Business News

ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?

ನಮಗೆಲ್ಲಾ ಗೊತ್ತಿರುವ ಹಾಗೆ ಈಗ ಹಸುವಿನ ಹಾಲಿಗೆ ಮತ್ತು ಹಾಲಿನ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಪೌಷ್ಟಿಕಾಂಶಕ್ಕಾಗಿ ಹೆಚ್ಚು ಜನರು ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಉಪಯೋಗಿಸುತ್ತಾರೆ. ಈ ಕಾರಣಗಳಿಂದ ಪ್ರಸ್ತುತ ಹಸುವಿನ ಹಾಲಿಗೆ ಬೇಡಿಕೆ ಇರುವುದರಿಂದ ಪಶು ಸಂಗೋಪನೆ ಒಳ್ಳೆಯ ಬ್ಯುಸಿನೆಸ್ ಆಗಿದೆ. ಇದರಿಂದ ನೀವು ಒಳ್ಳೆಯ ಲಾಭ ಗಳಿಸಬಹುದು. ಆದರೆ ಯಾವ ತಳಿಯ ಹಸುವನ್ನು ಸಾಕುತ್ತೀರಿ ಎನ್ನುವುದು ಮುಖ್ಯ ಆಗುತ್ತದೆ.

ಹೌದು, ಪಶುಸಂಗೋಪನೆ ಈಗ ಲಾಭದ ಆದಾಯ ನೀಡುವ ಬ್ಯುಸಿನೆಸ್ ಗಳಲ್ಲಿ (Own Business) ಒಂದು. ನಮ್ಮಲ್ಲಿ ದೇಶೀಯ ಹಸುಗಳು, ವಿದೇಶಿ ಹಸುಗಳು ಎಂದು ವಿವಿಧ ತಳಿಗಳಿವೆ. ದೇಶಿ ಹಸುಗಳಲ್ಲಿ ಹಾಲು (Milk) ಸಿಗುವುದು ಕಡಿಮೆ, ನಮ್ಮಲ್ಲಿ ಜೆರ್ಸಿ ತಳಿಯ ಹಸುಗಳಿಗೆ ಬೇಡಿಕೆ ಜಾಸ್ತಿ.

If there are 8 cows of this breed, it is enough to get 150 liters of milk per day

ಇದಕ್ಕೆ ಕಾರಣ ಈ ತಳಿಯ ಹಸುವಿನ ಹಾಲಿನಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ. ಇನ್ನೊಂದು Holstein Friesian ತಳಿಯ ಹಸು, ಬೇರೆ ಎಲ್ಲಾ ತಳಿಯ ಹಸುಗಿಂತ ಈ ಹಸು ಹೆಚ್ಚು ಹಾಲು ಕೊಡುತ್ತದೆ, ಕಡಿಮೆ ಎಂದರೂ 40 ಲೀಟರ್ ಹಾಲು ಇದರಿಂದ ಸಿಗುತ್ತದೆ.

15 ರಿಂದ 20 ವರ್ಷಕ್ಕೆ ಅಂತ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?

Holstein Friesian ತಳಿಯ ಬಗ್ಗೆ ಮಾಹಿತಿ:

ಅತಿಹೆಚ್ಚು ಲಾಭ ತಂದುಕೊಡುವ ಹಸುವಿನ ತಳಿ ಆಗಿದೆ Holstein Friesian. ಇದು Holstein ಎನ್ನುವ ಪ್ರದೇಶಕ್ಕೆ ಸೇರಿದ ಹಸುವಿನ ತಳಿ, ಆದರೆ ಪ್ರಪಂಚದ ಹಲವೆಡೆ ಇದಕ್ಕೆ ಭಾರಿ ಬೇಡಿಕೆ ಇದೆ. ಈ ಹಸು ಬಿಳಿ ಬಣ್ಣದ ಹಸು ಆಗಿದ್ದು, ಇದರ ಮೇಲೆ ಕಪ್ಪು ಬಣ್ಣದ ಮಿಶ್ರಣ ಇರುತ್ತದೆ.

ವಿಶ್ವದ ಹಲವೆಡೆ ಈ ತಳಿಯ ಹಸುಗಳನ್ನೇ ಪಶು ಸಂಗೋಪಣೆಗೆ ಬಳಕೆ ಮಾಡುತ್ತಾರೆ. Holstein Friesian ಗೆ ಹೆಚ್ಚು ಬೇಡಿಕೆ ಇರುವುದು ಸೌತ್ ಅಮೆರಿಕಾ ಹಾಗೂ ನಾರ್ತ್ ಅಮೆರಿಕಾದಲ್ಲಿ, ಅಲ್ಲಿಂದ ಬೇರೆ ಪ್ರದೇಶಕ್ಕೆ ಈ ಹಸುಗಳನ್ನು ರಫ್ತು ಮಾಡಲಾಗುತ್ತಿದೆ.

