ಎಷ್ಟೇ ಓದಿದ್ದರೂ ಕೂಡ, ಓದಿಗೆ ತಕ್ಕಂಥ ಕೆಲಸಗಳು ಸಿಗುತ್ತಿಲ್ಲ. ಆ ರೀತಿ ಇರುವವರು ಸರಿಯಾದ ಕೆಲಸ ಸಿಗದ ಕಾರಣ ಬ್ಯುಸಿನೆಸ್ (Business) ಅಥವಾ ಉತ್ತಮ ಆದಾಯ ಗಳಿಸಲು ಸಾಧ್ಯ ಆಗುವಂಥ ಸ್ವಂತ ಕೆಲಸ ಮಾಡಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ (Business Idea) ತಿಳಿಸುತ್ತೇವೆ.
ಇದು ಕುರಿ, ಕೋಳಿ ಅಥವಾ ಮೇಕೆ ಸಾಕಾಣಿಕೆ (Goat and Sheep Farming) ಆಗಿದೆ. ಇದರಿಂದ ಒಳ್ಳೆಯ ಲಾಭ ಗಳಿಸಬಹುದು, ಇದು ಎಲ್ಲಾ ಸಮಯದಲ್ಲಿ ಕೂಡ ಬೇಡಿಕೆಯಲ್ಲಿ ಇರುವ ಕೆಲಸ ಆಗಿದೆ.
ಪೆಟ್ರೋಲ್ ಬೆಲೆ ಕೇವಲ ₹40 ರೂಪಾಯಿ ಇದ್ದಾಗ, Yamaha RX100 ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಸುದ್ದಿ
ಜಾಸ್ತಿ ಲಾಭ ತರುವ ಬ್ಯುಸಿನೆಸ್:
ಒಂದು ವೇಳೆ ನೀವು ಲಾಭದಾಯಕವಾದ ಸ್ವ ಉದ್ಯೋಗ ಮಾಡಬೇಕು ಎಂದುಕೊಂಡಿದ್ದರೆ, ಕುರಿ ಸಾಕಾಣಿಕೆ ಒಳ್ಳೆಯ ಆಯ್ಕೆ ಆಗಿದೆ. ಇದರಲ್ಲಿ ನಿಮಗೆ ತಗಲುವ ಖರ್ಚು ಕೂಡ ಬಹಳ ಕಡಿಮೆ, ಹಾಗೆಯೇ ಕುರಿಗಳನ್ನು ಸಾಕಾಣಿಕೆ ಮಾಡುವುದಕ್ಕೆ ಜಾಸ್ತಿ ಜಾಗ ಬೇಕಾಗುವುದಿಲ್ಲ.
ಇವುಗಳ ಪೋಷಣೆ ಮಾಡುವುದಕ್ಕೆ, ಆಹಾರ ಕೊಡುವುದಕ್ಕೆ ಕೂಡ ಜಾಸ್ತಿ ಹಣ ಬೇಕಾಗುವುದಿಲ್ಲ. ಹಾಗಾಗಿ ಈ ಬ್ಯುಸಿನೆಸ್ ಶುರು ಮಾಡಿದರೆ, ತಿಂಗಳಿಗೆ ₹1 ಲಕ್ಷದವರೆಗು ಹಣ ಗಳಿಕೆ ಮಾಡಬಹುದು.
ಕೃಷಿ ಮಾಡುವವರಿಗೆ ಕುರಿಗಳಿಗೆ ಬೇಕಾದ ಆಹಾರವನ್ನು ಒದಗಿಸುವುದು ಕಷ್ಟ ಆಗುವುದಿಲ್ಲ. ಈ ವೇಳೆ ನೀವು ಕುರಿ ಫಾರ್ಮ್ ಶುರು ಮಾಡಬಹುದು, ಇದರಲ್ಲಿ ನೀವು 100 ಕುರಿಗಳ ವರೆಗು ಸಾಕಾಣಿಕೆ ಮಾಡಬಹುದು.
