2017ರಲ್ಲಿ ಗೋಲ್ಡ್ ರೇಟ್ ಎಷ್ಟಿತ್ತು ಗೊತ್ತಾ? ಕೇವಲ 6 ವರ್ಷಕ್ಕೆ ಇಷ್ಟೊಂದು ದುಬಾರಿ ಆಯ್ತಾ ಚಿನ್ನದ ಬೆಲೆ

ಕೇವಲ 6 ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದುಬಾರಿ ಆಯ್ತಾ ಚಿನ್ನದ ಬೆಲೆ?

Bengaluru, Karnataka, India
Edited By: Satish Raj Goravigere

Gold Price : ಚಿನ್ನ ಅಥವಾ ಬಂಗಾರ ನಾವೆಲ್ಲರು ಕೂಡ ಹೆಚ್ಚಾಗಿ ಇಷ್ಟ ಪಡುವಂಥ ಲೋಹ ಎಂದರೆ ತಪ್ಪಲ್ಲ. ಚಿನ್ನಕ್ಕೆ ಎಲ್ಲಾ ಕಾಲದಲ್ಲಿ ಕೂಡ ಇಷ್ಟೇ ಬೇಡಿಕೆ ಇದೆ. ಚಿನ್ನವನ್ನು ಆಭರಣ ಅಥವಾ ಅಲಂಕಾರಿಕ ವಸ್ತುವಾಗಿ ಪರಿಗಣಿಸುವುದು ಮಾತ್ರವಲ್ಲ, ಹೂಡಿಕೆಯಾಗಿ ಪರಿಗಣಿಸಿದರೂ, ಚಿನ್ನ ಅತ್ಯುತ್ತಮವಾದ ಹೂಡಿಕೆಯ ಆಯ್ಕೆ ಆಗಿದೆ.

ಮಧ್ಯಮ ವರ್ಗದವರಿಗೆ ಚಿನ್ನ ಒಂದು ರೀತಿ ಕಷ್ಟಕ್ಕೆ ಸಹಾಯ ಆಗುವ ಆಯ್ಕೆ ಆಗಿರುತ್ತದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಚಿನ್ನ ಒಳ್ಳೆಯ ಲಾಭ ಕೂಡ ಕೊಡುತ್ತದೆ.

Do you know what was the gold rate in 2017

ಈ ರೀತಿ ಕುರಿ ಸಾಕಾಣಿಕೆ ಮಾಡಿದ್ದೇ ಆದ್ರೆ ಲಕ್ಷ ಲಕ್ಷ ಲಾಭ ಗಳಿಸುತ್ತೀರಿ! ತಗಲುವ ಖರ್ಚು ಕೂಡ ಕಡಿಮೆ

ಚಿನ್ನ ಉತ್ತಮವಾದ ಹೂಡಿಕೆ:

ಚಿನ್ನವನ್ನು ನೀವು ಹೂಡಿಕೆಯ ಹಾಗೆ ಖರೀದಿ ಮಾಡುವುದಕ್ಕೆ, ಆಭರಣವನ್ನೇ (Buy Gold Jewellery) ಖರೀದಿ ಮಾಡಬೇಕು ಎಂದು ಇಲ್ಲ. ಗೋಲ್ಡ್ ಬಿಸ್ಕೆಟ್ ಅಥವಾ ಗೋಲ್ಡ್ ಬಾಂಡ್ ಅನ್ನು ಕೂಡ ಖರೀದಿ ಮಾಡಬಹುದು. ಇವು ಕೂಡ ಒಳ್ಳೆಯ ಹೂಡಿಕೆಯ ಆಯ್ಕೆ ಆಗಿದೆ.

