Business News

ಬೇರೆ ಬೇರೆ ಕಲರ್ ಇರೋ ನಂದಿನಿ ಹಾಲಿನ ಪ್ಯಾಕ್ ಏನು ಸೂಚಿಸುತ್ತೆ ಗೊತ್ತಾ? ಎಷ್ಟೋ ಜನಕ್ಕೆ ಗೊತ್ತೇ ಇಲ್ಲ

ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಕೂಡ ಬೆಳಗ್ಗೆ ಎದ್ದ ತಕ್ಷಣ ಹಾಲಿನಿಂದ ಮಾಡಿದ ಕಾಫಿ, ಟೀ ಕುಡಿಯುತ್ತಾರೆ. ಇದು ಎಲ್ಲರ ಮನೆಯಲ್ಲಿ ನಡೆಯುವ ದಿನನಿತ್ಯದ ಕ್ರಿಯೆಗಳಲ್ಲಿ ಪ್ರಮುಖವಾದದ್ದು, ಹಾಲಿನ ವಿಷಯದಲ್ಲಿ ನಮ್ಮ ರಾಜ್ಯದಲ್ಲಿ ಎಲ್ಲರೂ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿರುವುದು ನಂದಿನಿ ಬ್ರಾಂಡ್ ಹಾಲಿನ (Nandini milk) ಬಗ್ಗೆ ಎಂದರೆ ತಪ್ಪಲ್ಲ.

ಬಹುತೇಕ ಎಲ್ಲಾ ಜನರು ಕೂಡ ನಂದಿನಿ ಹಾಲನ್ನೇ ಖರೀದಿಸಿ, ಕಾಫಿ, ಟೀ, ಹಾಲು ಹಾಗು ಇನ್ನಿತರ ಖಾದ್ಯಗಳಿಗೆ ಬಳಕೆ ಮಾಡುತ್ತಾರೆ..

Do u know what different colors of Nandini milk Cover pack indicate

ನಂದಿನಿ ಸಂಸ್ಥೆಯ ಇನ್ನು ಹಲವು ಉತ್ಪನ್ನಗಳು ಕೂಡ ಇದೆ. ಹಾಗೆಯೇ ನಾವು ನಂದಿನಿ ಹಾಲನ್ನು ಗಮನಿಸಿದರೆ, ಹಾಲಿನಲ್ಲಿ ಹಲವು ವಿಧಗಳಿವೆ, ನೀಲಿ ಬಣ್ಣದ ಪ್ಯಾಕೆಟ್, ಕೇಸರಿ ಬಣ್ಣದ ಪ್ಯಾಕೆಟ್ ಇದೆಲ್ಲವನ್ನು ನಾವು ನೋಡಬಹುದು.

ಈ ಬೇರೆ ಬೇರೆ ಬಣ್ಣಗಳು, ಏನನ್ನು ಬಿಂಬಿಸುತ್ತದೆ? ಇದರ ಅರ್ಥ ಏನು ಗೊತ್ತಾ? ಇಂದು ನಂದಿನಿ ಹಾಲಿನ ವಿವಿಧ ಪ್ಯಾಕೆಟ್ ಹಿಂದಿನ ಅರ್ಥವೇನು ಎನ್ನುವುದನ್ನ ತಿಳಿದುಕೊಳ್ಳೋಣ..

ನಿಮಗಿದು ಗೊತ್ತಾ? ಎಲ್ಲಾ ಸ್ಕೂಲ್‌ಬಸ್‌ಗಳು ಹಳದಿ ಬಣ್ಣ ಇರೋದು ಏಕೆ? ಶೇಕಡಾ 99% ಜನಕ್ಕೆ ಗೊತ್ತಿಲ್ಲ

*ಅಕಸ್ಮಾತ್ ನಿಮಗೆ ಹಾಲನ್ನು ಮನೆಗೆ ಬಂದು, ಅದನ್ನು ಕುದಿಸಿ ನಂತರ ಕುಡಿಯುವಷ್ಟು ಸಮಯ ಇಲ್ಲಾ ಎಂದರೆ ಆಗ ನೀವು ನಂದಿನಿ ಗುಡ್ ಲೈಫ್ ಹಾಲನ್ನು ಖರೀದಿ ಮಾಡಬಹುದು. ಇದು 137℃ ನಲ್ಲಿ ಕುದಿಸಿ, ರೆಡಿ ಟು ಡ್ರಿಂಕ್ ಗಾಗಿ ತಯಾರಾಗಿರುವ ಹಾಲು.

