ಗೋಲ್ಡ್ ಲೋನ್ ತಗೊಂಡು ಆ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಇನ್ಮುಂದೆ ಹೊಸ ರೂಲ್ಸ್
Gold Loan : ಆರ್ಥಿಕವಾಗಿ ಸಮಸ್ಯೆ ಉಂಟಾದಾಗ, ಹಣಕಾಸಿನ ಅವಶ್ಯಕತೆ ಬಿದ್ದಾಗ ಲೋನ್ (Bank Loan) ಮೊರೆ ಹೋಗುತ್ತೇವೆ. ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ನಮಗೆ ಲೋನ್ ಸಿಗುತ್ತದೆ. ಪರ್ಸನಲ್ ಲೋನ್ (Personal Loan), ಹೋಮ್ ಲೋನ್ (Home Loan), ವೆಹಿಕಲ್ ಲೋನ್ ಇವುಗಳ ಜೊತೆಗೆ ಗೋಲ್ಡ್ ಲೋನ್ ಅನ್ನು ಕೂಡ ಪಡೆಯಬಹುದು.
ನಮ್ಮ ಹತ್ತಿರ ಇರುವ ಚಿನ್ನದ ಆಭರಣವನ್ನು ಪ್ಲೆಡ್ಜ್ ಮಾಡಿ, ಸಾಲ ಪಡೆದುಕೊಳ್ಳಬಹುದು. ಈ ಒಂದು ಅವಕಾಶ ಬಹುತೇಕ ಎಲ್ಲ ಬ್ಯಾಂಕ್ ಗಳಲ್ಲಿ ಕೂಡ ಲಭ್ಯವಿದೆ.
ಸಾಲವನ್ನೇನೋ ಪಡೆದುಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಪಡೆದ ಸಾಲವನ್ನು ನಾವು ಮರುಪಾವತಿ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ. ಒಂದು ವೇಳೆ ಆ ರೀತಿ ನಡೆದು ಹೋದರೆ, ಏನಾಗುತ್ತದೆ?
ಬ್ಯಾಂಕ್ ಇಂದ ನಿಮ್ಮ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ? ನೀವು ಜೈಲಿಗೆ ಹೋಗುವಂಥ ಪರಿಸ್ಥಿತಿ ಎದುರಾಗಿ ಬಿಡುತ್ತಾ? ಈ ವಿಷಯದ ಬಗ್ಗೆ ಇಂದು ಪೂರ್ತಿ ಡೀಟೇಲ್ಸ್ ತಿಳಿದುಕೊಳ್ಳೋಣ..
ಗೋಲ್ಡ್ ಲೋನ್ ಡೀಟೇಲ್ಸ್:
*ಗೋಲ್ಡ್ ಲೋನ್ (Gold Loan) ಅನ್ನು ನೀವು ವ್ಯವಸಾಯದ ಕಾರಣಕ್ಕೆ ಪಡೆದರೆ ಯಾವುದೇ ಸಮಸ್ಯೆ ಇಲ್ಲ, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೆ ಲೋನ್ ಪಡೆದರೂ ಸಹ, ಅದನ್ನು ಮರುಪಾವತಿ ಮಾಡಿಲ್ಲ ಎಂದರೆ, ನೀವು ಈಗಾಗಲೇ ಕಟ್ಟುತ್ತಿರುವ ಬಡ್ಡಿಯ ಮೇಲೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.
*ನೀವು ಎಲ್ಲಿ ಗೋಲ್ಡ್ ಲೋನ್ ಪಡೆದಿದ್ದೀರೋ ಅಲ್ಲಿಂದ ನಿಮಗೆ ಇಮೇಲ್, ಮೆಸೇಜ್, ಕಾಲ ಎಲ್ಲವೂ ಬರುತ್ತದೆ, ನೀವು ಇನ್ನು ಕೂಡ ಲೋನ್ ಮರುಪಾವತಿ (Loan Re Payment) ಮಾಡಿಲ್ಲ ಎಂದು ನೆನಪು ಮಾಡುತ್ತಾರೆ.
*ಒಂದು ವೇಳೆ ನೀವು ಇದ್ಯಾವುದಕ್ಕೂ ಉತ್ತರ ಕೊಡದೇ ಹೋದರೆ, ನೀವು ಪ್ಲೆಡ್ಜ್ ಮಾಡಿರುವ ಚಿನ್ನವನ್ನು ಹಾರಾಜಿನಲ್ಲಿ ಮಾರಾಟ ಮಾಡಿ, ಸಾಲಕ್ಕೆ ವಜಾ ಮಾಡಿಕೊಳ್ಳಲಾಗುತ್ತದೆ. ಆಕಸ್ಮಾತ್ ಸಾಲಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಆದರೆ, ಅದನ್ನು ನಿಮಗೆ ಹಿಂದಿರುಗಿಸಲಾಗುತ್ತದೆ.
ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?
ಲೋನ್ ಡೀಫಾಲ್ಟರ್ ಆಗದೇ ಇರೋದು ಹೇಗೆ?
*ಮನುಷ್ಯರಿಗೆ ಸಮಸ್ಯೆಗಳು ಯಾವ ರೀತಿ ಬರುತ್ತದೆ ಎಂದು ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ, ಆ ರೀತಿ ಆದಾಗ ನೀವು ಲೋನ್ ಮರುಪಾವತಿ ಮಾಡಲು ಸಾಧ್ಯ ಆಗುತ್ತಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾದರೆ, ಆಗ ನೀವು ಅಧಿಕಾರಿಗಳ ಜೊತೆಗೆ ಮಾತನಾಡಿ, ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಲೋನ್ ಪಾವತಿ ಮಾಡುವುದಕ್ಕೆ ಸಮಯವನ್ನು ಹೆಚ್ಚಿಸಿಕೊಳ್ಳಬಹುದು.
*ಈ ರೀತಿಯಲ್ಲಿ ಅಧಿಕಾರಿಗಳ ಜೊತೆಗೆ ಮಾತನಾಡಿ, ನೀವು ಪಾವತಿಸುವ ಬಡ್ಡಿ ಮೊತ್ತದಲ್ಲಿ, ಸ್ವಲ್ಪ ಹಣವನ್ನು ಪಾವತಿ ಮಾಡುವ ಹಾಗೆ ಕೇಳಿಕೊಳ್ಳಬಹುದು.
ಯಾರೆಲ್ಲಾ ಬ್ಯಾಂಕ್ ಇಂದ ಯಾವುದೇ ರೀತಿಯ ಲೋನ್ ಪಡೆಯುತ್ತೀರೋ, ಅವರೆಲ್ಲರು ಕೂಡ ಮುಖ್ಯವಾಗಿ ನೆನಪಿಡಬೇಕಾದ ವಿಷಯ ಏನು ಎಂದರೆ, ಬ್ಯಾಂಕ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದು, ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ (Monthly EMI) ಮಾಡುವುದು. ಈ ರೀತಿ ಮಾಡುವುದರಿಂದ ನೀವು ಡೀಫಾಲ್ಟರ್ ಆಗುವುದರಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ಇನ್ಯಾವುದೇ ಸಮಸ್ಯೆ ಆಗುವುದಿಲ್ಲ..
Do you know what will happen if you take a gold loan and do not repay the loan
Our Whatsapp Channel is Live Now 👇