ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
Gold : ಬಂಗಾರದ ಆಭರಣಗಳು (Gold Jewellery) ನಮ್ಮ ದೇಶದ ಮಹಿಳೆಯರಿಗೆ ಕೇವಲ ಒಡವೆ ಮಾತ್ರವಲ್ಲ, ಅದರ ಮೇಲೆ ಅವರಿಗೆ ಸೆಂಟಿಮೆಂಟ್ ಇರುತ್ತದೆ. ಚಿನ್ನಕ್ಕೆ ನಮ್ಮಲ್ಲಿ ಬಹಳ ಮಹತ್ವವಿದೆ. ಹಲವು ಶುಭ ಕಾರ್ಯಗಳು ನಡೆಯುವುದಕ್ಕೆ ಚಿನ್ನ ಇರಬೇಕು, ಶಾಸ್ತ್ರಗಳಲ್ಲಿ ಕೂಡ ಚಿನ್ನ ಖರೀದಿಯನ್ನು ಬಹಳ ಶುಭ ಎಂದು ಪರಿಗಣಿಸುತ್ತಾರೆ.
ಹಾಗಾಗಿ ಹಬ್ಬ ಹರಿದಿನಗಳು, ಮದುವೆ ಸಮಾರಂಭ ಇಂಥ ಸಮಯದಲ್ಲಿ ಚಿನ್ನ ಖರೀದಿ (Buy Gold) ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲಿ ಈಗ ಚಿನ್ನದ ಬೆಲೆ ಗಗನಕ್ಕೆ ಏರುತ್ತಾ ಹೋಗುತ್ತಿದೆ ಎಂದು ಹೇಳಬಹುದು..
ಹಾಗಾಗಿ ಜನರು ಚಿನ್ನ ಖರೀದಿ ಮಾಡುವುದಕ್ಕೆ ಹಿಂದೂ ಮುಂದು ನೋಡುತ್ತಾರೆ. ಆದರೆ ಹೊರದೇಶಗಳಲ್ಲಿ ಅದರಲ್ಲೂ ದುಬೈ ನಲ್ಲಿ ಚಿನ್ನದ ಬೆಲೆ ಭಾರತಕ್ಕಿಂತ ಕಡಿಮೆ. ಹಾಗಾಗಿ ಬಹಳಷ್ಟು ಜನರು ದುಬೈನಲ್ಲಿ ಚಿನ್ನ ಖರೀದಿ ಮಾಡುತ್ತಾರೆ.
ಆದರೆ ಅಲ್ಲಿಂದ ಭಾರತಕ್ಕೆ ಹೆಚ್ಚು ಚಿನ್ನ ತರಬೇಕು ಎಂದರೆ, ಅದಕ್ಕಾಗಿ ಟ್ಯಾಕ್ಸ್ ಪಾವತಿ ಮಾಡಬೇಕು. ಆದರೆ ಟ್ಯಾಕ್ಸ್ ಕಟ್ಟದೆಯೇ ಚಿನ್ನ ತರುವುದಕ್ಕೆ ಕೂಡ ಒಂದು ಲಿಮಿಟ್ ಇದೆ. ಹಾಗಿದ್ದಲ್ಲಿ ಭಾರತಕ್ಕೆ ದುಬೈ ಇಂದ ಟ್ಯಾಕ್ಸ್ ಕಟ್ಟದೇ ಎಷ್ಟು ಚಿನ್ನ ತರಬಹುದು? ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..
ಪೋಸ್ಟ್ ಆಫೀಸ್ ನಲ್ಲಿ 5 ವರ್ಷಕ್ಕೆ ಅಂತ 10,000 ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?