ಈಗಿನ ಬೆಲೆಗೆ ನೀವು ಖರೀದಿ ಮಾಡಿದರೂ ಸಹ, ಮುಂದೊಂದು ನಿಮಗೆ ಯಾವಾಗ ಅವಶ್ಯಕತೆ ಬರುತ್ತದೆ, ಆ ದಿನ ಚಿನ್ನದ ಬೆಲೆ ಎಷ್ಟಿರುತ್ತದೆಯೋ, ಆ ಬೆಲೆಗೆ ಚಿನ್ನದ ಬಾಂಡ್ ಇಂದ ಸಿಗುತ್ತದೆ..

ಚಿನ್ನದ ಬೆಲೆ ಈಗ ಎಷ್ಟಿದೆ? – Gold Price

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಜಾಸ್ತಿ ಆಗುತ್ತಲೇ ಇರುತ್ತದೆ. ಇದರಿಂದ ಚಿನ್ನ ಖರೀದಿ ಮಾಡುವವರಿಗೆ ಹೊರೆ ಅನ್ನಿಸುತ್ತಿದೆ. ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡಿದರೆ,

ಇನ್ನೇನು ಶ್ರಾವಣ ಮಾಸ ಬರುತ್ತಿದೆ. ಈನಡುವೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗುತ್ತಿರುವುದು ಗೊತ್ತೇ ಇದೆ. ಮದುವೆ, ಸಮಾರಂಭಗಳ ಕಾರಣ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆ ಹೆಚ್ಚುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 64,960 ರೂ. 24ಕ್ಯಾರೆಟ್ ಚಿನ್ನದ ಬೆಲೆ ರೂ.70,850.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.64,810 ಆಗಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ರೂ. 70,700.

ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.64,610 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ರೂ.70,480 ಆಗಿದೆ.

ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.64,810. 24ಕ್ಯಾರೆಟ್ ಚಿನ್ನದ ಬೆಲೆ ರೂ.70,700ರಲ್ಲಿ ವಹಿವಾಟಾಗುತ್ತಿದೆ.

ಪೆಟ್ರೋಲ್ ಬೆಲೆ ಕೇವಲ ₹40 ರೂಪಾಯಿ ಇದ್ದಾಗ, Yamaha RX100 ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಸುದ್ದಿ

ಚಿನ್ನದ ಬೆಲೆ2017 ರಲ್ಲಿ ಚಿನ್ನದ ಬೆಲೆ – gold rate in 2017

ಈಗೇನೋ ಚಿನ್ನದ ಬೆಲೆ ಈ ರೀತಿ ಇದೆ, ಇಷ್ಟು ದುಬಾರಿ ಆಗಿದೆ. ಇನ್ನು 2017ರಲ್ಲಿ ಸುಮಾರು 7 ವರ್ಷಗಳ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ವಿಷಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಗ ಬಹಳ ಕಡಿಮೆ ಬೆಲೆಗೆ ಚಿನ್ನ ಸಿಗುತ್ತಿತ್ತು, ಈಗ ಚಿನ್ನದ ಬೆಲೆ ಎರಡು ಪಟ್ಟಾಗಿದೆ ಎಂದರೂ ತಪ್ಪಲ್ಲ.

ಬಾಡಿಗೆ ಮನೆ ಓನರ್ ಗಳಿಗೆ ಇನ್ಮುಂದೆ ಹೊಸ ರೂಲ್ಸ್, ಏಕಾಏಕಿ ಕಠಿಣ ನಿಯಮ ಜಾರಿಗೆ ತಂದ ಸರ್ಕಾರ!

2017ರಲ್ಲಿ 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ ₹29,667 ರೂಪಾಯಿ ಆಗಿತ್ತು, ಇನ್ನು 2016ರಲ್ಲಿ 10 ಗ್ರಾಮ್ ಚಿನ್ನದ ಬೆಲೆ ₹28,623.50 ಇತ್ತು. ಆಗ ಮತ್ತು ಈಗ ನೋಡಿದರೆ ಎಷ್ಟು ವ್ಯತ್ಯಾಸ ಇದೆ ಎಂದು ಗೊತ್ತಾಗುತ್ತದೆ.

Do you know what was the gold rate in 2017