15 ರಿಂದ 20 ವರ್ಷಕ್ಕೆ ಅಂತ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?

Story Highlights

Home Loan : ಬ್ಯಾಂಕ್ ಗಳಲ್ಲಿ (Banks) ನಿಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ಹೋಮ್ ಲೋನ್ (Home Loan) ಸಿಗುತ್ತದೆ. ಆದರೆ ಹೋಮ್ ಲೋನ್ ಮೇಲೆ ಅಷ್ಟೇ ಬಡ್ಡಿ ಕೂಡ ಇರುತ್ತದೆ. ಇದು ಜನರಿಗೆ ಹೊರೆ ಆಗುವುದು ಕೂಡ ಹೌದು.

Home Loan : ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಮುಖ್ಯವಾದ ಗುರಿ, ಆದರೆ ಹಣಕಾಸಿನ ವಿಷಯದಲ್ಲಿ ಯಾವಾಗಲೂ ಸಬಲವಾಗಿ ಇರುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕೆ ಬಹಳಷ್ಟು ಜನರು ಹೋಮ್ ಲೋನ್ ಮೊರೆ ಹೋಗುತ್ತಾರೆ.

ಬ್ಯಾಂಕ್ ಗಳಲ್ಲಿ (Banks) ನಿಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ಹೋಮ್ ಲೋನ್ (Home Loan) ಸಿಗುತ್ತದೆ. ಆದರೆ ಹೋಮ್ ಲೋನ್ ಮೇಲೆ ಅಷ್ಟೇ ಬಡ್ಡಿ ಕೂಡ ಇರುತ್ತದೆ. ಇದು ಜನರಿಗೆ ಹೊರೆ ಆಗುವುದು ಕೂಡ ಹೌದು.

ದೊಡ್ಡ ದೊಡ್ಡ ಬ್ಯಾಂಕ್ ಗಳಿಂದ ಹಿಡಿದು ಸಣ್ಣ ಬ್ಯಾಂಕ್ ಗಳ ವರೆಗು ಎಲ್ಲಾ ಕಡೆ ಹೋಮ್ ಲೋನ್ ಸಿಗುತ್ತದೆ. ಹೋಮ್ ಲೋನ್ ಗಳನ್ನು 10 ವರ್ಷ, 15 ವರ್ಷ, 20 ವರ್ಷ ಹೀಗೆ ವಿವಿಧ ಅವಧಿಗಳಲ್ಲಿ ತೀರಿಸಬಹುದು.

ನೀವು ಎಷ್ಟು ವರ್ಷದ ಅವಧಿಗೆ ಹೋಮ್ ಲೋನ್ ಪಡೆದರೆ ಎಷ್ಟು ಇಎಂಐ ಬೀಳಬಹುದು? ಇದಕ್ಕೊಂದು ಉದಾಹರಣೆ ಕೊಡುವುದಾದರೆ, 30 ಲಕ್ಷ ರೂಪಾಯಿ ಹೋಮ್ ಲೋನ್ ಪಡೆಯುತ್ತೀರಿ ಎಂದರೆ, 10 ವರ್ಷಕ್ಕೆ, 15 ವರ್ಷಕ್ಕೆ ಹಾಗೂ 20 ವರ್ಷಕ್ಕೆ ನೀವು ಎಷ್ಟು ಇಎಂಐ (Loan EMI) ಕಟ್ಟಬೇಕಾಗಿ ಬರಬಹುದು?

1 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಮೇಲೆ ಪೆಟ್ರೋಲ್ ಬಂಕ್ ಓನರ್‌ಗಳಿಗೆ ಸಿಗೋ ಕಮಿಷನ್ ಎಷ್ಟು ಗೊತ್ತಾ?

15 ವರ್ಷದ ಹೋಮ್ ಲೋನ್:

ಒಂದು ವೇಳೆ ನೀವು 30 ಲಕ್ಷ ರೂಪಾಯಿಗಳ ಸಾಲವನ್ನು 15 ವರ್ಷಗಳ ಅವಧಿಗೆ ಪಡೆಯುತ್ತೀರಿ ಎಂದರೆ, ಈ ಲೋನ್ ತೀರಿಸಲು ನೀವು ಪ್ರತಿ ತಿಂಗಳು ಕೂಡ ₹31,417 ರೂಪಾಯಿಗಳ ಇಎಂಐ ಕಟ್ಟಬೇಕಾಗುತ್ತದೆ. 15 ವರ್ಷಗಳ ಅವಧಿಗೆ ಒಟ್ಟಾರೆಯಾಗಿ ₹56,15,117 ರೂಪಾಯಿ ಇಎಂಐ ಪಾವತಿ ಮಾಡುತ್ತೀರಿ.

20 ವರ್ಷಗಳ ಹೋಮ್ ಲೋನ್:

ಅದೇ 30 ಲಕ್ಷದ ಹೋಮ್ ಲೋನ್ ಅನ್ನು 20 ವರ್ಷಗಳ ಅವಧಿಗೆ ಪಡೆಯುತ್ತೀರಿ ಎಂದರೆ, ಇದರ ಮೇಲೆ 9.55% ಬಡ್ಡಿದರ ಬೀಳುತ್ತದೆ ಎಂದುಕೊಂಡರೆ, ಪ್ರತಿ ತಿಂಗಳು ₹28,062 ರೂಪಾಯಿಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ.

20 ವರ್ಷಕ್ಕೆ ₹37,34,871 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಾವತಿ ಮಾಡುತ್ತೀರಿ. ಎಲ್ಲಾ ಸೇರಿಸಿ ಒಟ್ಟಾರೆಯಾಗಿ ₹67,34,871 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.

ದೇಶದ ಯಾವುದೇ ಊರಿನಲ್ಲಿ ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ಸೂಚನೆ! ಬ್ಯಾಂಕ್ ಅಪ್ಡೇಟ್

25 ವರ್ಷಗಳ ಹೋಮ್ ಲೋನ್:

30 ಲಕ್ಷ ರೂಪಾಯಿಗಳನ್ನು 25 ವರ್ಷಗಳ ಅವಧಿಗೆ ಹೋಮ್ ಲೋನ್ ಪಡೆದರೆ, ಆ ಹಣದ ಮೇಲೆ 9.55% ಬಡ್ಡಿದರ ನಿಗದಿಯಾದರೆ, ಪ್ರತಿ ತಿಂಗಳು ನೀವು ₹26,315 ರೂಪಾಯಿ ಇಎಂಐ ಪಾವತಿ ಮಾಡಬೇಕು. 25 ವರ್ಷಕ್ಕೆ ₹78,94,574 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

30 ವರ್ಷಗಳ ಹೋಮ್ ಲೋನ್;

30 ಲಕ್ಷ ರೂಪಾಯಿಗಳ ಹೋಮ್ ಲೋನ್ ಅನ್ನು 30 ವರ್ಷಗಳ ಅವಧಿಗೆ ಪಡೆದರೆ, 9.55% ಬಡ್ಡಿದರದಲ್ಲಿ ಹೋಮ್ ಲೋನ್ ಸಿಕ್ಕಿದೆ ಎಂದು ಲೆಕ್ಕ ಹಾಕಿದರೆ, ಪ್ರತಿ ತಿಂಗಳು ನೀವು ₹25,335 ರೂಪಾಯಿಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ.. 30 ವರ್ಷಕ್ಕೆ ಒಟ್ಟು ₹91,20,651 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

How much monthly EMI should I pay for a 30 lakh home loan for 15 to 20 years

Related Stories