ಪೋರ್ಟಿ ಲುಕ್ ಕೊಡುವ ಬೈಕ್ ನಲ್ಲಿ ರೈಡ್ ಮಾಡುವುದಕ್ಕೆ ಬಹಳಷ್ಟು ಜನರು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಹೆಚ್ಚು ಹುಡುಗರು RX100 ಬೈಕ್ ಅನ್ನು ತುಂಬಾ ಇಷ್ಟಪಡುತ್ತಾರೆ.
ಇನ್ನು ಈ ಬೈಕ್ ನ ಬೇರೆ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 98Cc, 2 ಸ್ಟ್ರೋಕ್ ಇಂಜಿನ್ ಹೊಂದಿದೆ. ಈ ಇಂಜಿನ್ ಬಹಳ ಪವರ್ ಫುಲ್ ಆಗಿದ್ದು, ಹೈ ಸ್ಪೀಡ್ ನಲ್ಲಿ ಸವಾರಿ ಮಾಡಲು ಸಾಧ್ಯ ಆಗುತ್ತಿದ್ದ ಬೈಕ್ ಇದು.
ಈ ಬೈಕ್ ನಲ್ಲಿ ಇರುವ ಹೈ ಸ್ಪೀಡ್ ಇಂದಲೇ ಹೆಚ್ಚು ಹುಡುಗರಿಗೆ ಈ ಒಂದು ಬೈಕ್ ತುಂಬಾ ಇಷ್ಟ ಆಗುತ್ತಿದೆ. ಈ ಬೈಕ್ ನ ಮೈಲೇಜ್ ಬಗ್ಗೆ ಹೇಳುವುದಾದರೆ, 45-50 km ಮೈಲೇಜ್ ಕೊಡುತ್ತದೆ. ಈಗ ಪೆಟ್ರೋಲ್ ಬೆಲೆ (Petrol Price) ಅತಿ ಹೆಚ್ಚಾಗಿರುವಾಗ ಈ ಬೈಕ್ ದಿನನಿತ್ಯದ ಬಳಕೆಗೆ ಸೂಕ್ತ ಅನ್ನಿಸುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿ ಸಿಗಲ್ಲ! ಇಲ್ಲಿದೆ ಮಹತ್ವದ ಮಾಹಿತಿ
ಈ ಬೈಕ್ ನ ಮತ್ತೊಂದು ವಿಶೇಷತೆ ಏನು ಎಂದರೆ, RX100 ಬೈಕ್ ನ ಸ್ಪೇರ್ ಪಾರ್ಟ್ ಗಳು ಸುಲಭವಾಗಿ ಲಭ್ಯವಿರುವ ಕಾರಣ, ಈ ಬೈಕ್ ನ ನಿರ್ವಹಣೆ ದುಬಾರಿ ಅನ್ನಿಸುವುದಿಲ್ಲ,ಕಡಿಮೆ ಬೆಲೆಗೆ ಮ್ಯಾನೇಜ್ ಮಾಡಬಹುದಿತ್ತು.
ಮೊದಲ ಸಾರಿ ಈ ಬೈಕ್ ಲಾಂಚ್ ಆದಾಗ ಇದರ ಬೆಲೆ ₹19,764 ರೂಪಾಯಿ ಆಗಿತ್ತು, ಈಗಿನ ಕಾಲಕ್ಕೆ ಇದು ₹1 ಲಕ್ಷ ಬೆಲೆ ಆಗಿರಲಿದೆ. ಹಾಗಾಗಿ RX100 ಕಡಿಮೆ ಬೆಲೆಯ ಬೈಕ್ ಅಂತೂ ಅಲ್ಲ. ಇದೀಗ ಈ ಬೈಕ್ ಮತ್ತೆ ಲಾಂಚ್ ಆಗುತ್ತಿದೆ.
Do you know how much a Yamaha RX100 bike cost when petrol was only 40 Rupees
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.