ಹೊಸ ರೂಲ್ಸ್ ಹೀಗಿದೆ:
ಬೇರೆ ದೇಶದಿಂದ ಒಟ್ಟು 20 ಗ್ರಾಮ್ ಚಿನ್ನ ಎಂದರೆ 50 ಸಾವಿರ ಮೌಲ್ಯದಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು. ಹಾಗೆಯೇ 40 ಗ್ರಾಮ್ ಚಿನ್ನ, ಅದರ ಮೌಲ್ಯ 1 ಲಕ್ಷ ಆಗುವಷ್ಟು ಚಿನ್ನವನ್ನು ಯಾವುದೇ ಟ್ಯಾಕ್ಸ್ ಪಾವತಿ ಮಾಡದೆಯೇ ಭಾರತಕ್ಕೆ ತರಬಹುದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.
ಆದರೆ ಇದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನವನ್ನು ಹೊರದೇಶದಿಂದ ತರಬೇಕು ಎಂದರೆ, ಅದಕ್ಕಾಗಿ ನೀವು ಹೆಚ್ಚುವರಿಯಾಗಿ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಹೀಗೆ ಶುಲ್ಕ ಪಾವತಿ ಮಾಡುವುದು ಚಿನ್ನದ ಒಡವೆಗಳು (Gold Jewellery), ಚಿನ್ನದ ಬಿಸ್ಕೆಟ್, ಚಿನ್ನದ ಎಲ್ಲಾ ವಸ್ತುಗಳ ಮೇಲೆ ಆಗಿರುತ್ತದೆ.
ಈ ರೀತಿಯಾಗಿ ಭಾರತಕ್ಕೆ ದುಬೈ ಇಂದ ಚಿನ್ನ ತರುವಾಗ ಯಾವೆಲ್ಲಾ ನಿಯಮಗಳನ್ನು ಗಮನಿಸಬೇಕಾಗುತ್ತದೆ ಎಂದು ತಿಳಿದುಕೊಳ್ಳೋಣ..
ಬೇರೆ ಬೇರೆ ಕಲರ್ ಇರೋ ನಂದಿನಿ ಹಾಲಿನ ಪ್ಯಾಕ್ ಏನು ಸೂಚಿಸುತ್ತೆ ಗೊತ್ತಾ? ಎಷ್ಟೋ ಜನಕ್ಕೆ ಗೊತ್ತೇ ಇಲ್ಲ
*1 ಕೆಜಿಗಿಂತ ಕಡಿಮೆ ಚಿನ್ನ ಇದ್ದರೆ, ಅದಕ್ಕೆ 10% ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
*20 ರಿಂದ 100 ಗ್ರಾಮ್ಸ್ ಒಳಗೆ ಚಿನ್ನ ಇದ್ದರೆ, 3% ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ.
*ನೀವು ತರುತ್ತಿರುವ ಚಿನ್ನ 20 ಗ್ರಾಮ್ಸ್ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಆ ಚಿನ್ನದ ಮೇಲೆ ಯಾವುದೇ ಟ್ಯಾಕ್ಸ್ ಹೇರುವುದಿಲ್ಲ.
ಹೀಗೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಚಿನ್ನದ ವಸ್ತುಗಳನ್ನು ತರುವಾಗ, ಎಲ್ಲಿ ಖರೀದಿ ಮಾಡಿದ್ದು, ಯಾವ ದಿನ ಖರೀದಿ ಮಾಡಿದ್ದು, ಎನ್ನುವುದರ ಸಂಪೂರ್ಣ ಮಾಹಿತಿ ನಿಮ್ಮ ಬಳಿ ಇರಬೇಕು.
ಹಾಗೆಯೇ ಟ್ರಾವೆಲ್ ಮಾಡುವಾಗ ಕಳ್ಳರ ಸಮಸ್ಯೆ ಕೂಡ ಇರುತ್ತದೆ, ಹಾಗಾಗಿ ಇದೆಲ್ಲದಕ್ಕೂ ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಹುಷಾರಾಗಿ ಬೇರೆ ದೇಶದಿಂದ ಭಾರತಕ್ಕೆ ಚಿನ್ನವನ್ನು ತೆಗೆದುಕೊಂಡು ಬರಬೇಕು.
The price of gold is low, but how much gold can be brought to India from abroad or Dubai