ಈ ಹಸುಗೆ ಕೊಡುವ ಆಹಾರ ಏನು?

ಈ ಹಸುಗಳು ಹೆಚ್ಚಿಗೆ ಹಾಲು ನೀಡುವುದರಿಂದ ಇವುಗಳಿಗೆ ಒಳ್ಳೆಯ ಆಹಾರ ಕೊಡಬೇಕು. ಈ ಹಸುಗೆ ಪ್ರೊಟೀನ್ ಹಾಗೂ ಫೈಬರ್ ಇರುವ ಆಹಾರ ಕೊಡುವುದು ಒಳ್ಳೆಯದು. ಈ ಹಸು ದಪ್ಪ ಇದ್ದಷ್ಟು ಹೆಚ್ಚಿನ ಹಾಲು ಕೊಡುತ್ತದೆ.

ಈ ಬ್ಯುಸಿನೆಸ್ ನಲ್ಲಿ ಲಾಭ ಮಾಡಬೇಕು ಎಂದರೆ 5 ರಿಂದ 6 ಲೀಟರ್ ಹಾಲು ಕೊಡುವ ಹಸುಗಳನ್ನು ಸಾಕಿದರೆ ಸಾಕಾಗುವುದಿಲ್ಲ. ಆಗ ನೀವು ಅವುಗಳ ಆಹಾರಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ, ಹಾಗಾಗಿ ದಿನಕ್ಕೆ 10 ರಿಂದ 12 ಲೀಟರ್ ಹಾಲು ಕೊಡುವ ಹಸುವಿನ ತಳಿಗಳನ್ನು ಸಾಕುವುದು ಒಳ್ಳೆಯದು. ಈ ಕಾರಣಕ್ಕೆ Holstein Friesian ಹಸು ಒಳ್ಳೆಯ ಆಯ್ಕೆ.

1 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಮೇಲೆ ಪೆಟ್ರೋಲ್ ಬಂಕ್ ಓನರ್‌ಗಳಿಗೆ ಸಿಗೋ ಕಮಿಷನ್ ಎಷ್ಟು ಗೊತ್ತಾ?

ಈ ಥರ ಜಾಸ್ತಿ ಹಾಲು ಕೊಡುವ ಹಸುಗಳಲ್ಲಿ ಕೆಚ್ಚಲು ಬಾವು ಸಮಸ್ಯೆಯನ್ನು ಕಾಣಬಹುದು. ಈ ಸಮಸ್ಯೆ ಬರುವುದು ಈಗ ಮಷಿನ್ ಬಳಸಿ ಹಾಲು ಕರೆಯುವ ಕಾರಣದಿಂದ, ಹೆಚ್ಚಿನ ಹಸುಗಳಿಗೆ ಕರುವಿನ ಜೊತೆಗೆ ಬಾಂಧವ್ಯ ಇಲ್ಲದೇ, ಕರುವಿನ ಸ್ಪರ್ಶ ಸಿಗದೇ ಈ ರೀತಿ ಆಗುತ್ತದೆ.

ಹಾಗಾಗಿ ಪೂರ್ತಿ ಹಾಲನ್ನು ಪಡೆಯದೇ ಸ್ವಲ್ಪ ಹಾಲನ್ನು ಕರುವಿಗೂ ಬಿಡಬೇಕು, ಇಲ್ಲದಿದ್ದರೆ ತಾಯಿ ಹಸು ಮತ್ತು ಕರು ಇಬ್ಬರ ಆರೋಗ್ಯಕ್ಕೂ ಸಮಸ್ಯೆ ಶುರುವಾಗುತ್ತದೆ. ಆಗಾಗ ಈ ಸಮಸ್ಯೆ ಆಗದ ಹಾಗೆ ಔಷಧೀಯ ಗುಣಗಳು ಇರುವ ಸಸ್ಯಗಳನ್ನು ಸಹ ನೀಡಬೇಕು. ಇಲ್ಲದೇ ಹೋದರೆ ಸರಿಯಾದ ಬೆಳವಣಿಗೆ ಆಗುವುದಿಲ್ಲ.

If there are 8 cows of this breed, it is enough to get 150 liters of milk per day

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories