ಒಂದು ಕುಟುಂಬದ ಪಿತ್ರಾರ್ಜಿತ ಆಸ್ತಿಯ ಮೇಲೆ ಮೊದಲೆಲ್ಲಾ ಹೆಣ್ಣಿಗೆ ಯಾವುದೇ ಹಕ್ಕು ಇರಲಿಲ್ಲ. ಮನೆಯ ಗಂಡು ಮಕ್ಕಳಿಗೆ ಮಾತ್ರ ಪೂರ್ವಜರ ಆಸ್ತಿಯ ಮೇಲೆ ಹಕ್ಕು ಇತ್ತು, ಹೆಣ್ಣುಮಕ್ಕಳಿಗೆ ಯಾವುದೇ ಹಕ್ಕು ಇರಲಿಲ್ಲ. ಆದರೆ ಒಂದಷ್ಟು ವರ್ಷಗಳ ಹಿಂದೆ ಕಾನೂನಿನಲ್ಲಿ ತಿದ್ದುಪಡಿ ಮಾಡಲಾದ ನಂತರ, ಮಹಿಳೆಗೂ ಕೂಡ ಕುಟುಂಬದ ಪೂರ್ವಜರ ಆಸ್ತಿಯಲ್ಲಿ ಸಮಪಾಲು ಬಂದಿದೆ.
ಗಂಡುಮಕ್ಕಳಿಗೆ ತಂದೆ ತಾಯಿಯ ಆಸ್ತಿ (Property) ಮೇಲೆ ಇರುವಷ್ಟೇ ಹಕ್ಕು ಹೆಣ್ಣುಮಕ್ಕಳಿಗೆ ಕೂಡ ಇದೆ ಎನ್ನುವುದನ್ನು ಈ ಒಂದು ಕಾನೂನಿನ ಅನುಸಾರ ತಿಳಿದುಕೊಳ್ಳಬೇಕು.
ಆದರೆ ಎಲ್ಲಾ ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ಕೆಲವು ಪರಿಸ್ಥಿತಿಗಳ ಸಮಯದಲ್ಲಿ, ಹೆಣ್ಣುಮಕ್ಕಳಿಗೆ ತವರು ಮನೆ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಈ ಒಂದು ವಿಷಯವನ್ನು ಕೂಡ ನಾವು ತಿಳಿದುಕೊಳ್ಳಬೇಕು.
ಇದೀಗ ಸರ್ಕಾರವು ಹೆಣ್ಣುಮಕ್ಕಳ ವಿಷಯಕ್ಕೆ ಇರುವ ಕಾನೂನಿನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ, ಅದರ ಅನುಸಾರ ಅಂಥ ಸಂದರ್ಭಗಳಲ್ಲಿ ಮಹಿಳೆಯರು ಆಸ್ತಿಯಲ್ಲಿ ಪಾಲು ಕೇಳುವ ಹಾಗೆ ಇರುವುದಿಲ್ಲ. ಯಾವ ಸಂದರ್ಭದಲ್ಲಿ ಈ ನಿಯಮ ಅಪ್ಲೈ ಆಗುತ್ತದೆ? ಪೂರ್ತಿಯಾಗಿ ತಿಳಿಯೋಣ..
ಸ್ಟೇಟ್ ಬ್ಯಾಂಕಿನಲ್ಲಿ 15 ಲಕ್ಷ ಕಾರ್ ಲೋನ್ ತಗೊಂಡ್ರೆ ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕಾಗುತ್ತೆ ಗೊತ್ತಾ?
ಈ ಸಂದರ್ಭದಲ್ಲಿ ಮಹಿಳೆಯರು ಆಸ್ತಿಯಲ್ಲಿ ಪಾಲು ಕೇಳುವ ಹಾಗಿಲ್ಲ:
*ಆ ಆಸ್ತಿ ತಂದೆಯ ಸ್ವಯಾರ್ಜಿತ ಆಸ್ತಿ ಆಗಿದ್ದು, ತಂದೆಯವರು ಬದುಕಿದ್ದಾರೆ ಎಂದರೆ, ಆ ಆಸ್ತಿಯ ಮೇಲೆ ಮನೆಯ ಗಂಡು ಮಗನಿಗೆ ಮತ್ತು ಹೆಣ್ಣುಮಗಳಿಗೆ ಇಬ್ಬರಿಗೂ ಹಕ್ಕು ಇರುವುದಿಲ್ಲ.
*ಸ್ವಯಾರ್ಜಿತ ಆಸ್ತಿ ಆಗಿದ್ದಲ್ಲಿ ಅದನ್ನು ತಂದೆಯಾದವರು ಅವರ ಇಚ್ಛೆಯ ಅನುಸಾರ ಭಾಗ ಮಾಡಬಹುದು, ಅದನ್ನು ಯಾರೂ ಕೂಡ ಪ್ರಶ್ನಿಸುವ ಹಾಗಿಲ್ಲ.
*ಸ್ವಯಾರ್ಜಿತ ಆಸ್ತಿಯನ್ನು ತಂದೆ ಮರಣಕ್ಕಿಂತ ಮೊದಲೇ ವಿಲ್ ಮಾಡಿಟ್ಟು, ದಾನ ಕೊಟ್ಟು ಹೋಗಿದ್ದರೆ, ಅಂಥ ಸಮಯದಲ್ಲಿ ಮನೆಯ ಮಗಳು ಆಸ್ತಿಯಲ್ಲಿ ಪಾಲು ಕೇಳಲು ಆಗುವುದಿಲ್ಲ.
*ಆಸ್ತಿ ಪಾಲು ಮಾಡುವ ಸಮಯದಲ್ಲಿ ತನಗೆ ಆಸ್ತಿ ಬೇಡ ಎಂದು ಹೇಳಿ, ಹಕ್ಕುಪತ್ರಕ್ಕೆ ಸೈನ್ ಮಾಡಿ ಕೊಟ್ಟರೆ, ಮತ್ತೆ ಆಸ್ತಿ ಬೇಕು ಎಂದು ಮಹಿಳೆಯರು ಕೇಳುವ ಹಾಗಿಲ್ಲ.
ಕೇವಲ ₹10 ಸಾವಿರ ಡೌನ್ ಪೇಮೆಂಟ್ ಮಾಡಿ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ, ಭರ್ಜರಿ ಆಫರ್!
*ಮಾತನಾಡೋವಾಗ ತಮಗೆ ಆಸ್ತಿ ಬೇಡ ಎಂದು ಹೇಳಿ, ಎಷ್ಟೋ ಸಮಯದ ಬಳಿಕ ಆ ಜಾಗದ ಮೌಲ್ಯ ಜಾಸ್ತಿ ಆದಾಗ, ಬಂದು ಮತ್ತೆ ಪಾಲು ಕೇಳುವ ಹಾಗಿಲ್ಲ.
*ಆದರೆ ಬೇಕೆಂದೇ ತವರು ಮನೆಯಿಂದ ಆಸ್ತಿ ಕೊಡದೇ ಹೋದರೆ, ಕಾನೂನಿನ ಪ್ರಕಾರ ಹೋರಾಟ ಮಾಡಬಹುದು.
*2005 ರಲ್ಲಿ ತಿದ್ದುಪಡಿ ಮಾಡಲಾದ ಹಿಂದೂ ವಾರಸುದಾರರ ಕಾಯ್ದೆಯ ಮುಂಚೆ ಆಸ್ತಿ ಭಾಗ ಆಗಿ ಹೋಗಿದ್ದರೆ, ಈಗ ಆ ಆಸ್ತಿಯಲ್ಲಿ ಪಾಲು ಕೇಳುವ ಹಾಗಿಲ್ಲ.
*ಅದೇ ರೀತಿಯಲ್ಲಿ ಪತಿಯ ಆಸ್ತಿಯಲ್ಲಿ ಕೂಡ ಮಹಿಳೆಗೆ ಪಾಲು ಇರುವುದಿಲ್ಲ. ಗಂಡನ ನಿಧನವಾದ ನಂತರ ಮಾತ್ರ ಆಸ್ತಿ ಆಕೆಗೂ ಮತ್ತು ಮಕ್ಕಳಿಗೂ ಸೇರುತ್ತದೆ.
ಗೋಲ್ಡ್ ಲೋನ್ ತಗೊಂಡು ಆ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಇನ್ಮುಂದೆ ಹೊಸ ರೂಲ್ಸ್
ಹೆಣ್ಣುಮಕ್ಕಳು ತವರು ಮನೆಯ ಆಸ್ತಿ ಪಡೆಯುವ ವಿಷಯಕ್ಕೆ ಸರ್ಕಾರ ಈ ಥರದ ನಿಯಮಗಳನ್ನು ಜಾರಿಗೆ ತಂದಿದೆ. ಎಲ್ಲಾ ಹೆಣ್ಣುಮಕ್ಕಳು ಕೂಡ ಈ ವಿಷಯಗಳನ್ನು ತಿಳಿದು, ತವರು ಮನೆಯವರ ಜೊತೆಗೆ ಜಗಳ ಮಾಡಿಕೊಳ್ಳದೇ, ಆಸ್ತಿ ಬರಬೇಕು ಎಂದಾದರೆ ಶಾಂತ ರೀತಿಯಲ್ಲಿ ಪಡೆದುಕೊಳ್ಳಬಹುದು ಅಥವಾ ಕಾನೂನಿನ ಮೊರೆ ಹೋಗಿ ಆಸ್ತಿ ಪಡೆದುಕೊಳ್ಳಬಹುದು. ಜಗಳ ಎಂದು ಹೋದರೆ ಯಾವ ಸಂಬಂಧ ಕೂಡ ಉಳಿಯುವುದಿಲ್ಲ.
In such cases, girls do not get property
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.