ಸ್ಟೇಟ್ ಬ್ಯಾಂಕಿನಲ್ಲಿ 15 ಲಕ್ಷ ಕಾರ್ ಲೋನ್ ತಗೊಂಡ್ರೆ ಪ್ರತಿ ತಿಂಗಳು ಎಷ್ಟು ಇಎಂಐ ಕಟ್ಟಬೇಕಾಗುತ್ತೆ ಗೊತ್ತಾ?
Car Loan : SBI ನಲ್ಲಿ ನಿಮಗೆ ಉತ್ತಮವಾದ ಆಯ್ಕೆಗಳನ್ನು ನೀಡಲಾಗುತ್ತಿದೆ. ಇಲ್ಲಿ ನಿಮಗೆ 15 ಲಕ್ಷದವರೆಗಿನ ಕಾರ್ ಲೋನ್ (Car Loan) ಅನ್ನು ಕಡಿಮೆ ಬಡ್ಡಿಯಲ್ಲಿ ನೀಡಲಾಗುತ್ತದೆ.
Car Loan : ಪ್ರತಿಯೊಬ್ಬರಿಗೂ ಸಹ ಸ್ವಂತ ಮನೆ ಮಾಡಿಕೊಳ್ಳಬೇಕು, ಹೊಸ ಕಾರ್ ಖರೀದಿ (Buy New Car) ಮಾಡಬೇಕು ಎಂದು ಆಸೆ ಇರುತ್ತದೆ. ಅದಕ್ಕಾಗಿ ಬಹಳ ಶ್ರಮ ವಹಿಸಿ ಕೆಲಸ ಮಾಡುತ್ತಾರೆ, ಆದರೆ ಕಾರ್ ಕೊಂಡುಕೊಳ್ಳಬೇಕು ಎಂದು ಆಸೆ ಇದ್ದರೂ ಕೂಡ, ಪೂರ್ತಿ ಹಣ ಪಾವತಿಸಿ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ.
ಅಂಥ ಸಮಯದಲ್ಲಿ ಕಾರ್ ಲೋನ್ (Car Loan) ಮೊರೆ ಹೋಗಿ, ಖರೀದಿ ಮಾಡುತ್ತಾರೆ. ತಮ್ಮಿಂದ ಸಾಧ್ಯ ಆದಷ್ಟು ಮೊತ್ತವನ್ನು ಡೌನ್ ಪೇಮೆಂಟ್ ಮಾಡಿ, ಇನ್ನುಳಿದ ಹಣವನ್ನು ಬ್ಯಾಂಕ್ ಇಂದ ಸಾಲ (Bank Loan) ಪಡೆಯುತ್ತಾರೆ.
ಬ್ಯಾಂಕ್ ಗಳಲ್ಲಿ ಕೂಡ ವೆಹಿಕಲ್ ಗಳ ಮೇಲೆ ಸಾಲ (Vehicle Loan) ಸಿಗುತ್ತದೆ. ಈ ರೀತಿ ಸಾಲ ಪಡೆಯುವ ಮೊದಲು, ಬ್ಯಾಂಕ್ ನಿಯಮಗಳು, ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎನ್ನುವ ಎಲ್ಲಾ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳಬೇಕು. ಆಗ ನಿಮಗೆ ಸಾಲ ಮರುಪಾವತಿ (Loan Re Payment) ಹೊರೆ ಅನ್ನಿಸುವುದಿಲ್ಲ,.
ಪ್ರಸ್ತುತ ಕಾರ್ ಲೋನ್ ಪಡೆಯುವವರಿಗೆ SBI ನಲ್ಲಿ ಉತ್ತಮವಾದ ಹೊಸ ರಿಯಾಯಿತಿಯ ಪ್ಲಾನ್ ಗಳನ್ನು ನೀಡಲಾಗಿದೆ. ಹಾಗಿದ್ದಲ್ಲಿ ನೀವು SBI ನಲ್ಲಿ 15 ಲಕ್ಷ ಕಾರ್ ಲೋನ್ ಪಡೆದರೆ, ಅದಕ್ಕಾಗಿ ನೀವು ಎಷ್ಟು ಇಎಂಐ ಕಟ್ಟಬಹುದು ಎಂದು ತಿಳಿಯೋಣ..
ಕೇವಲ ₹10 ಸಾವಿರ ಡೌನ್ ಪೇಮೆಂಟ್ ಮಾಡಿ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ, ಭರ್ಜರಿ ಆಫರ್!
SBI Car Loan:
ಒಂದು ವೇಳೆ ನೀವು ಕಾರ್ ಖರೀದಿ ಮಾಡುವುದಕ್ಕೆ ಲೋನ್ ಪಡೆಯಬೇಕು ಎಂದುಕೊಂಡಿದ್ದರೆ, SBI ನಲ್ಲಿ ನಿಮಗೆ ಉತ್ತಮವಾದ ಆಯ್ಕೆಗಳನ್ನು ನೀಡಲಾಗುತ್ತಿದೆ. ಇಲ್ಲಿ ನಿಮಗೆ 15 ಲಕ್ಷದವರೆಗಿನ ಕಾರ್ ಲೋನ್ (Car Loan) ಅನ್ನು ಕಡಿಮೆ ಬಡ್ಡಿಯಲ್ಲಿ ನೀಡಲಾಗುತ್ತದೆ.
ಕಾರ್ ಲೋನ್ ಬಡ್ಡಿ 8.85% ಇಂದ 9.80% ವರೆಗು ಕೊಡಲಾಗುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರ್ (Electric Car) ಖರೀದಿ ಮಾಡುವವರಿಗೆ ಹೊಸದಾಗಿ ಗ್ರೀನ್ ಕಾರ್ ಲೋನ್ ಎನ್ನುವ ಹೊಸದೊಂದು ಸ್ಕೀಮ್ ತರಲಾಗಿದೆ, ಇದರಲ್ಲಿ 8.75% ಇಂದ 9.45% ಬಡ್ಡಿ ಅವಧಿಯಲ್ಲಿ ಸಾಲ ನೀಡಲಾಗುತ್ತದೆ.
ಈ ರೀತಿ ಮಾಡಿದ್ರೆ ಕಡಿಮೆ ಬಡ್ಡಿಗೆ ಸಿಗಲಿದೆ ಕಾರ್ ಲೋನ್:
ಸಾಮಾನ್ಯವಾಗಿ SBI ಹಾಗೂ ಯಾವುದೇ ಬ್ಯಾಂಕ್ ನಲ್ಲಿ ಸಾಲ ಕೊಡುವುದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಆಧಾರದ ಮೇಲೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
ಅದರಲ್ಲೂ ನಿಮ್ಮ ಕ್ರೆಡಿಟ್ ಸ್ಕೋರ್ 750 ಪಾಯಿಂಟ್ಸ್ ಮೇಲಿದ್ದು, 800ರ ವರೆಗೂ ಇದ್ದರೆ ಬಹಳ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. SBI ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಗೋಲ್ಡ್ ಲೋನ್ ತಗೊಂಡು ಆ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಇನ್ಮುಂದೆ ಹೊಸ ರೂಲ್ಸ್
15 ಲಕ್ಷದ ಕಾರ್ ಕೊಂಡುಕೊಂಡರೆ, ಎಷ್ಟು EMI ಪಾವತಿ ಮಾಡಬೇಕಾಗುತ್ತದೆ?
ಒಂದು ವೇಳೆ ನಿಮ್ಮ ಸ್ಕೋರ್ ಉತ್ತಮವಾಗಿದ್ದು, ಹೊಸ ಕಾರ್ ಖರೀದಿಗಾಗಿ ನೀವು 15 ಲಕ್ಷ ರೂಪಾಯಿಯ ಲೋನ್ ಪಡೆದುಕೊಂಡರೆ, ಅದಕ್ಕಾಗಿ ನಿಮಗೆ 8.85% ಬಡ್ಡಿ ವಿಧಿಸಲಾಗಿದೆ ಎಂದು ಗಮನಿಸಿದರೆ, ಒಟ್ಟಾರೆಯಾಗಿ ನೀವು ₹3,61,707 ರೂಪಾಯಿಗಳ ಬಡ್ಡಿ ಪಾವತಿ ಮಾಡಬಹುದು. ಇಲ್ಲಿ ನೀವು 5 ವರ್ಷಗಳ ಅವಧಿಗೆ, ₹31,208 ರೂಪಾಯಿಗಳ ಇಎಂಐ ಅನ್ನು ಪ್ರತಿ ತಿಂಗಳು ಕೂಡ ಪಾವತಿ ಮಾಡಬೇಕಾಗುತ್ತದೆ.
how much EMI you have to pay if you get a 15 lakh car loan from State Bank of India