ಹಾಗೆಯೇ ನೀವು ತಳಿಯ ಕುರಿಗಳನ್ನು ಸಾಕಬೇಕು ಎಂದು ಯೋಚಿಸಿದರೆ, ಕುಳ್ಳಗಿರುವ ತಳಿಯ ಕುರಿಗಳು ಹಾಗೂ ಹೈಬ್ರಿಡ್ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡುವುದು ಒಳ್ಳೆಯದು. ಇವುಗಳಿಗೆ ಬೇಡಿಕೆ ಕೂಡ ಜಾಸ್ತಿ ಇದ್ದು, ಕುರಿ ಸಾಕಾಣಿಕೆಗೆ ಸರ್ಕಾರದ ಕಡೆಯಿಂದ ಕೂಡ ಸಾಕಾಣಿಕೆ ಮಾಡುವುದಕ್ಕೆ ಸಹಾಯ ಸಿಗುತ್ತದೆ..
ಬಾಡಿಗೆ ಮನೆ ಓನರ್ ಗಳಿಗೆ ಇನ್ಮುಂದೆ ಹೊಸ ರೂಲ್ಸ್, ಏಕಾಏಕಿ ಕಠಿಣ ನಿಯಮ ಜಾರಿಗೆ ತಂದ ಸರ್ಕಾರ!
ಈ ರೀತಿಯಲ್ಲಿ ಕುರಿ ಸಾಕಾಣಿಕೆ ಮಾಡಿ:
ಒಂದು ವೇಳೆ ನಿಮಗೆ ಕುಇ ಸಾಕಾಣಿಕೆ ಮಾಡುವುದಕ್ಕೆ ಆಸಕ್ತಿ ಇದ್ದು, ಈ ಉದ್ಯಮ ಶುರು ಮಾಡಬೇಕು ಎಂದುಕೊಂಡರೆ, ಕುರಿ ಸಾಕಾಣಿಕೆ ಮಾಡುವುದಕ್ಕೆ ನೀವು ಮುಖ್ಯವಾಗಿ ಶೆಲ್ಟರ್ ಅನ್ನು ನಿರ್ಮಾಣ ಮಾಡಬೇಕಾಗುತ್ತದೆ.
ಹಾಗೆಯೇ ನಿಮ್ಮ ಊರಿನ ವಾತಾವರಣಕ್ಕೆ ಹೊಂದಿಕೊಳ್ಳುವ ಹಾಗೆ ಇರುವಂಥ ಕುರಿಗಳ ಸಾಕಾಣಿಕೆ ಮಾಡುವುದು ಉತ್ತಮವಾಗಿದೆ. ಕುರಿಗಳಿಗೆ ಕೊಡುವ ಆಹಾರದ ಬಗ್ಗೆ ಗಮನ ಕೊಡಬೇಕು, ಸೊಪ್ಪುಗಳು, ಒಣಗಿರುವ ಪದಾರ್ಥ, ಹಾಗೂ ಪೋಷಕಾಂಶ ಇರುವ ಆಹಾರವನ್ನು ಕೊಡಬೇಕು.
ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯ ಆಸ್ತಿ ಸಿಗಲ್ಲ! ಇಲ್ಲಿದೆ ಮಹತ್ವದ ಮಾಹಿತಿ
ಸರ್ಕಾರದಿಂದ ಸಿಗುತ್ತದೆ ಪ್ರೋತ್ಸಾಹ ಹಣ:
ಕೇಂದ್ರ ಸರ್ಕಾರವು ಈ ಒಂದು ಕೆಲಸ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಪ್ರೋತ್ಸಾಹ ಕೊಡುವುದಕ್ಕಾಗಿ, ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಹೆಸರು ರಾಷ್ಟ್ರೀಯ ಜಾನುವಾರು ಮಿಷನ್ ಆಗಿದ್ದು, ಈ ಯೋಜನೆಯ ಮೂಲಕ ಕುರಿ, ಕೋಳಿ, ಮೇಕೆ, ಪಶು ಸಾಕಾಣಿಕೆ ಮಾಡುವ ಹಳ್ಳಿಯ ಜನರಿಗೆ ಆರ್ಥಿಕವಾಗಿ ಪ್ರೋತ್ಸಾಹ ಕೊಡುತ್ತದೆ. ಎಲ್ಲರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.
If you do sheep farming in this way, you will earn best profits
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.