ಪೋಸ್ಟ್ ಆಫೀಸ್ ನಲ್ಲಿ 5 ರಿಂದ 10 ಲಕ್ಷ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ? ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ ಗೊತ್ತಾ?
ಫಿಕ್ಸೆಡ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿ ಯೋಜನೆ ಎಂದು ಕರೆಯುವ ಈ ಯೋಜನೆಯಲ್ಲಿ ನೀವು ಒಂದು ಸಾರಿ ಹೂಡಿಕೆ ಮಾಡಿದರೆ ಸಾಕು, ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಅವಧಿಯಲ್ಲಿ ನಿಮ್ಮ ಅಕೌಂಟ್ ಗೆ ಬಡ್ಡಿ ಹಣ ಕ್ರೆಡಿಟ್ ಆಗುತ್ತದೆ.
ನೀವು ಹೂಡಿಕೆ ಮಾಡಬೇಕು, ಹಣ ಉಳಿತಾಯ ಮಾಡಬೇಕು ಎಂದುಕೊಂಡಿದ್ದರೆ, ಅದಕ್ಕಾಗಿ ಅತ್ಯುತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಹೂಡಿಕೆಗಳು ಎಂದರೆ ತಪ್ಪಲ್ಲ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆಗೆ ಅನೇಕ ಆಯ್ಕೆಗಳಿವೆ, ಲಾಭ ತರುವಂಥ ಯೋಜನೆಗಳಿವೆ, ಅವುಗಳ ಮೂಲಕ ನಾವು ಹೂಡಿಕೆ ಮಾಡುವ ಮೊತ್ತಕ್ಕೆ ಉತ್ತಮವಾದ ರಿಟರ್ನ್ಸ್ ಪಡೆಯಬಹುದು. ಇಂದು ನಾವು ನಿಮಗೆ ಪೋಸ್ಟ್ ಆಫೀಸ್ ನಲ್ಲಿ ಒಳ್ಳೆಯ ಲಾಭ ಸಿಗುವಂಥ FD ಯೋಜನೆ ಆಗಿದೆ.
ಫಿಕ್ಸೆಡ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿ ಯೋಜನೆ ಎಂದು ಕರೆಯುವ ಈ ಯೋಜನೆಯಲ್ಲಿ ನೀವು ಒಂದು ಸಾರಿ ಹೂಡಿಕೆ ಮಾಡಿದರೆ ಸಾಕು, ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಅವಧಿಯಲ್ಲಿ ನಿಮ್ಮ ಅಕೌಂಟ್ ಗೆ ಬಡ್ಡಿ ಹಣ ಕ್ರೆಡಿಟ್ (Money Credit) ಆಗುತ್ತದೆ.
3, 5, 10 ಹೀಗೆ ಅಲ್ಪಾವಧಿ ಇಂದ ದೀರ್ಘವಾಧಿ ಕಾಲದವರೆಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 5 ವರ್ಷ ಅಥವಾ ಅದನ್ನು ಮೇಲ್ಪಟ್ಟ ಹೂಡಿಕೆಗೆ, 1961ರ ಇನ್ಕಮ್ ಟ್ಯಾಕ್ಸ್ ರೂಲ್ಸ್ ನ ಅನುಸಾರ, 1.50 ಲಕ್ಷದವರೆಗೂ ತೆರಿಗೆ ಮುಕ್ತ ಪ್ರಯೋಜನ ಸಹ ಸಿಗುತ್ತದೆ.
ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?
Tax Saving Fixed Deposit Scheme:
ಈ ಥರದ ಯೋಜನೆಗೆ ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಎಂದು ಕರೆಯಲಾಗುತ್ತದೆ. ಈ ಥರದ ಯೋಜನೆಗಳ ಮೇಲೆ ವಾರ್ಷಿಕವಾಗಿ ನಿಮಗೆ 7.5% ಬಡ್ಡಿದರ ವಿಧಿಸಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಇಂದ ಹೂಡಿಕೆ ಶುರು ಮಾಡಬಹುದು.
ಹಾಗೆಯೇ ಈ Fixed Deposit ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ, ಮ್ಯಾಕ್ಸಿಮಮ್ ಹಣದ ಲಿಮಿಟ್ ಇಲ್ಲ, ನೀವು ಎಷ್ಟು ಹಣವನ್ನಾದರು ಹೂಡಿಕೆ ಮಾಡಬಹುದು.
ಈ FD ಯೋಜನೆಯ ಇನ್ನಷ್ಟು ವಿಶೇಷತೆಗಳು ಯಾವುವು ಎಂದರೆ, ಇದರಲ್ಲಿ ನೀವು ಸಿಂಗಲ್ ಅಕೌಂಟ್ ಮತ್ತು ಜಾಯಿಂಟ್ ಅಕೌಂಟ್ ಎರಡನ್ನು ಕೂಡ ತೆರೆಯಬಹುದು. 18 ವರ್ಷ ಮೇಲ್ಪಟ್ಟ ಯಾರೇ ಆದರೂ ಕೂಡ FD ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದು, ಹಾಗೆಯೇ ತಂದೆ ತಾಯಿಯು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. 5 ವರ್ಷಗಳ FD ಯೋಜನೆಯ ಅವಧಿ ಮುಗಿದ ನಂತರ ಇನ್ನು 18 ತಿಂಗಳುಗಳ ಕಾಲ ವಿಸ್ತರಿಸಬಹುದು.
15 ರಿಂದ 20 ವರ್ಷಕ್ಕೆ ಅಂತ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?
ಈ ಯೋಜನೆಯಲ್ಲಿ ಸಿಗುವ ರಿಟರ್ನ್ಸ್ ಎಷ್ಟು?
*ಈ FD ಯೋಜನೆಯಲ್ಲಿ ನೀವು 5 ವರ್ಷದ ಅವಧಿಗೆ 3 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದರೆ, ₹1,34,084 ರೂಪಾಯಿಗಳ ಬಡ್ಡಿ ಸಿಗುತ್ತದೆ. ಮೆಚ್ಯುರಿಟಿ ಅವಧಿ ವೇಳೆಗೆ ₹4,34,084 ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ.
*FD ಯೋಜನೆಯಲ್ಲಿ 5 ವರ್ಷದ ಅವಧಿಗೆ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ₹2,24,974 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆಯುತ್ತೀರಿ, ಮೆಚ್ಯುರಿಟಿ ಅವಧಿಗೆ ₹7,24,974 ರೂಪಾಯಿ ನಿಮ್ಮದಾಗುತ್ತದೆ.
*ಈ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ 10 ಲಕ್ಷ ಹೂಡಿಕೆ ಮಾಡಿದರೆ, ₹4,49,948 ರೂಪಾಯಿ ಬಡ್ಡಿ ಸಿಗುತ್ತದೆ. ಮೆಚ್ಯುರಿಟಿ ವೇಳೆಗೆ ₹14,49,948 ರೂಪಾಯಿಗಳನ್ನು ರಿಟರ್ನ್ಸ್ ಪಡೆಯಬಹುದು.
How much interest do you get for 5 to 10 lakh fixed deposit in post office