*ಇನ್ನು ನಿಮ್ಮ ಮನೆಯಲ್ಲಿರುವ ಮುದ್ದಾದ ಮಕ್ಕಳು, ಹಿರಿಯರು ಹಾಗೂ ಎಲ್ಲಾ ಸದಸ್ಯರಿಗೆ ಕಾಫಿ, ಟೀ ಕೊಡುವುದಕ್ಕೆ ಹಸಿರು ಪ್ಯಾಕೆಟ್ ನಲ್ಲಿ ಬರುವ Nandini Homogenized ಹಾಲನ್ನು ಖರೀದಿ ಮಾಡಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು.

*ಇನ್ನು ಪಾಯಸದಂಥ ಸಿಹಿ ಖಾದ್ಯಗಳು, ಗಟ್ಟಿಯಾದ ಕಾಫಿ, ಇದನ್ನೆಲ್ಲಾ ಮಾಡುವುದಕ್ಕೆ ನೀವು ನೇರಳೆ ಬಣ್ಣದ ಪ್ಯಾಕೆಟ್ ನಲ್ಲಿ ಸಿಗುವ ನಂದಿನಿ ಸಮೃದ್ಧಿ ಹಾಲನ್ನು ಖರೀದಿ ಮಾಡಬಹುದು..

*ಸಿಹಿ ಖಾದ್ಯಗಳಿಗೆ ವಿಶೇಷವಾಗಿ ನಂದಿನಿ ಸ್ಪೆಷಲ್ ಟೋನ್ಡ್ ಹಾಲಿನ ಪ್ಯಾಕೆಟ್ ಅನ್ನು ಖರೀದಿ ಮಾಡಬಹುದು.

*ಮನೆಯಲ್ಲಿರುವ ವೃದ್ಧರು ಹಾಗೂ ಡಯೆಟ್ ಮಾಡುವವರಿಗೆ ನಂದಿನಿ ಸ್ಲಿಮ್ಡ್ ಮಿಲ್ಕ್ ಖರೀದಿ ಮಾಡಬಹುದು, ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವ ಕಾರಣ ಅವರಿಗೆ ಒಳ್ಳೆಯದು.

ನಿಮ್ಮ ₹50 ಸಾವಿರಕ್ಕೆ ಸಿಗಲಿದೆ ₹1 ಲಕ್ಷ, ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಸ್ಕೀಮ್ ಬಿಡುಗಡೆ

*ಹಳದಿ ಬಣ್ಣದ ಪ್ಯಾಕೆಟ್ ನಲ್ಲಿ ಸಿಗುವ ನಂದಿನಿ ಡಬಲ್ ಟೋನ್ಡ್ ಮಿಲ್ಕ್ ಅನ್ನು ಕೂಡ ವೃದ್ಧರಿಗೆ ಹಾಗೆ ಡಯೆಟ್ ಮಾಡುವವರಿಗೆ ಕೊಡಬಹುದು. ಇದರಲ್ಲಿ ಕೂಡ ಬಹಳ ಕಡಿಮೆ ಮಟ್ಟದಲ್ಲಿ ಕೊಬ್ಬಿನ ಅಂಶ ಇರುತ್ತದೆ.

*ಹಾಗೆಯೇ ಜಿಮ್ ಗೆ ಹೋಗುವವರು, ವರ್ಕ್ ಔಟ್ ಮಾಡುವವರು ಹಾಗೂ ಇನ್ನಿತರರು ನಂದಿನಿ ಸ್ಮಾರ್ಟ್ homogenized ಮಿಲ್ಕ್ ಅನ್ನು ಖರೀದಿ ಮಾಡಬಹುದು. ಅವರ ಆರೋಗ್ಯಕ್ಕೆ ಇದು ಒಳ್ಳೆಯದು.

*ಜಾಸ್ತಿ ಪ್ರೊಟೀನ್ ಹಾಗೂ ಕೊಬ್ಬಿನ ಅಂಶ ಬೇಕು ಎನ್ನುವವರು ನಂದಿನಿ ಎಮ್ಮೆಯ ಹಾಲನ್ನು ಖರೀದಿ ಮಾಡಬಹುದು.
ಅಂಗಡಿಗೆ ಹಾಲು ಖರೀದಿ ಮಾಡಲು ಹೋದಾಗ, ಈ ಅಂಶಗಳನ್ನು ಹೇಳಿದರೆ, ನಿಮಗೆ ಯಾವ ಹಾಲು ಸೂಕ್ತ ಎಂದು ಅವರೇ ಕೊಡುತ್ತಾರೆ.

Do you know what different colors of Nandini milk Cover pack indicate

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories