ಮೊದಲೆಲ್ಲಾ ಲಿಫ್ಟ್ (elevator) ಎಂದರೆ ದೊಡ್ಡ ದೊಡ್ಡ ಕಟ್ಟಡಗಳಲ್ಲಿ, ಹೋಟೆಲ್ ಗಳಲ್ಲಿ (Hotels), ಆಫೀಸ್ ಗಳಲ್ಲಿ (Office) ಮಾತ್ರ ಇರುತ್ತಿತ್ತು, ಆದರೆ ಈಗ ಹಾಗಿಲ್ಲ. ಲಿಫ್ಟ್ ಗಳನ್ನು ಮನೆಯಲ್ಲಿ ಸಹ ಅಳವಡಿಸಲಾಗುತ್ತಿದೆ. ಎರಡು ಅಥವಾ ಮೂರು ಫ್ಲೋರ್ ಇರುವ ಮನೆಗಳಲ್ಲಿ ಕೂಡ ಲಿಫ್ಟ್ ಕಾಣಸಿಗುತ್ತಿದೆ.
ಈ ರೀತಿ ಮನೆಗೆ ಲಿಫ್ಟ್ ಹಾಕಿಸಿಕೊಂಡರೆ, ವೃದ್ಧರಿಗೆ. ಗರ್ಭಿಣಿ ಮನೆಯವರಿಗೆ ಸಹಾಯ ಆಗುತ್ತದೆ. ಹಾಗೆಯೇ ನಿಮ್ಮ ಮನೆಗೆ ಐಷಾರಾಮಿ ಲುಕ್ ಕೂಡ ಕೊಡುತ್ತದೆ. ಹಾಗಿದ್ದಲ್ಲಿ ಒಂದು ಮನೆಗೆ ಲಿಫ್ಟ್ ಹಾಕಿಸುವುದಕ್ಕೆ ಎಷ್ಟು ಖರ್ಚಾಗುತ್ತದೆ? ಪೂರ್ತಿ ಮಾಹಿತಿ ತಿಳಿಯೋಣ..
2017ರಲ್ಲಿ ಗೋಲ್ಡ್ ರೇಟ್ ಎಷ್ಟಿತ್ತು ಗೊತ್ತಾ? ಕೇವಲ 6 ವರ್ಷಕ್ಕೆ ಇಷ್ಟೊಂದು ದುಬಾರಿ ಆಯ್ತಾ ಚಿನ್ನದ ಬೆಲೆ
ಮನೆಯಲ್ಲಿ ಲಿಫ್ಟ್ ಹಾಕಿಸುವ ವಿಧಾನ:
ನಾವು ಹೊಸದಾಗಿ ಮನೆ ಕಟ್ಟಿಸುವಾಗ, ಅದಕ್ಕಾಗಿ ಹೆಚ್ಚು ಹಣ ಖರ್ಚಾಗುವಾಗ ಸಾಲ ಮಾಡಿ ಆದರೂ ಕೂಡ ಮನೆ ಕಟ್ಟಿಸುತ್ತೇವೆ. ಒಂದು ವೇಳೆ ಮನೆ ಮೂರು ಫ್ಲೋರ್ ಇದ್ದರೆ, ಆಗ ಮೆಟ್ಟಿಲು ಹತ್ತಿ ಇಳಿಯುವುದು ಎಲ್ಲರಿಗೂ ಕೂಡ ಸುಲಭ ಆಗಿರುವುದಿಲ್ಲ.
ಆ ಥರ ಪರಿಸ್ಥಿತಿ ಬಂದಾಗ, ಮನೆಯಲ್ಲಿ ಲಿಫ್ಟ್ ಇರಬೇಕು ಅನ್ನಿಸುವುದು ಸಹಜ. ಮನೆ ಕಟ್ಟಿಸುವಾಗಲೇ ನೀವು ಲಿಫ್ಟ್ ಅಳವಡಿಸಬೇಕಾ ಎಂದು ಚಿಂತನೆ ಮಾಡುವುದು ಒಳ್ಳೆಯದು, ಮನೆ ಕಟ್ಟಿಸಿದ ನಂತರ ಲಿಫ್ಟ್ (Lift) ಅಳವಡಿಸುವುದು ಕಷ್ಟದ ಕೆಲಸ ಆಗಿರುತ್ತದೆ. ಹಾಗಾಗಿ ನೀವು ಮನೆ ಕಟ್ಟಿಸುವಾಗಲೇ ಈ ಬಗ್ಗೆ ಯೋಚಿಸುವುದು ಒಳ್ಳೆಯದು.
ಸಿಗಲಿದೆ ವಿವಿಧ ರೀತಿಯ ಲಿಫ್ಟ್:
ಮನೆಯಲ್ಲಿ ನೀವು ಅಳವಡಿಸುವ ಲಿಫ್ಟ್ ಹಾಗೂ ಆಫೀಸ್ ಗಳಲ್ಲಿ ಕಾಣುವ ಲಿಫ್ಟ್ ಗಳು ಬೇರೆ ಬೇರೆ ರೀತಿಯಲ್ಲೇ ಇರುತ್ತದೆ. ಆಫೀಸ್ ನ ಲಿಫ್ಟ್ ಗಳ ಗಾತ್ರ ಹಾಗೂ ಅದರ ಖರ್ಚು ದೊಡ್ಡದು. ಇನ್ನು ಮನೆಗೆ ಹಾಕಿಸುವ ಲಿಫ್ಟ್ ಗಳು ಬೇರೆ ರೀತಿಯಲ್ಲಿ, ಚಿಕ್ಕದಾಗಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ಸಿಗುತ್ತದೆ. ಹಾಗಾಗಿ ನೀವು ನಿಮ್ಮ ಬಜೆಟ್ ಗೆ ತಕ್ಕ ಹಾಗೆ, ನಿಮಗೆ ಸರಿ ಹೊಂದುವ ಹಾಗೆ ಲಿಫ್ಟ್ ಅಳವಡಿಸಿಕೊಳ್ಳಬಹುದು. ನಿಮ್ಮ ಮನೆ ಕೂಡ ಸುಂದರವಾಗಿ ಕಾಣುತ್ತದೆ.
ಈ ರೀತಿ ಕುರಿ ಸಾಕಾಣಿಕೆ ಮಾಡಿದ್ದೇ ಆದ್ರೆ ಲಕ್ಷ ಲಕ್ಷ ಲಾಭ ಗಳಿಸುತ್ತೀರಿ! ತಗಲುವ ಖರ್ಚು ಕೂಡ ಕಡಿಮೆ
ಲಿಫ್ಟ್ ಅಳತೆ ಎಷ್ಟು?
ನೀವು ಒಂದು ಬಿಲ್ಡಿಂಗ್ ಅಥವಾ ಒಂದು ಮನೆ ಕಟ್ಟುವಾಗ, ಲಿಫ್ಟ್ ಅಳವಡಿಸುವ ಪ್ಲಾನ್ ಹೊಂದಿದ್ದರೆ, ಅದಕ್ಕಾಗಿ ಮೊದಲೇ ನೀವು ಜಾಗವನ್ನು ಬಿಡಬಹುದು. 5×5 ಅಷ್ಟು ಜಾಗ ಲಿಫ್ಟ್ ಅಳವಡಿಸಲು ಬೇಕಾಗುತ್ತದೆ. ಹಾಗಾಗಿ ಇಷ್ಟು ಜಾಗ ಬಿಟ್ಟು, ನಿಮಗೆ ಅನುಕೂಲ ಆದಾಗ ಲಿಫ್ಟ್ ಅಳವಡಿಸಿಕೊಳ್ಳಬಹುದು.
ಈಗಾಗಲೇ ಬಿಲ್ಡಿಂಗ್ ಕಟ್ಟಿಸಿಬಿಟ್ಟಿದ್ದರೆ, 4×4 ಜಾಗದಲ್ಲಿ ಲಿಫ್ಟ್ ಅಳವಡಿಕೆ ಮಾಡುವ ಹಾಗೆ ಆಗುತ್ತದೆ..ಇನ್ನು ಲಿಫ್ಟ್ ಅಳವಡಿಕೆಗೆ ಟ್ರ್ಯಾಕ್ಸನ್ ಮತ್ತು ಹೈಡ್ರೋಲಿಕ್ ಎನ್ನುವ ಎರಡು ವಿಧವನ್ನು ಕಾಣಬಹುದು, ಇವುಗಳ ಪೈಕಿ ಟ್ರ್ಯಾಕ್ಸನ್ ನಿಮಗೆ ಸುರಕ್ಷತೆ ಕೊಡುತ್ತದೆ ಎಂದು ಹೇಳಲಾಗುತ್ತದೆ.
ಪೆಟ್ರೋಲ್ ಬೆಲೆ ಕೇವಲ ₹40 ರೂಪಾಯಿ ಇದ್ದಾಗ, Yamaha RX100 ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಸುದ್ದಿ
ಮನೆ ಲಿಫ್ಟ್ ಬೆಲೆ ಎಷ್ಟು?
ಮನೆ ಕಟ್ಟಿಸುವ ವೇಳೆ ಲಿಫ್ಟ್ ಗಾಗಿ ಜಾಗ ಬಿಟ್ಟುಬಿಡಿ, ನಂತರ ನೀವು ಲಿಫ್ಟ್ ಅಳವಡಿಸುವ ಕಂಪನಿಗೆ ಹೇಳಿದರೆ ಅವರು ಬಂದು ಅಳವಡಿಸುತ್ತಾರೆ. ಇದರಲ್ಲಿ 5 ರಿಂದ 6 ಜನ ಒಂದೇ ಸಾರಿ ಹೋಗಬಹುದಾದ ಲಿಫ್ಟ್ ನ ಬೆಲೆ ₹10 ಲಕ್ಷದವರೆಗು ಖರ್ಚಾಗುತ್ತದೆ.
3 ಫ್ಲೋರ್ ಮಿನಿ ಲಿಫ್ಟ್ ಗೆ ಸುಮಾರು 3 ಲಕ್ಷದವರೆಗೂ ಖರ್ಚಾಗುತ್ತದೆ. ನೀವು ಯಾವ ಕಂಪನಿಯ ಲಿಫ್ಟ್ ಸೆಲೆಕ್ಟ್ ಮಾಡುತ್ತೀರಾ, ಯಾವ ಡಿಸೈನ್ ಲಿಫ್ಟ್ ಸೆಲೆಕ್ಟ್ ಮಾಡುತ್ತೀರೋ, ಅದರ ಮೇಲೆ ಅವಲಂಬಿಸಿರುತ್ತದೆ.
Do you know how much it will cost to install an elevator in your house
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.